Abhishek Ambareesh-Aviva: ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಹಾಗೂ ಅವಿವಾ ಮದುವೆ ಡೇಟ್ ಫಿಕ್ಸ್! ಯಾವಾಗ..? ಎಲ್ಲಿ….?

Abhishek Ambareesh and Aviva wedding date fixed

Abhishek Ambareesh-Aviva: ಅಭಿಷೇಕ್ ಅಂಬರೀಶ್ (Abhishek Ambareesh-Aviva) ತಮ್ಮ ಬಹುಸಮಯದ ಗೆಳತಿ ಅವಿವಾ ಬಿದಪ್ಪ ಅವರೊಟ್ಟಿಗೆ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ(engagement) ಮಾಡಿಕೊಂಡಿದ್ದು ಕೆಲವೇ ದಿನದಲ್ಲಿ ಈ ಯುವಜೋಡಿ ವಿವಾಹ ಬಂಧಕ್ಕೆ ಒಳಗಾಗಲಿದೆ.

 

ಹೌದು, ರೆಬೆಲ್ ಸ್ಟಾರ್ ಅಂಬರೀಷ್(Rebel star ambrish) ಪುತ್ರ ಅಭಿಷೇಕ್ ಅಂಬರೀಷ್ ಅವರು ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ ಮನದರಿಸಿ ಜೊತೆ ಹಸೆಣೆ ಏರಲಿದ್ದಾರೆ. ಈಗಾಗಲೇ ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ (Sumalatha Ambareesh) ಅವರುಗಳು ಮದುವೆ ಆಮಂತ್ರಣ ಪತ್ರಿಕೆ ವಿತರಣೆ ಆರಂಭಿಸಿದ್ದು, ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ನಿತರೆ ದೆಹಲಿಯ ಗಣ್ಯ ರಾಜಕಾರಣಿಗಳಿಗೆ ಆಹ್ವಾನ ಪತ್ರಿಕೆ ವಿತರಿಸಿ ಮದುವೆಗೆ ಆಹ್ವಾನಿಸಿದ್ದಾರೆ.

ಅಂದಹಾಗೆ ಜೂನ್ 5ರಂದು ಅಭಿಷೇಕ್ ಅಂಬರೀಷ್ ಅವಿವ ಬಿದ್ದಪ್ಪಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಅದ್ದೂರಿ ಆರತಕ್ಷತೆ ಜರುಗಲಿದೆ. ಈಗಾಗಲೇ ಇಂಡಸ್ಟ್ರೀಯ ಗಣ್ಯರಿಗೆ ಆಮಂತ್ರಣ ನೀಡಲಾಗಿದೆ. ಒಂದೊಂದಾಗಿ ಮದುವೆ ಕಾರ್ಯಕ್ರಮಗಳು ಆರಂಭಗೊಂಡಿವೆ.

ಅಭಿಷೇಕ್ ಹಾಗೂ ಅವಿವಾ ವಿವಾಹಕ್ಕೆ ಸುಮಾರು 10,000 ಅತಿಥಿಗಳು ಆಗಮಿಸುವ ನಿರೀಕ್ಷೆ ಇದೆ. ಹಲವು ರಾಜ್ಯ ಹಾಗೂ ರಾಷ್ಟ್ರಮಟ್ಟದ ರಾಜಕೀಯ ಗಣ್ಯರು. ಸ್ಯಾಂಡಲ್​ವುಡ್ ಮಾತ್ರವೇ ಅಲ್ಲದೆ ಬಾಲಿವುಡ್, ತೆಲುಗು ಚಿತ್ರರಂಗ, ತಮಿಳು, ಮಲಯಾಳಂ ಚಿತ್ರರಂಗದಿಂದಲೂ ಸ್ಟಾರ್​ಗಳು ಆಗಮಿಸಿದ್ದಾರೆ. ಜೊತೆಗೆ ಅಭಿಷೇಕ್ ಹಾಗೂ ಸುಮಲತಾ ಅಂಬರೀಶ್ ಅವರ ಅಭಿಮಾನಿಗಳು ಸಹ ಮದುವೆಗೆ ಆಗಮಿಸಲಿದ್ದಾರೆ.

ಇನ್ನು ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ನಿಶ್ಚಿತಾರ್ಥವು ಡಿಸೆಂಬರ್ 11 ರಂದು ನಡೆದಿತ್ತು. ನಟ ಯಶ್ ಸೇರಿದಂತೆ ಸ್ಯಾಂಡಲ್​ವುಡ್​ನ ಹಲವು ಸೆಲೆಬ್ರಿಟಿಗಳು ಹಾಗೂ ಕೆಲವು ರಾಜಕಾರಣಿಗಳು ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದರು.

 

ಇದನ್ನು ಓದಿ: Bangalore: ಬೆಂಗಳೂರಲ್ಲಿ ಜ್ಯುವೆಲ್ಲರಿಗೆ ನುಗ್ಗಿದ ಮಳೆ ನೀರು: 2.5 ಕೋಟಿ ಮೌಲ್ಯದ ಆಭರಣಕ್ಕೆ ಹಾನಿ 

Leave A Reply

Your email address will not be published.