

UPSC Exam Result: ಕೇಂದ್ರ ಲೋಕಸೇವಾ ಆಯೋಗ 2022ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ನಾಲ್ವರು ಯುವತಿಯರು ಅಗ್ರಸ್ಥಾನ ಗಳಿಸಿದ್ದಾರೆ.
ಇಂದು 2022ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯ ಫಲಿತಾಂಶವೂ (UPSC Exam Result) ಬಂದಿದ್ದು,ಇಶಿತಾ ಕಿಶೋರ್ ಎಐಆರ್ 1 ಸ್ಥಾನ ಪಡೆದರೆ, ಗರೀಮಾ ಲೋಹಿಯಾ, ಉಮಾ ಹರಥಿ ಎನ್ ಮತ್ತು ಸ್ಮೃತಿ ಮಿಶ್ರಾ ನಂತರದ ಸ್ಥಾನ ಗಳಿಸಿದ್ದಾರೆ.
ಯುಪಿಎಸ್ಸಿ ಸಿಎಸ್ಇ ಪ್ರಿಲಿಮಿನರಿ ಪರೀಕ್ಷೆಯನ್ನು ಜೂನ್ 5, 2022 ರಂದು ನಡೆಸಲಾಯಿತು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 22 ರಂದು ಬಿಡುಗಡೆ ಮಾಡಲಾಯಿತು. ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 16 ರಿಂದ 25 ರವರೆಗೆ ನಡೆಸಲಾಯಿತು ಮತ್ತು ಡಿಸೆಂಬರ್ 6 ರಂದು ಫಲಿತಾಂಶಗಳನ್ನು ಘೋಷಿಸಲಾಯಿತು. ಸಂದರ್ಶನಗಳು ಮೇ 18ರಂದು ಮುಕ್ತಾಯಗೊಂಡವು.
ಕೇಂದ್ರ ಲೋಕಸೇವಾ ಆಯೋಗ 2022ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 933 ಅಭ್ಯರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಎಂದು ವರದಿಯಾಗಿದೆ













