Home National Woman gave birth to five Children: ಒಂದೇ ಹೆರಿಗೆಯಲ್ಲಿ 5 ಹೆಣ್ಣು ಮಕ್ಕಳಿಗೆ ಜನ್ಮ...

Woman gave birth to five Children: ಒಂದೇ ಹೆರಿಗೆಯಲ್ಲಿ 5 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ, ಅಪರೂಪದಲ್ಲಿ ಅಪರೂಪ ಈ Quintuplets !

Woman gave birth to five Children
Image source: vistara news

Hindu neighbor gifts plot of land

Hindu neighbour gifts land to Muslim journalist

Woman gave birth to five Children: ವಿವಾಹಿತ ಹೆಣ್ಣಿಗೆ (marriaged women) ತಾಯ್ತನ ವರದಾನ ಎನ್ನುತ್ತಾರೆ. ಅದೆಷ್ಟೋ ನೋವು ತಿಂದು ಮತ್ತೊಂದು ಜೀವವನ್ನು ಭೂಮಿಗೆ ಕರೆತರುತ್ತಾಳೆ ಹೆಣ್ಣು. ಆ ಕ್ಷಣ ಮಗುವಿನ ಜನ್ಮದ ಜೊತೆಗೆ ತಾಯಿಗೂ ಮರುಜನ್ಮ ಸಿಕ್ಕಿರುತ್ತದೆ. ಅತೀವ ನೋವುಂಡರೂ ನಂತರ ಮಗುವಿನ ತುಂಟಾಟ, ನಗುಮುಖ ಕಂಡಾಗ ತಾಯಿಯ ನೋವು ಮಾಸಿ ಹೋಗುತ್ತದೆ.

ಎಲ್ಲರಿಗೂ ತಿಳಿದಿರುವ ಹಾಗೆ ಸಾಮಾನ್ಯವಾಗ ಓರ್ವ ಹೆಣ್ಣು ಅವಳಿ ಮಕ್ಕಳಿಗೆ, ತ್ರಿವಳಿ ಮಕ್ಕಳಿಗೆ ಜನ್ಮ ನೀಡುವ ವಿಷಯವನ್ನು ನೀವು ಕೇಳಿದ್ದೀರಿ. ಹಾಗೆನೇ ಒಂಭತ್ತು ಮಕ್ಕಳಿಗೆ ಜನ್ಮ ನೀಡಿದ ಸುದ್ದಿ ಕೂಡಾ ಕೇಳಿರಬಹುದು. ಆದರೆ, ಮಹಿಳೆಯೋರ್ವಳು ಏಕಕಾಲಕ್ಕೆ 5 ಹೆಣ್ಣುಮಕ್ಕಳಿಗೆ ಜನ್ಮ ನೀಡಿರುವ (Woman gave birth to five Children) ಘಟನೆ ಜಾರ್ಖಂಡ್​​ನ ರಾಂಚಿಯಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಜಾರ್ಖಂಡ್’ನಲ್ಲಿ ಇದು ಮೊದಲ ಪ್ರಕರಣವಾಗಿದೆ. ಸದ್ಯ ಆಕೆಯ‌ ಮಕ್ಕಳ ಫೋಟೋವನ್ನು ಆಸ್ಪತ್ರೆಯ ಸಿಬ್ಬಂದಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಇದೀಗ ವೈರಲ್ ಆಗಿದೆ.

ಜಾರ್ಖಂಡ್​​ನ ಛತ್ರಾ ಜಿಲ್ಲೆಯ ಇಟ್ಖೋರಿ​ ಹಳ್ಳಿಯ ಮಹಿಳೆಯು ಸೋಮವಾರ‌ (ನಿನ್ನೆ) ಒಂದೇ ಹೆರಿಗೆಯಲ್ಲಿ 5 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ಸದ್ಯ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಡಾ. ಶಶಿ ಬಾಲಾ ಸಿಂಗ್​ ಅವರ ನೇತೃತ್ವದಲ್ಲಿ ಈ ಹೆರಿಗೆ ಮಾಡಿಸಲಾಗಿದೆ.  ಇದೀಗ ಶಿಶುಗಳನ್ನು ಎನ್ಐಸಿಯುದಲ್ಲಿ ಇಡಲಾಗಿದೆ. ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯರು ಶಿಶುಗಳ ಕಾಳಜಿ ವಹಿಸುತ್ತಿದ್ದಾರೆ. ಎಂದು ಬರೆದು ರಿಮ್ಸ್ ಆಸ್ಪತ್ರೆಯು ಟ್ವಿಟರ್​ನಲ್ಲಿ ಐದೂ ಶಿಶುಗಳ ಫೋಟೋವನ್ನು ಹಂಚಿಕೊಂಡಿದೆ.

 

ಮಹಿಳೆಗೆ ಹಲವು ಆರೋಗ್ಯ ಸಮಸ್ಯೆ ಇತ್ತು. ಹಾಗಾಗಿ ಆಕೆ ಗರ್ಭ ಧರಿಸಿರಲಿಲ್ಲ. ಈ ಹಿನ್ನೆಲೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೂಡ ಪಡೆದಿದ್ದರು. ಆ ನಂತರ ಮಹಿಳೆ ಗರ್ಭ ಧರಿಸಿದ್ದು, ಇದೀಗ ಏಳು ತಿಂಗಳಿಗೇ ಹೆರಿಗೆಯಾಗಿದೆ. ಏಕಕಾಲದಲ್ಲಿ 5 ಶಿಶುಗಳಿಗೆ ಜನ್ಮ‌ ನೀಡಿದ್ದಾರೆ.  ಐವರು ಶಿಶುಗಳು ಆರೋಗ್ಯವಾಗಿದ್ದಾರೆ. ಆದರೆ, ಎಲ್ಲವುಗಳ ತೂಕವೂ ಕಡಿಮೆ ಇದೆ. ಇವೆಲ್ಲವೂ ಪ್ರಿಮೆಚ್ಯೂರ್​ ಶಿಶುಗಳಾಗಿದ್ದು ಹೆಚ್ಚಿನ ಕಾಳಜಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:SSLC ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ ; ಯಾವ ದಿನ ಪರೀಕ್ಷೆ ನಡೆಯಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ