Aditya Singh Rajput dead: ಬಾತ್‌ರೂಮಿನಲ್ಲಿ ಶವವಾಗಿ ಪತ್ತೆಯಾದ ನಟ ಆದಿತ್ಯ ಸಿಂಗ್ ರಜಪೂತ್ ! ಅಷ್ಟಕ್ಕೂ ಸಾವಿಗೆ ಕಾರಣವೇನು?
Actor Aditya Singh Rajput found dead at his Mumbai apartment
Aditya Singh Rajput dead: ಹಿಂದಿ ನಟ(Hindi actor) ಆದಿತ್ಯ ಸಿಂಗ್ ರಜಪೂತ್(Aditya Singh Rajput dead) ಸಾವನ್ನಪ್ಪಿದ್ದಾರೆ. ತಮ್ಮ ನಿವಾಸದ ಬಾತ್‌ರೂಮ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದಾರೆ. ಡ್ರಗ್ಸ್ ಓವರ್‌ಡೋಸ್‌ನಿಂದಾಗಿ(Drugs Overdose) ಆದಿತ್ಯ ಸಿಂಗ್ ರಜಪೂತ್ ಸಾವನ್ನಪ್ಪಿದ್ದಾರೆ ಎಂಬ ಅಘಾತಕಾರಿ ಘಟನೆಯೊಂದು ವರದಿಯಾಗಿದೆ.
ಹೌದು, ಮೇ 22 ರಂದು ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿರುವ (Mumbai Apartment) ತಮ್ಮ ಮನೆಯ ಬಾತ್‌ರೂಮ್(Bhatroomlನಲ್ಲಿ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದಾರೆ.
ದೊರೆತ ಮಾಹಿತಿ ಪ್ರಕಾರ ಆದಿತ್ಯ ಸಿಂಗ್, ತಾನು ವಾಸಿಸುತ್ತಿದ್ದ ಮುಂಬೈನ 11ನೇ ಮಹಡಿಯ ವಾಶ್ ರೂಂನಲ್ಲಿ ಆತನ ಶವವಾಗಿ ಪತ್ತೆಯಾಗಿದ್ದು, ಇಂದು ಮಧ್ಯಾಹ್ನ ಅವನ ಸ್ನೇಹಿತ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಆದಿತ್ಯನನ್ನು, ಸೆಕ್ಯೂರಿಟಿಯ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದರೂ ಸಹ ಅಷ್ಟೋತ್ತಿಗೆ ಆತ ಮೃತಪಟ್ಟಿದ್ದ ಎಂದು ತಿಳಿಸಿದ್ದಾರೆ.
ಇನ್ನು, ನಟನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಮಿತಿಮೀರಿದ ಡ್ರಗ್ಸ್ ಸೇವನೆಯೆ ಇದಕ್ಕೆ ಕಾರಣ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಆದಿತ್ಯ ಸಾವಿನ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಆದಿತ್ಯ ಸಿಂಗ್ ರಜಪೂತ್ ಅವರ ಬಗ್ಗೆ ಸ್ನೇಹಿತ ಸಬ್ಯಸಾಚಿ ಸತ್ಪತಿ(Sabyasachi Satpati) ಮಾತನಾಡಿ ‘’ನಾನು ಆದಿತ್ಯ ಸಿಂಗ್ ರಜಪೂತ್‌ಗೆ ಫ್ರೆಂಡ್ ಆಗಿದ್ದೆ. ನಾನು ಒಡಿಶಾದಲ್ಲಿರುವ ಕಾರಣ ಕಳೆದ ಒಂದುವರೆ ವರ್ಷದಿಂದ ನಾನು ಅವನೊಂದಿಗೆ ಟಚ್‌ನಲ್ಲಿರಲಿಲ್ಲ. ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಆದಿತ್ಯ ಸಿಂಗ್ ಚೆನ್ನಾಗಿಯೇ ಇದ್ದ. ಕಿರುತೆರೆಯಲ್ಲೂ ಖ್ಯಾತಿ ಪಡೆದಿದ್ದ. ಡ್ರಗ್ಸ್ ಓವರ್‌ಡೋಸ್ ಅಂತ ಸುದ್ದಿಯಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಯುವಕರಿಗೆ ಸ್ಟ್ರೆಸ್ ಇರೋದು ಸಹಜ. ಆದರೆ, ಆದಿತ್ಯ ಶವ ಬಾತ್‌ರೂಮ್‌ನಲ್ಲಿ ಪತ್ತೆಯಾಗಿದೆ. ಇದು ತೀವ್ರ ದುಃಖಕರ ಸಂಗತಿ. ಇತ್ತೀಚಿಗಂತೂ ಅನೇಕ ಕಿರುತೆರೆ ತಾರೆಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’’ ಎಂದು ಸಬ್ಯಸಾಚಿ ಸತ್ಪತಿ ಕಳವಳ ವ್ಯಕ್ತಪಡಿಸಿದ್ದಾರೆ.
1990 ಆಗಸ್ಟ್ 19 ರಂದು ಉತ್ತರಾಖಂಡ್(Uttar Khand)ನಲ್ಲಿ ಜನಿಸಿದವರು ಆದಿತ್ಯ ಸಿಂಗ್ ರಜಪೂತ್. ‘ಆದಿ ಕಿಂಗ್’, ‘ಮಾಮ್ ಅಂಡ್ ಡ್ಯಾಡ್: ದಿ ಲೈಫ್‌ಲೈನ್ ಲವ್’, ‘ಲವ್ವರ್ಸ್’ ಸಿನಿಮಾಗಳಲ್ಲಿ ಆದಿತ್ಯ ಸಿಂಗ್ ರಜಪೂತ್ ನಟಿಸಿದ್ದಾರೆ.
ಇದನ್ನೂ ಓದಿ: M B Patil: ಮುಂದಿನ 5 ವರ್ಷವೂ ಸಿದ್ದರಾಮಯ್ಯನವರೇ ಕರ್ನಾಟಕದ ಸಿಎಂ: ಸಚಿವ ಎಂಬಿ ಪಾಟೀಲ್! ಕಾಂಗ್ರೆಸ್ ಪಾಳಯದಲ್ಲಿ ಹೊಸ ಬಾಂಬ್!