D K Shivkumar: ವೇದಿಕೆಯಲ್ಲೇ ಸಚಿವ ಎಂ.ಬಿ ಪಾಟೀಲ್‌ಗೆ ಗದರಿ, ಎಚ್ಚರಿಕೆ ನೀಡಿದ ಡಿಕೆಶಿ – ಸಮಜಾಯಿಷಿ ಕೊಡಲು ಬಂದ್ರು ಕೇಳಲಿಲ್ಲ ಡಿಸಿಎಂ! ಮುಜುಗರಕ್ಕೆ ಒಳಗಾಗಿ ಸುಮ್ಮನೆ ಕುಳಿತ MBP

DCM D K Shivkumar scolded Minister MB Patil on stage

DCM D K Shivkumar: ನೂತನ ಸರ್ಕಾರದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಸಚಿವ, ಕಾಂಗ್ರೆಸ್ ನ ಪ್ರಭಾವಿ ನಾಯಕ ಎಂ.ಬಿ. ಪಾಟೀಲ್‌(MB Patil)ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗದರಿ, ಎಚ್ಚರಿಕೆ ಕೊಟ್ಟಿದ್ದಾರೆ.

ಹೌದು, ಬೆಂಗಳೂರಿನಲ್ಲಿ(Benglore) ಇಂದು ಭಾನುವಾರ ಕಾಂಗ್ರೆಸ್(Congress) ನೂತನ ಕಟ್ಟಡ ಇಂದಿರಾ ಭವನದಲ್ಲಿ(Indira Hall) ಮಾಜಿ ಪ್ರಧಾನಿ ರಾಜೀವ್ ಗಾಂಧಿ(Rajeev gandhi) ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ,(CM Siddaramaiah) ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್(DCM D K Shivkumar) ಹಾಗೂ ಸಚಿವ ಎಂ ಬಿ ಪಾಟೀಲ್ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್‌ ಭಾಷಣ ಮಾಡುತ್ತಿರುವಾಗ, ಸಿದ್ದರಾಮಯ್ಯ ಜೊತೆ ಎಂ.ಬಿ. ಪಾಟೀಲ್ ಮಾತನಾಡುತ್ತಿದ್ದರು.

ಭಾಷಣದ ನಡುವೆ ತಮಗೆ ಕಿರಿಕಿರಿ ಆದಂತಹ ಸಂದರ್ಭದಲ್ಲಿ ಡಿಕೆಶಿ ಅವರು ಸಿದ್ದು ಹಾಗೂ ಪಾಟೀಲ್ ಕಡೆ ತಿರುಗಿ, ಪಾಟೀಲ್ ಅವರಿಗೆ ಡೋಂಟ್ ಡಿಸ್ಟರ್ಪ್(Dont Distrib) ಎಂದು ಹೇಳುವ ಮೂಲಕ ಗರಂ ಆಗಿದ್ದಾರೆ. ಡಿಸಿಎಂ ಅವರು ಎಚ್ಚರಿಕೆ ನೀಡಿದ ಬಳಿಕ ಎಂ ಬಿ ಪಾಟೀಲ್ ಅವರು ಸಮಜಾಯಿಷಿ ಕೊಡಲು ಮುಂದಾಗಿದ್ದಾರೆ. ಆಗಲೂ ಗರಂ ಆದ ಶಿವಕುಮಾರ್ “ಏನೇ ಇರಲಿ ಮಾತನಾಡಬೇಡಿ. ಕೆಲವೊಂದು ವಿಚಾರ ಹೇಳುತ್ತಿದ್ದೇನೆ ಕೇಳಿ” ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಈ ವೇಳೆ ಅಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ ಸುಮ್ಮನೆ ಇದ್ದರು.

ಬಳಿಕ ಮಾತು ಮುಂದುವರಿಸಿದ ಡಿಕೆಶಿ, ನನ್ನ ಬಳಿ ಬಂದು ಸಿದ್ದರಾಮಯ್ಯ ಹಾಗಂದ್ರು, ಎಂಬಿಪಿ ಹೀಗಂದ್ರು ಅಂತಾ ಚಾಡಿ ಹೇಳಿ ತಂದು ಹಾಕಬೇಡಿ. ಮೊದಲು ಬೂತ್ ಮಟ್ಟದಲ್ಲಿ ಬಲಿಷ್ಠರಾಗಿ ಸಿದ್ದರಾಮಯ್ಯ ಮನೆ ನನ್ನ ಮನೆ ಸುತ್ತುತ್ತಾ ಇರಬೇಡಿ. ನಿಮ್ಮ ಗುರಿ ಮುಂದಿನ ಚುನಾವಣೆಗೆ ನಿಮ್ಮ ಬೂತ್ ಸಿದ್ದಪಡಿಸಿ. ಸಂಸತ್‌ಗೂ ವಿಧಾನಸಭೆಗೂ ವ್ಯತ್ಯಾಸ ಇರುತ್ತೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಅಂದಹಾಗೆ ಇದಕ್ಕೂ ಮೊದಲು ಸಿದ್ದರಾಮಯ್ಯ ಅವರು, ತಾವು ಮುಖ್ಯಮಂತ್ರಿ ಆದ ಬಳಿಕ ತಮ್ಮ ಶ್ರೀಮತಿ ಪಾರ್ವತಿ ಅವರು Rado ವಾಚ್ ಒಂದನ್ನು ನೀಡಿದ್ದು, ಅದನ್ನು ಸಚಿವ ಎಂಬಿ ಪಾಟೀಲ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ತೋರಿಸಿ ಸಂತೋಷ ಪಟ್ಟಿದ್ದಾರೆ.

 

ಇದನ್ನು ಓದಿ: Perfume: ನಿಮ್ಮ ಸುಗಂಧ ದ್ರವ್ಯವು ಹೆಚ್ಚು ಕಾಲ ಉಳಿಯಲು ಈ 6 ಸಲಹೆಗಳನ್ನು ಅನುಸರಿಸಿ 

Leave A Reply

Your email address will not be published.