Siddaramaiah: ಶುದ್ಧ ಹಸ್ತದ, ಅಹಿಂದ ನಾಯಕ ಸಿದ್ದರಾಮಯ್ಯ, ಮಾಸ್ ಲೀಡರ್ ಆದದ್ದು ಹೇಗೆ? ಇಲ್ಲಿದೆ ನೋಡಿ ಸಿದ್ದು ಬದುಕಿನ ಒಂದು ಝಲಕ್!
Siddaramaiah life and political career story
Siddaramaiah: ರಾಜ್ಯ ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ(Siddaramaiah) ಕೂಡ ಒಬ್ಬರು. ನೇರ ನಡೆನುಡಿಗಳಿಂದ, ಪ್ರೀತಿಯ ಗದರಿಕೆಯಿಂದ ನಾಡಿನ ಜನರ ಪ್ರೀತಿ ಗಳಿಸಿ, ಭರ್ತಿ 5 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ ಸಿದ್ಧು ಉಚಿತ ‘ಭಾಗ್ಯ’ಗಳ ಸರದಾರ ಕೂಡ ಹೌದು. ಹೀಗಾಗಿಯೇ ಕರ್ನಾಟಕದ ಜನ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದದ್ದು, ಸದ್ಯ ಸಿದ್ದು ಮುಖ್ಯಮಂತ್ರಿ(CM) ಆದಾಗ ಎಲ್ಲೆಲ್ಲೂ ಸಂಭ್ರಮಿಸಿದ್ದು.
2023ನೇ ವಿಧಾನಸಭೆ ಚುನಾವಣೆಯಲ್ಲಿ(Assembly election) ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಅವರ ಶ್ರಮ ತುಂಬಾನೇ ಇದೆ. ನಿರಂತರವಾಗಿ ದಣಿವರಿಯದ ಪ್ರಚಾರ, ಅಬ್ಬರದ ಭಾಷಣದ ಮೂಲಕ ಈ ವಯಸ್ಸಿನಲ್ಲೂ ತನ್ನ ಚಾರ್ಮ್ ಏನೆಂಬುದನ್ನು ಸಿದ್ದು ತೋರಿಸಿದ್ದಾರೆ. ಅಲ್ಲದೆ ದೇವರಾಜ ಅರಸ್(Devraj aras) ಅವರನ್ನು ಬಿಟ್ಟರೆ 5 ವರ್ಷ ಪೂರ್ಣವಾಗಿ ಅಧಿಕಾರ ಪೂರೈಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಎಂಬ ಹೆಗ್ಗಳಿಕೆ ಕೂಡ ಇವರದ್ದು. ಅಂತೂ ನಾಡಿನ ಜನ ನಿರೀಕ್ಷಿಸಿದಂತೆ, ಸಿದ್ದು ಮತ್ತೊಮ್ಮೆ ಸಿಎಂ ಆಗಿದ್ದಾರೆ. ಇದೇ ಶನಿವಾರ ಕರ್ನಾಟಕದ 24ನೇ ಮುಖ್ಯಮಂತ್ರಿ ಆಗಿ ಪ್ರಮಾಣವಚನವನ್ನೂ ಸ್ವೀಕರಿಸಲಿದ್ದಾರೆ.
ಅಂದಹಾಗೆ ಇಷ್ಟೆಲ್ಲಾ ರಾಜಕೀಯ ವರ್ಚಸ್ಸು ಹೊಂದಿರೋ ಸಿದ್ದರಾಮಯ್ಯ (Siddaramaiah)ಅವರ ಜೀವನ ಹೇಗಿತ್ತು? ಇದುವರೆಗೂ ಅವರು ನಡೆದು ಬಂದು ದಾರಿ ಎಂತಹದ್ದು? ಈವರೆಗೆ ಅವರು ಯಾವ ಯಾವ ಸ್ಥಾನಗಳನ್ನು ಅಲಂಕರಿಸಿದ್ದರು? ನಾಡಿನ ಜನರ ಪ್ರೀತಿ ಗಳಿಸಲು ಕಾರಣವಾದ ಅಂಶಗಳಾವು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಮೈಸೂರಿನ(Mysore) ವರುಣಾ(Varuna) ಹೋಬಳಿಯ ಸಿದ್ಧರಾಮನಹುಂಡಿ(Siddaramana Hundi) ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹುಟ್ಟೂರು. 1948 ರ ಆಗಸ್ಟ್ 12 ರಂದು ಅವರು ಸಿದ್ಧರಾಮೇಗೌಡ-ಬೋರಮ್ಮ ದಂಪತಿಯ ಪುತ್ರರಾಗಿ ಜನಿಸಿದರು. 10ನೇ ವಯಸ್ಸಿನವರೆಗೆ ಶಾಲೆ ಮೆಟ್ಟಿಲು ತುಳಿಯದ ಇವರು, ನೇರವಾಗಿ ಐದನೇ ತರಗತಿಗೆ ವಿದ್ಯಾಭ್ಯಾಸ ಮಾಡಿದರು. ಹೀಗೆ ಹುಟ್ಟೂರಿನಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣ ಪೂರೈಸಿದರು. ಬಿಎಸ್‌ಸಿ ಪೂರ್ಣಗೊಳಿಸಿದ ನಂತರ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದರು. ಬಳಿಕ ಹಲವು ವರ್ಷಗಳ ಕಾಲ ವಕೀಲಿಕೆ ವೃತ್ತಿಯನ್ನು ಹಿರಿಯರೊಬ್ಬರ ಬಳಿ ಪ್ರ್ಯಾಕ್ಟೀಸ್ ಮಾಡಿದರು.
ನಂತರ ರಾಜಕೀಯ ರಂಗ ಪ್ರವೇಶಿಸಿದ ಇವರು ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ(Chamundeshwari) ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದರು. ಪಶುಸಂಗೋಪನೆ ಸಚಿವರಾಗಿ ಮೊದಲ ಬಾರಿಗೆ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಅದಾದ ನಂತರ ಸಿದ್ದರಾಮಯ್ಯನವರ ಅದೃಷ್ಟ ಕೈ ಕೊಟ್ಟಿತ್ತು. ಕಾರಣ ಆಗ ಕಾಂಗ್ರೆಸ್ ಅಲೆ ಎಲ್ಲೆಡೆ ಆರಂಭವಾಗಿತ್ತು.
ಕಾಂಗ್ರೆಸ್(Congress) ಅಲೆ ಆರಂಭದ ನಂತರ ಕಾರಣಾಂತರಗಳಿಂದ ಜನತಾ ಪಕ್ಷ ಇಬ್ಬಾಗ ಆಯಿತು. ಈ ವೇಳೆ ಸಿದ್ದರಾಮಯ್ಯ ಜನತಾದಳ (ಜಾತ್ಯಾತೀತ) ಪಕ್ಷ ಸೇರಿದರು. ಇದಾದ ಬಳಿಕ ಮತ್ತೆ ಗೆಲುವಿನ ಕುದುರೆಯಂತಾದ ಸಿದ್ದರಾಮಯ್ಯನವರು 1994 ರಲ್ಲಿ ಚುನಾವನಣೆಯಲ್ಲಿ ಗೆದ್ದು ಹಣಕಾಸು ಖಾತೆ ಸಚಿವರೂ ಆಗಿ ಅನುಭವ ಪಡೆದರು. ಚುನಾವಣೆ ವೇಳೆ ಜನತಾ ದಳ ಎರಡು (1999) ಭಾಗವಾಯಿತು. ಅದಾದ ವರ್ಷ ಚುನಾವಣೆಯಲ್ಲಿ ಸೋಲು ಕಂಡರು.
2004ರಲ್ಲಿ ಸಿದ್ದರಾಮಯ್ಯನವರು ಜಾತ್ಯತೀತ ಜನತಾದಳದ ಮುಖ್ಯಮಂತ್ರಿ(CM) ಅಭ್ಯರ್ಥಿಯಾಗಿ ಬಿಂಬಿತರಾದರೂ ಸಹ ಅಂದು ಎದುರಾದ ಅತಂತ್ರ ವಿಧಾನಸಭೆ ಸ್ಥಿತಿಯಿಂದಾಗಿ ಕಾಂಗ್ರೆಸ್ ಜತೆಗೂಡಿ ಜನತಾದಳಿ ಸರ್ಕಾರ ರಚನೆ ಮಾಡಿತು. ಅಂದು ಅವರು ಎರಡನೇ ಬಾರಿ ಉಪಮುಖ್ಯಮಂತ್ರಿ(DCM) ಮತ್ತು ಹಣಕಾಸು ಸಚಿವರಾದರು.
ನಂತರ 2004-05ರ ಕಾಲಘಟ್ಟದಲ್ಲಿ ರಾಜ್ಯದ ಮತದಾರರಲ್ಲಿ ಅಹಿಂದ ಭಾವ ಜಾಗೃತಗೊಳಿಸುವ ಸಮಾವೇಶ ನಡೆಸಲು ಸಿದ್ದರಾಮಯ್ಯ ಮುಂದಾದರು. ಇದಕ್ಕೆ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು(H D Dhevegowda) ವಿರೋಧ ವ್ಯಕ್ತಪಡಿಸಿದರು. ನಂತರ ಸಿದ್ದರಾಮಯ್ಯರನ್ನು ಜನತಾದಳಿದಿಂದ ಹೊರದಬ್ಬಲಾಯಿತು. ಆಲ್ ಇಂಡಿಯಾ ಪ್ರೋಗ್ರೆಸಿವ್ ಜನತಾ ದಳ ಸೇರಿದ್ದರು. ಅಲ್ಲಿ ಒಂದು ವರ್ಷ ಇದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿದರು.
ಇದಾದ ಮೇಲೆ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಅವರು 2008ರಲ್ಲಿ ಗೆಲುವು ಸಾಧಿಸಿದರು. ಬಳಿಕ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಮುಖ್ಯಮಂತ್ರಿ ಅಭ್ಯರ್ಥಿಯಾದರು. ರಾಜ್ಯದ 22ನೇ ಮುಖ್ಯಮಂತ್ರಿಯೂ ಆದರು. ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುತ್ತಲೇ ಅನ್ನ ಭಾಗ್ಯ ಯೋಜನೆ ಘೋಷಿಸಿದರು. ನಂತರ ಶಾದಿ ಭಾಗ್ಯ ಸೇರಿ ಹಲವು ಭಾಗ್ಯಗಳ ಯೋಜನೆಗಳನ್ನು ಜಾರಿಗೊಳಿಸಿದರು. ಆದರೆ ಈ ಯೋಜನೆಗಳಾವುದೂ 2018ರ ಚುನಾವಣೆಯಲ್ಲಿ ಅವರ ಕೈ ಹಿಡಿಯಲಿಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಬಲ 79ಕ್ಕೆ ಕುಸಿಯಿತು. ಇಷ್ಟಾಗ್ಯೂ, ಜೆಡಿಎಸ್ ಜತೆಗೆ ಮೈತ್ರಿ ಸರ್ಕಾರ ರಚನೆ ಆಯಿತು. ಆಗ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಆಗುವುದು ಸಾಧ್ಯವಾಗಲಿಲ್ಲ. ಜೆಡಿಎಸ್(JDS) ನಾಯಕ ಕುಮಾರಸ್ವಾಮಿ(Kumaraswamy)ಮುಖ್ಯಮಂತ್ರಿಯಾದರು. ಸದ್ಯ ಇದೀಗ 2023ರ ಚುನಾವಣೆಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವಿಗೆ ಮೂಲ ಕಾರಣೀಕರ್ತರಾಗಿ, ಬಹಳ ಪೈಪೋಟಿ ನಡುವೆ ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಅಂದಹಾಗೆ ಸಿದ್ದರಾಮಯ್ಯ ಇದುವರೆಗೆ ಒಟ್ಟು 10 ಚುನಾವಣೆ ಎದುರಿಸಿದ್ದಾರೆ. 10ನೇ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಒಂದರಲ್ಲಿ ಸೋಲು ಅನುಭವಿಸಿದವರು. 1983ರಲ್ಲಿ ಮೊದಲ ಬಾರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರರಾಗಿ ನಿಂತು ಗೆಲುವು ಕಂಡವರು. 1985ರ ಚುನಾವಣೆಯಲ್ಲಿ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದರು. ಚಾಮುಂಡೇಶ್ವರಿಯಲ್ಲಿ ಒಟ್ಟು ಎಂಟು ಸಲ ಸ್ಪರ್ಧಿಸಿದ್ದು, ಆ ಪೈಕಿ ಮೂರು ಬಾರಿ ಸೋಲು ಅನುಭವಿಸಿದರು. ಕಳೆದ ಸಲ ಕೂಡ ಅವರು ಸೋತದ್ದು ಚಾಮುಂಡೇಶ್ವರಿಯಲ್ಲೇ ಆಗಿತ್ತು. ಆದರೆ ತಾವು ಸ್ಪರ್ಧಿಸಿದ್ದ ಬಾದಾಮಿಯಲ್ಲಿ ಕೇವಲ 1,696 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು. ಆದರೆ ಈ ಭಾರಿ ವರುಣಾದಿಂದ ಸ್ಪರ್ಧಿಸಿದ್ದ ಸಿದ್ದು ಬಿಜೆಪಿ ನಾಯಕ ವಿ ಸೋಮಣ್ಣ ವಿರುದ್ಧ ಬರೋಬ್ಬರಿ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾದಿಸಿದ್ದಾರೆ. ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಸಿದ್ದು ಬದುಕಿನ ಸಂಕ್ಷಿಪ್ತ ಚಿತ್ರಣ
• ಸಿದ್ದರಾಮಯ್ಯ ಜನನ : ಆಗಸ್ಟ್ 12, 1948
• ಸ್ಥಳ : ಸಿದ್ದರಾಮನ ಹುಂಡಿ, ವರುಣಾ ಹೋಬಳಿ, ಮೈಸೂರು ಜಿಲ್ಲೆ
• ತಂದೆ : ಸಿದ್ಧರಾಮೇಗೌಡ
• ತಾಯಿ : ಬೋರಮ್ಮ
ಸಿದ್ದರಾಮಯ್ಯರಾಜಕೀಯಜರ್ನಿ
• 1983 : ಮೊದಲ ಗೆಲುವು-ಕನ್ನಡ ಕಾವಲು ಸಮಿತಿ ಅಧ್ಯಕ್ಷ
• 1985 : ಪಶುಸಂಗೋಪನೆ ಸಚಿವ(1988 ವರೆಗೆ)
• 1994 : ಹಣಕಾಸು ಸಚಿವ
• 1996 : ಉಪಮುಖ್ಯಮಂತ್ರಿ
• 2004 : ಉಪಮುಖ್ಯಮಂತ್ರಿ
• 2006 : ವಿಪಕ್ಷ ನಾಯಕ
• 2008 : ವಿಪಕ್ಷ ನಾಯಕ
• 2013 : ಮುಖ್ಯಮಂತ್ರಿ
• * 2018 : ಸಮನ್ವಯ ಸಮಿತಿ ಅಧ್ಯಕ್ಷ
• 2019 : ವಿಪಕ್ಷ ನಾಯಕ
• 2023: ಕರ್ನಾಟಕದ 24ನೇ ಮುಖ್ಯಮಂತ್ರಿ
ಇದನ್ನು ಓದಿ: Siddaramaiah: ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ : ಸಿದ್ದರಾಮಯ್ಯ ಮೊದಲ ಟ್ವೀಟ್