Papua New Guinea: ಶಿಷ್ಟಾಚಾರ ಬದಿಗೊತ್ತಿ, ಕಾಲು ಮುಟ್ಟಿ ನಮಸ್ಕರಿಸಿ ಮೋದಿಗೆ ಸ್ವಾಗತ ಕೋರಿದ ಪಪುವಾ ನ್ಯೂಗಿನಿಯಾ ಪ್ರಧಾನಿ! ಪ್ರಭಾವಿ ನಾಯಕನ ಆಗಮನಕ್ಕೆ ಇಡೀ ದೇಶವೇ ಪುಳಕ!

Papua New Guinea Prime Minister greeted Modi by touching his feet

Papua New Guinea: ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಜಪಾನ್‌ನಲ್ಲಿ ಜಿ7 ಶೃಂಗಸಭೆ((G&7) ಯಲ್ಲಿ ಪಾಲ್ಗೊಂಡ ಬಳಿಕ ಪಪುವಾ ನ್ಯೂಗಿನಿಯಾ ಹಾಗೂ ಆಸ್ಟ್ರೇಲಿಯಾ ದೇಶಗಳಿಗೆ ಭೇಟಿನೀಡಲಿದ್ದಾರೆ ಎಂಬ ಸುದ್ದಿಯನ್ನು ವಿದೇಶಾಂಗ ಸಚಿವಾಲಯ ತಿಳಿಸಿತ್ತು. ಅಂತೆಯೇ ಇದೀಗ ಮೋದಿಯವರು ಜಪಾನ್ ನಿಂದ ಪಪುವಾ ನ್ಯೂಗಿನಿಯಾಗೆ ಬಂದಿಳಿದಿದ್ದಾರೆ. ಸದ್ಯ ಭಾರತದ ಪ್ರಧಾನಿ ಮೋದಿ ಆಗಮನದಿಂದ ಪಪುವಾ ನ್ಯೂಗಿನಿಯಾ(Papua New Guinea) ಪುಟ್ಟ ದೇಶ ಪುಳಕಿತಗೊಂಡಿದೆ.

ಹೌದು, ಪ್ರದಾನಿಯವರು ಪಪುವಾ ವಿಮಾನದಿಂದ ಇಳಿದು ಬಂದ ಕೂಡಲೇ, ಅತ್ಯಂತ ಸಂತೋಷದಿಂದ ಸ್ವಾಗತಿಸಿದ ಅಲ್ಲಿನ ಪ್ರಧಾನಿ ಜೇಮ್ಸ್ ಮರಾಪೆ(James Marape), ತಮ್ಮ ಶಿಷ್ಟಾಚಾರ ಬದಿಗೊತ್ತಿ ಮೋದಿ ಕಾಲಿಗೆರಗಿದ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಅಂದಹಾಗೆ ಪ್ರಧಾನಿ ಮೋದಿ ವಿಮಾನ ಪಪುವಾ ನ್ಯೂಗಿನಿಯಾ ದೇಶದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ ಸೇರಿದಂತೆ ಪ್ರಮುಖ ನಾಯಕರು ಸ್ವಾಗತಕ್ಕಾಗಿ ಕಾದು ಕುಳಿತಿದ್ದರು. ಮೋದಿ ಆಗಮಿಸುತ್ತಿದ್ದಂತೆ ಆಲಂಗಿಸಿ ಆತ್ಮೀಯ ಸ್ವಾಗತ ಕೋರಿದ್ದಾರೆ. ಬಳಿಕ ಪ್ರಧಾನಿ ಮೋದಿ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಪ್ರಧಾನಿ ಮೋದಿ ಕಾಲಿಗೆ ಎರಗುತ್ತಿದ್ದಂತೆ ಮೋದಿ ತಡೆದಿದ್ದಾರೆ. ಆದರೆ ಜೇಮ್ಸ್ ಮರಾಪೆ ಆಶೀರ್ವಾದ ಪಡೆದಿದ್ದಾರೆ. ಜೇಮ್ಸ್ ಮರಾಪೆಯನ್ನು ಆತ್ಮೀಯವಾಗಿ ಆಲಿಂಗಿಸಿದ ಮೋದಿ ಶುಭಾಶಯ ವಿನಿಮಯ ಮಾಡಿದ್ದಾರೆ. ಅಲ್ಲದೆ ಮೋದಿ ಜನಪ್ರಿಯತೆ ಹಾಗೂ ಮೋದಿ ಭೇಟಿಯಿಂದ ಇಡೀ ದೇಶವೇ ಯಾವ ಪರಿ ಪುಳಕಿತಗೊಂಡಿದೆ ಅನ್ನೋದು ಸೂಚ್ಯವಾಗಿ ಹೇಳುತ್ತಿದೆ.

ಇನ್ನೂ ಮುಖ್ಯವಾದ ವಿಚಾರ ಅಂದ್ರೆ ಪಪುವಾ ನ್ಯೂಗಿನಿಯಾದಲ್ಲಿ ಸೂರ್ಯ ಮುಳುಗಿದ ಮೇಲೆ ಯಾವುದೇ ವಿದೇಶಿ ಆತಿಥಿಗಳನ್ನು ಸ್ವಾಗತಿಸುವುದಿಲ್ಲ. ಇದು ಪಪುವಾ ನ್ಯೂಗಿನಿಯಾ ದೇಶದ ಸಂಪ್ರದಾಯ. ಆದರೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ ಅನ್ನೋ ಕಾರಣಕ್ಕೆ ಈ ಎಲ್ಲಾ ಶಿಷ್ಟಾಚಾರವನ್ನು ಬದಿಗೊತ್ತಿ ಸ್ವಾಗತ ಕೋರಲಾಗಿದೆ. ಪ್ರಧಾನಿ ಮೋದಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತೇವೆ ಎಂದು ಪ್ರಧಾನಿ ಜೇಮ್ಸ್ ಮರಾಪೆ ಹೇಳಿದ್ದರು. ಇದರಂತೆ 19 ಸುತ್ತಿನ ಕುಶಾಲತೋಪು ಸಿಡಿಸಿ, ಅದ್ಧೂರಿಯಾಗಿ ಮೋದಿಯನ್ನು ಸ್ವಾಗತಿಸಲಾಗಿದೆ.

ಇದೇ ಮೊದಲ ಬಾರಿಗೆ ಪಪುವಾ ನ್ಯೂಗಿನಿಯಾ ಸೂರ್ಯಮುಳುಗಿದ ಮೇಲೆ ವಿದೇಶಿ ಅತಿಥಿಯನ್ನು ಬರಮಾಡಿಕೊಂಡಿದೆ. ಪ್ರಧಾನಿ ಮೋದಿ(PM Modi) ಕಾರಣದಿಂದ ಪಪುವಾ ನ್ಯೂಗಿನಿಯಾ ಎಲ್ಲಾ ಶಿಷ್ಟಾಚಾರ ಬದಿಗೊತ್ತಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದೆ. ಇಷ್ಟೇ ಅಲ್ಲ ಪಪುವಾ ನ್ಯೂಗಿನಿಯಾ ಪ್ರಧಾನಿ ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿಯನ್ನು ಸ್ವಾಗತಿಸಿದ್ದಾರೆ. ವೈರಲ್ ಆದ ವಿಡಿಯೋ ನೋಡಿ ಭಾರತೀಯರು, ಮೋದಿ ಅಭಿಮಾನಿಗಳು ಅತೀ ಸಂತೋಷ ಹೊರ ಹಾಕಿ ಹೆಮ್ಮೆ ಪಟ್ಟಿದ್ದಾರೆ.

 

 

ಇದನ್ನು ಓದಿ: Periods cramps: ಪೀರಿಯಡ್ಸ್​ ಟೈಮ್​ನಲ್ಲಿ ತುಂಬಾ ಸುಸ್ತಾ? ಈ ಟಿಪ್ಸ್​ ಫಾಲೋ ಮಾಡಿ 

Leave A Reply

Your email address will not be published.