Free Stent: ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಿಹಿಸುದ್ದಿ ; ಹೃದಯ ರೋಗಿಗಳಿಗೆ ಉಚಿತ ಸ್ಟೆಂಟ್ ಅಳವಡಿಕೆ!!
Free stent for BPL card holders
Free Stent: ಬಡವರು, ಬಿಪಿಎಲ್ ಕಾರ್ಡ್ (bpl card) ಹೊಂದಿದ ಹೃದಯ ರೋಗಿಗಳಿಗೆ (heart patient) ಗುಡ್ ನ್ಯೂಸ್ ಇಲ್ಲಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 200 ಮಂದಿಗೆ ಉಚಿತ ಸ್ಟೆಂಟ್ (Free Stent) ಅಳವಡಿಸುವ ಚಿಂತನೆ ನಡೆಸಿದ್ದು, ಅದಕ್ಕಾಗಿ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ನಡೆಸಲಿದೆ.
ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಶನ್ ಹಾಗೂ ಅಮೆರಿಕದ ಮೆಡ್ ಟ್ರಾನಿಕ್ಸ್ ಎಸ್ಕಿನ್ಸನ್ ಸಂಸ್ಥೆಗಳ ಸಹಯೋಗದಲ್ಲಿ
ಉಚಿತ ಸ್ಟೆಂಟ್ ಅಳವಡಿಸುವ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಜೂನ್ 12 ರಿಂದ 18 ರವರೆಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಡೆಯಲಿದೆ. ಈ ಕಾರ್ಯಾಗಾರ ಜೂನ್ 12 ರಿಂದ 14ರ ವರೆಗೆ ಆಸ್ಪತ್ರೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ, ಜೂನ್ 15, 16 ರಂದು ಮೈಸೂರು ಶಾಖೆಯಲ್ಲಿ ಹಾಗೂ ಜೂನ್ 17, 18 ರಂದು ಕಲ್ಬುರ್ಗಿ ಶಾಖೆಯಲ್ಲಿ ನಡೆಯಲಿದೆ.
ಈ ಸೌಲಭ್ಯವನ್ನು ಬಡವರು, ಬಿಪಿಎಲ್ ಕುಟುಂಬದ ಹಿರಿಯ ನಾಗರೀಕರು ಹಾಗೂ ಈಗಾಗಲೇ ಆಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟ ರೋಗಿಗಳು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ರೋಗಿಗಳಿಗೆ ಉನ್ನತಮಟ್ಟದ ಸೈಂಟ್ ಗಳನ್ನು ಉಚಿತವಾಗಿ ಅಳವಡಿಸಲಾಗುತ್ತದೆ.
“ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ ಇರಬೇಕು. ನೀವು ಜೂನ್ 8 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು” ಎಂದು ಜಯದೇವ ಹೃದ್ರೋಗ ಸಂಸ್ಥೆಯ ಡಾ. ಸಿಎನ್ ಮಂಜುನಾಥ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480827888, 080 26944874
ಇದನ್ನೂ ಓದಿ:Vaibhavi Upadhyaya Death: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಮೃತ್ಯು!!