H R Ranganath: ಹಾಲಿವುಡ್ ಗೆ ಎಂಟ್ರಿ ಕೊಟ್ಟ ನಮ್ಮ ಪಬ್ಲಿಕ್ ಟಿವಿ ರಂಗನಾಥ್ !

How did public TV head HR Ranganath enter Hollywood

H R Ranganath: ನಿನ್ನೆಯಿಂದಲೂ ಸೋಷಿಯಲ್ ಮೀಡಿಯಾಗಳಲ್ಲಿ ಹಾಲಿವುಡ್ (Hollywood) ‘ಫಾಸ್ಟ್ & ಫ್ಯೂರಿಯಸ್ 10’ ಸಿನಿಮಾದಲ್ಲಿ ಪಬ್ಲಿಕ್ ಟಿವಿ (Public TV) ಮುಖ್ಯಸ್ಥ ಹೆಚ್.ಆರ್. ರಂಗನಾಥ್(H R Ranganath) ನಟಿಸಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡಿ ಒಂದು ರೀತಿಯಲ್ಲಿ ಟ್ರೆಂಡ್(Trend) ಕ್ರಿಯೆಟ್ ಮಾಡಿದೆ. ಆದರೀಗ ಎಲ್ಲರಿಗೂ ಕಾಡುತ್ತಿರೋ ಪ್ರಶ್ನೆ ಅಂದರೆ ಹಾಲಿವುಡ್ ಸಿನಿಮಾಗೂ ಹಾಗೂ ಪಬ್ಲಿಕ್ ಟಿವಿ ರಂಗಣ್ಣನಿಗೂ ಎಲ್ಲಿಂದೆಲ್ಲಿಂದ ಸಂಬಂಧ ಅನ್ನೋದು. ಇದು ನಿಜವಾಗಿಯೂ ಸಾಧ್ಯನಾ? ಖಂಡಿತವಾಗಿಯೂ ನಡೆದಿದೆಯಾ? ಎಂದು. ಆದರೀಗ ಈ ಎಲ್ಲಾ ಪ್ರಶ್ನೆಗಳಿಗೆ ಪಬ್ಲಿಕ್ ಟಿವಿ ರಂಗಣ್ಣನವರೇ ಉತ್ತರಿಸಿದ್ದಾರೆ.

ಹೌದು, ಹಾಲಿವುಡ್(Hollywood) ಟೀಮ್ ಬೆಂಗಳೂರಿಗೆ(Bangalore) ಬಂದಿತ್ತಾ? ಅಥವಾ ಪಬ್ಲಿಕ್ ಟಿವಿಯಲ್ಲಿ ಬಳಕೆಯಾದ ವಿಡಿಯೋ ತುಂಡನ್ನೇ ಸಿನಿಮಾದಲ್ಲಿ ಸೇರಿಸಿದರಾ? ‘ಫಾಸ್ಟ್ & ಫ್ಯೂರಿಯಸ್ 10’ ತಂಡ ಹೆಚ್.ಆರ್.ರಂಗನಾಥ ಅವರನ್ನು ಭೇಟಿ ಮಾಡಿತ್ತಾ? ಈ ದೃಶ್ಯ ಶೂಟಿಂಗ್ ಆಗಿದ್ದು ಎಲ್ಲಿ? ಇಂಥದ್ದೊಂದು ಅವಕಾಶ ಅವರನ್ನು ಹುಡುಕಿಕೊಂಡು ಬಂದಿದ್ದು ಹೇಗೆ? ಹಾಲಿವುಡ್ ನಲ್ಲಿ ಹೆಚ್.ಆರ್ ರಂಗನಾಥ್ (HR Ranganath) ಅವರ ಪರಿಚಯಸ್ಥರು ಇದ್ದಾರಾ? ಹೀಗೆ ನಾನಾ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಆದರೆ ಇದು ಸತ್ಯ! ಯಸ್, ಪಬ್ಲಿಕ್ ಟಿವಿ ರಂಗನಾಥ್ ಅವರು ಹಾಲಿವುಡ್ ಮೂವಿಯಲ್ಲಿ ನಟಿಸಿದ್ದಾರೆ. ಅಂದಹಾಗೆ ಫಾಸ್ಟ್ & ಫ್ಯೂರಿಯಸ್ 10’ (Fast & Furious 10) ಸಿನಿಮಾ ತಂಡ ಬೆಂಗಳೂರಿಗೇ ಬಂದು, ಪಬ್ಲಿಕ್ ಟಿವಿ ಆಫೀಸಿನಲ್ಲೇ ಚಿತ್ರೀಕರಣ ಮಾಡಿದೆ. ಮೂರುವರೆ ತಿಂಗಳ ಹಿಂದೆ ನಡೆದ ಚಿತ್ರೀಕರಣದಲ್ಲಿ ಹೆಚ್.ಆರ್. ರಂಗನಾಥ್ ಅವರು ಭಾಗಿಯಾಗಿ, ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ. ಸಿನಿಮಾದ ಕ್ಯಾಮೆರಾಮನ್ ಹಾಗೂ ಹಲವು ತಾಂತ್ರಿಕ ತಂಡ ಬೆಂಗಳೂರಿಗೆ ಆಗಮಿಸಿ ಶೂಟಿಂಗ್ ಮಾಡಿದೆ!

ಈ ವಿಚಾರವಾಗಿ ಕೊನೆಗೂ ರಂಗನಾಥ್(Ranganath) ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ರಂಗಣ್ಣ “ಮೂರುವರೆ ತಿಂಗಳ ಹಿಂದೆ ಆ ಚಿತ್ರತಂಡಕ್ಕೆ ಪರಿಚಯವಿದ್ದ ನನ್ನ ಗೆಳೆಯರೊಬ್ಬರ ಮೂಲಕ ಸಿನಿಮಾದಲ್ಲಿ ನಟಿಸುವಂತೆ ಆಹ್ವಾನ ಬಂತು. ನನ್ನ ವೃತ್ತಿಗೆ ಸಂಬಂಧಿಸಿದ ಪಾತ್ರ ಅದಾಗಿದ್ದರಿಂದ ಒಪ್ಪಿಕೊಂಡೆ. ನಮ್ಮದೇ ಆಫೀಸಿನಲ್ಲಿ ಚಿತ್ರೀಕರಣ ನಡೆಯಿತು’ ಎಂದು ಹೇಳಿದ್ದಾರೆ.

ಇನ್ನು ಮುಖ್ಯವಾದ ವಿಚಾರ ಅಂದ್ರೆ ಹಾಲಿವುಡ್ ಗೆ ಎಂಟ್ರಿ ಕೊಟ್ಟ ಮೈಸೂರಿನ ಎರಡನೇ ಸೆಲೆಬ್ರಿಟಿ ಅನ್ನೋ ಹೆಗ್ಗಳಿಕೆ ಹೆಚ್.ಆರ್ ರಂಗನಾಥ್ ಅವರದ್ದಾಗಿದೆ. ಇದಕ್ಕೂ ಮೊದಲು ಬಾಬು ದಸ್ತಗೀರ್ ಎನ್ನುವವರು ಎಂಟು ದಶಕಗಳ ಹಿಂದೆ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು.

ಅಂದಹಾಗೆ ದಸ್ತಗೀರ್ ಎಂಟ್ರಿ ಕೂಡ ಅಷ್ಟೇ ಕುತೂಹಲ ಹಾಗೂ ರೋಮಾಂಚನ ಮೂಡಿಸುತ್ತದೆ. ಹೌದು, ಆ ಘಟನೆಯೇ ಒಂದು ವಿಶೇಷವಾಗಿದೆ. ಅದು ಬರೋಬ್ಬರಿ 84 ವರ್ಷಗಳ ಹಿಂದಿನ ಸ್ಟೋರಿ. ಆನೆಗಳ ಬಗ್ಗೆ ಚಿತ್ರ ನಿರ್ಮಿಸುತ್ತಿದ್ದ ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ ರಾಬರ್ಟ್ ಫ್ಲಾಹರ್ಟಿ ಮೈಸೂರಿಗೆ ಬಂದಿರುತ್ತಾರೆ. ಆಗ ಇವರ ಕಣ್ಣಿಗೆ ಬಿದ್ದ ಹುಡುಗನೇ ಸಾಬು ದಸ್ತಗೀರ್(Dasthager). ಕಿಪ್ಲಿಂಗ್ ಕೃತಿಯನ್ನು ಆಧರಿಸಿ ತಯಾರಾಗುತ್ತಿದ್ದ ಎಲಿಫೆಂಟ್ ಬಾಯ್ ಚಿತ್ರಕ್ಕೆ ಈ ಹುಡುಗನೇ ಸೂಕ್ತ ನಟ ಎಂದೆನಿಸಿ, ಅಮೆರಿಕಾಗೆ ಕರೆದೊಯ್ಯುತ್ತಾರೆ ಫಾಹರ್ಟಿ. ಆಗ ಸಾಬುಗೆ ಕೇವಲ 13 ವರ್ಷ. ಎಲಿಫೆಂಟ್ ಬಾಯ್ ಚಿತ್ರದ ಮೂಲಕ ಸಾಬು ಜಗತ್ತಿನಾದ್ಯಂತ ಸುದ್ದಿಯಾದ.

ಮೈಸೂರಿನ(Mysore) ಕುಗ್ರಾಮ ಕಾರಾಪುರ(Karapura) ದಲ್ಲಿ. ಹುಟ್ಟಿದ ಈ ದಸ್ತಗೀರ್ ಬಾಬು ಎಲಿಫೆಂಟ್ ಬಾಯ್ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಸಾಲು ಸಾಲು ಚಿತ್ರಗಳ ಅವಕಾಶ ಪಡೆದ. ಜಂಗಲ್ ಬುಕ್, ದ ಮ್ಯಾನ್ ಈಟರ್ಸ್ ಆಫ್ ಕುಮೊನ್, ಥೀಫ್ ಆಫ್ ಬಾಗ್ದಾದ್, ಅರೇಬಿಯನ್ ನೈಟ್ಸ್, ಎ ಟೈಗರ್ ವಾಕ್ಸ್ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಸಾಬು ನಟಿಸಿದರು. ಅವರಿಗೆ 1944ರಲ್ಲಿ ಅಮೆರಿಕ ಪೌರತ್ವವನ್ನೂ ನೀಡಿತು. ಹಾಗಾಗಿ ಭಾರತಕ್ಕೆ ವಾಪಸ್ಸಾಗದೇ ಅಲ್ಲಿ ಉಳಿದುಕೊಂಡು ಬಿಟ್ಟರು ಸಾಬು ದಸ್ತಗೀರ್. ಸದ್ಯ ಇದೀಗ ನಮ್ಮ ಪಬ್ಲಿಕ್ ಟಿವಿ ರಂಗಣ್ಣನಿಗೂ ಈ ಅವಕಾಶ ಸಿಕ್ಕಿದ್ದು ಕನ್ನಡಿಗರಿಗೆ ಹೆಮ್ಮೆ ಅನಿಸಿದೆ.

ಕೃಪೆ: ಪಬ್ಲಿಕ್ ಟಿವಿ

ಇದನ್ನೂ ಓದಿ:Rajanikanth: ಸಿನಿ ರಂಗಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಗುಡ್ ಬೈ? ನಟನೆಯಿಂದ ನಿವೃತ್ತಿ ಪಡೆಯಲಿದ್ದಾರಾ ತಲೈವಾ?

Leave A Reply

Your email address will not be published.