Multiplex Cinema Offer: ಸಿನಿಪ್ರಿಯರಿಗೆ ಸಂತಸದ ಸುದ್ದಿ! ಮಲ್ಟಿಪ್ಲೆಕ್ಸ್‌ನಲ್ಲಿ 99ರೂ. ಭರ್ಜರಿ ಆಫರ್‌! ಯಾವೆಲ್ಲ ಸಿನಿಮಾ?

Multiplex Cinema Offer inox and pvr just rs.99

Multiplex Cinema Offer: ಸಿನಿಮಾ ಪ್ರಿಯರಿಗೆ ಪಿವಿಆರ್‌ (PVR) ಹಾಗೂ ಐನಾಕ್ಸ್‌ ಕಡೆಯಿಂದ ಆಫರ್‌ ಸಿಗುತ್ತಿದೆ. ಕನ್ನಡದ ಕೆಲವು ಸಿನಿಮಾಗಳಿಗೆ 99 ರೂಪಾಯಿ ಟಿಕೆಟ್‌ ದರ ನಿಗದಿ ಮಾಡಿದೆ. ಮೇ.19ರಿಂದ 25ರವರೆಗೆ ಈ ಭರ್ಜರಿ ಲಭ್ಯವಿದೆ. ಆದರೆ ಇಲ್ಲಿ ಕೆಲವೊಂದು ಷರತ್ತುಗಳನ್ನು ನೀಡಲಾಗಿದೆ.

ಕಳೆದ ಬಾರಿ ಪಿವಿಆರ್‌ ಮತ್ತು ಐನಾಕ್ಸ್‌ ಮಲ್ಟಿಪ್ಲೆಕ್ಸ್‌ಗಳಲ್ಲಿ(Multiplex Cinema Offer) ನೂರು ರೂಪಾಯಿ ಟಿಕೆಟ್‌ ದರದ ಮೂಲಕ ಸಿನಿಮಾ ಪ್ರದರ್ಶನ ನೀಡಲಾಯಿತು. ಈ ಎಲ್ಲಾ ಶೋಗಳು ಹೌಸ್‌ಫುಲ್‌ ಪ್ರದರ್ಶನ ಕಂಡಿದ್ದವು. ಈಗ ಈ ನಿಯಮವನ್ನೇ ಮುಂದುವರಿಸಿಕೊಂಡು ಹೋಗಲು ಮತ್ತೆ ನಿರ್ಧರಿಸಲಾಗಿದೆ. ಈ ಬಾರಿ ಕೇವಲ 99 ರೂಪಾಯಿಗೆ ಕನ್ನಡ ಸಿನಿಮಾ ನೋಡುವ ಅವಕಾಶ ನೀಡಲಾಗಿದೆ. ಆದರೆ ಎಲ್ಲಾ ಕನ್ನಡ ಸಿನಿಮಾಗೆ ಇದು ಅನ್ವಯಿಸುವುದಿಲ್ಲ. ಹಾಗಾದರೆ ಯಾವೆಲ್ಲ ಸಿನಿಮಾ ನೀವು ನೋಡಬಹುದು? ಬನ್ನಿ ತಿಳಿಯೋಣ.

ಪುನೀತ್​ ರಾಜ್​ಕುಮಾರ್ ನಟನೆಯ ‘ರಾಜಕುಮಾರ’, ಯಶ್​ ನಟನೆಯ ‘ಕೆಜಿಎಫ್-1’, ‘ಮಫ್ತಿ’, ‘ಮಾಸ್ಟರ್ ಪೀಸ್’, ‘ಗಂಧದಗುಡಿ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳನ್ನು 99 ರೂಪಾಯಿಗೆ ನೋಡುವ ಅವಕಾಶ ಇದೆ. ಈ ಮೂಲಕ ಒಂದು ವಾರಗಳ ಕಾಲ ಪಿವಿಆರ್ ಹಾಗೂ ಐನಾಕ್ಸ್ ಕನ್ನಡದ ಬ್ಲಾಕ್ ಬಸ್ಟರ್ಸ್ ಚಿತ್ರಗಳನ್ನು ಪ್ರೇಕ್ಷಕರಿಗೆ ವೀಕ್ಷಿಸಬಹುದು. ʼಬುಕ್‌ ಮೈ ಶೋʼ ಆಯಪ್‌ನಲ್ಲಿ ಈಗಾಗಲೇ ಈ ಅವಕಾಶ ನೀಡಲಾಗಿದೆ. ಜಿಎಸ್‌ಟಿ ಸೇರಿ ಟಿಕೆಟ್‌ ದರ 112 ರೂಪಾಯಿ ಆಗಲಿದೆ.

 

Leave A Reply

Your email address will not be published.