Home Karnataka State Politics Updates KC Narayana Gowda: ಮತದಾರರಿಗೆ ಹಣ ಹಂಚದ್ದೇ ಸೋಲಿಗೆ ಕಾರಣ, ಹಣ ವಾಪಸ್‌ ಕೊಡಿ...

KC Narayana Gowda: ಮತದಾರರಿಗೆ ಹಣ ಹಂಚದ್ದೇ ಸೋಲಿಗೆ ಕಾರಣ, ಹಣ ವಾಪಸ್‌ ಕೊಡಿ : ಮಾಜಿ ಸಚಿವ ಕೆಸಿ ನಾರಾಯಣಗೌಡ ಕಿಡಿ

KC Narayana Gowda
Image source: Wikipedia

Hindu neighbor gifts plot of land

Hindu neighbour gifts land to Muslim journalist

KC Narayana Gowda:  ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಮತದಾರರಿಗೆ ಹಂಚೋದಕ್ಕೆ ಕೊಟ್ಟ ಹಣವನ್ನು ಮತದಾರರಿಗೆ ನೀಡದೇ ಇಟ್ಟುಕೊಂಡಿದ್ದರೆ ವಾಪಸ್‌ ಕೊಡಿ ಎಂದು ಹೀನಾಯವಾಗಿ ಸೋಲುಕಂಡ ಬಿಜೆಪಿ ಅಭ್ಯರ್ಥಿ ಕೆ.ಸಿ ನಾರಾಯಣಗೌಡ (KC Narayana Gowda) ಮನವಿ ಮಾಡಿದ್ದಾರೆ

ಮಂಡ್ಯ ಜಿಲ್ಲೆಯಲ್ಲಿ ಸೋಮವಾರ ಕೃತಜ್ಞತಾ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ ನಾರಾಯಣಗೌಡ ಮಾತನಾಡಿದ ಅವರು, ಕರ್ನಾಟಕ ವಿಧಾನ ಸಭೆ ಚುನಾವಣೆಗಾಗಿ ಮತದಾರರಿಗೆ ಹಣ ಹಂಚೋದಕ್ಕೆ ಕೊಟ್ಟ ಹಣವನ್ನು ಅಪ್ತರೆ ಇಟ್ಟುಕೊಂಡು ಮೋಸ ಮಾಡಿದ್ದಾರೆ. ಮತದಾರರಿಗೆ ಹಣ ನೀಡದಿರೋದೆ ತನ್ನ ಸೋಲಿಗೆ ಕಾರಣವಾಗಿದೆ.

ಹಣದಿಂದ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆ ಬಳಕೆ ಮಾಡೋಣ ಎಂದಿದ್ದಾರೆ. ಈ ವಿಚಾರದ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ ಮಂಜು ಅವರು 79,844 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್ ದೇವರಾಜ್ ಅವರು 57,939 ಮತ ಪಡೆದಿದ್ದರೆ ಕೆಸಿ ನಾರಾಯಣಗೌಡ ಅವರು 37,793 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಈ ಕಾರಣದಿಂದಾಗಿ ಸೋತು ಬೇಸರಗೊಂಡ ಮಾಜಿ ಸಚಿವ ಕೆಸಿ ನಾರಾಯಣಗೌಡ ಕಿಡಿ ಕಾರಿದ್ದಾರೆ.

ಇದನ್ನೂ ಓದಿ:7th Pay Commission: ನೌಕರರ ಬೇಡಿಕೆ ಪ್ರಸ್ತಾಪಿಸಲು ಆಯೋಗದಿಂದ ಮೇ 26ಕ್ಕೆ ಮತ್ತೊಮ್ಮೆ ಅವಕಾಶ!