NCDRC: ಅಬ್ಬಬ್ಬಾ.. ಮಾಡೆಲ್ ಹೇರ್‌ಸ್ಟೈಲ್‌ ಹಾಳು ಮಾಡಿದ್ದಕ್ಕೆ 2 ಕೋಟಿ ಪರಿಹಾರ ಕೊಡಬೇಕೆಂದ ಗ್ರಾಹಕರ ನ್ಯಾಯಾಲಯ; ಆದೇಶಕ್ಕೆ ತಡೆ ನೀಡಿ ಛೀಮಾರಿ ಹಾಕಿದ ಸುಪ್ರೀಂ!!

2 crore compensation for spoiling model hairstyle NCDRC court

NCDRC: ತನ್ನ ಹೇರ್‌ಸ್ಟೈಲ್‌ನ್ನು ವಿರೂಪಗೊಳಿಸಿದ್ದಾನೆಂದು ಐಟಿಸಿ ಸಲೂನ್ ವಿರುದ್ಧ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (NCDRC )ಕ್ಕೆ ಮಾಡೆಲ್ ಒಬ್ಬಳು ದೂರು ನೀಡಿದ್ದು, ಇದಕ್ಕಾಗಿ ಆಕೆಗೆ 2 ಕೋಟಿ ರೂ. ಪರಿಹಾರ (Compensation) ನೀಡುವಂತೆ ಆಯೋಗ ಸಲೂನ್ ಮಾಲಿಕನಿಗೆ ಚೂಚಿಸಿದೆ. ಆದರೀಗ ಆಯೋಗದ ಈ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ಬುಧವಾರ ತಡೆ ನೀಡಿದೆ.

ಹೌದು, 2018ರ ಏ.12 ರಂದು ನವದೆಹಲಿಯ (New Delhi) ಹೋಟೆಲ್ ಐಐಟಿ ಮೌರ್ಯದಲ್ಲಿರುವ ಸಲೂನ್‍ಗೆ ಹೇರ್ ಕಟಿಂಗ್‍ಗಾಗಿ ಆಶ್ನಾ ರಾಯ್ ತೆರಳಿದ್ದರು. ಯಾವಾಗಲೂ ಕೇಶ ವಿನ್ಯಾಸ ಮಾಡುತ್ತಿದ್ದ ಕೇಶ ವಿನ್ಯಾಸಕಿ ಸಿಗದ ಕಾರಣ ಬೇರೊಬ್ಬ ವ್ಯಕ್ತಿಗೆ ಆ ಕೆಲಸವನ್ನು ವಹಿಸಲಾಗಿತ್ತು. ಆತ ಮಾಡಿದ್ದ ಕಟಿಂಗ್ ಸರಿಯಾಗಿಲ್ಲ. ವಿರೂಪಗೊಳಿಸಿದ್ದಾನೆ ಎಂದು ಮಾಡೆಲ್ ಆರೋಪಿಸಿದ್ದರು.

ಅಲ್ಲದೆ ಇದರಿಂದಾಗಿ ಮುಜುಗರ ಎದುರಿಸಬೇಕಾಯಿತು. ವಿರೂಪವಾದ ಹೇರ್‌ನಿಂದಾಗಿ ಖಿನ್ನತೆಯನ್ನು ಅನುಭವಿಸಿದೆ. ನನ್ನ ವೃತ್ತಿ ಜೀವನಕ್ಕೆ ಇದರಿಂದ ತೊಂದರೆಯಾಯಿತು. ಇದರಿಂದ ನಷ್ಟ ಅನುಭವಿಸಿದೆ, 3 ಕೋಟಿ ರೂ. ಪರಿಹಾರವನ್ನು ಸಲೂನ್ ನೀಡಬೇಕು ಎಂದು ಗ್ರಾಹಕರ ನ್ಯಾಯಾಲಯದ ಮೊರೆ ಹೊಗಿದ್ದರು.

ಆದರೆ ಈ ಎನ್‍ಸಿಡಿಆರ್‌ಸಿ ಆದೇಶವನ್ನು ಪ್ರಶ್ನಿಸಿ ಐಸಿಸಿ (ITC)ಯು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಸಂಸ್ಥೆಯು ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಪರಿಹಾರವನ್ನು ಸುಮ್ಮನೆ ಕೇಳುವುದಲ್ಲ, ಅದಕ್ಕೆ ಸೂಕ್ತವಾದ ಕಾರಣ ಹಾಗೂ ಸಾಕ್ಷ್ಯ ಇರಬೇಕು ಎಂದು ಪೀಠ ಹೇಳಿದೆ. ಬಳಿಕ ಮಾಡೆಲ್ ಆಶ್ನಾ ರಾಯ್ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತು.

ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಕೋಟಿ ರೂ. ಪರಿಹಾರ ನೀಡುವಂತೆ 2021ರ ಸೆ. 21 ರಂದು ಗ್ರಾಹಕರ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ಫೆಬ್ರವರಿಯಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂ ರದ್ದುಗೊಳಿಸಿತ್ತು. ಅಲ್ಲದೆ ಮಾದರಿಯಲ್ಲಿ ಸಲ್ಲಿಸಿದ ವಸ್ತುಗಳನ್ನು ಕೂಲಂಕುಷವಾಗಿ ಪರಿಶೀಲಿಸಿಮಾಡೆಲ್ ಹೇರ್‌ಸ್ಟೈಲ್‌ ಹಾಳು ಮಾಡಿದ್ದಕ್ಕೆ 2 ಕೋಟಿ ಪರಿಹಾರ – ಆದೇಶಕ್ಕೆ ಸುಪ್ರೀಂ ತಡೆ ಮುಂದುವರೆಯುವಂತೆ ಗ್ರಾಹಕರ ನ್ಯಾಯಾಲಯಕ್ಕೆ ಸೂಚಿಸಿತ್ತು. ಪರಿಶೀಲನೆ ನಡೆಸಿದ್ದ ಗ್ರಾಹಕರ ನ್ಯಾಯಾಲಯ ಹಿಂದಿನ ತೀರ್ಪನ್ನು ಎತ್ತಿ ಹಿಡಿದಿತ್ತು.

 

 

ಇದನ್ನು ಓದಿ: KSRTC ಬಸ್‌ನಲ್ಲಿ ನಟಿಗೆ ಲೈಂಗಿಕ ಕಿರುಕುಳಸೊಂಟ ಬಳಸಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಯ ಬಗ್ಗೆ ನಟಿ ಹೇಳಿದ್ದೇನು?

Leave A Reply

Your email address will not be published.