Rozgar Mela: 71 ಸಾವಿರ ಯುವಕರಿಗೇ ಉದ್ಯೋಗ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ!

Modi distributes 71K appointment letters to youths at Rozgar Mela

Rozgar Mela: ಕೇಂದ್ರ ಸರ್ಕಾರದ (Government Of India) ರೋಜ್‌ಗಾರ್ ಮೇಳದ (Rozgar Mela) ಅಡಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕವಾದ 71 ಸಾವಿರ ಉದ್ಯೋಗಿಗಳಿಗೆ ವರ್ಚುವಲ್ ಆಗಿ ಪ್ರಧಾನಿ ಮೋದಿ (Narendra Modi) ನೇಮಕಾತಿ ಪತ್ರಗಳನ್ನ ವಿತರಿಸಿದರು.

ಹೌದು, ವಿಡಿಯೋ ಕಾನ್ಫರೆನ್ಸ್(Vedio Conference) ಮೂಲಕ ಮೋದಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ನೇಮಕಾತಿ ಪತ್ರ ವಿತರಣೆಗೆ ಚಾಲನ ನೀಡಿದರು. ನಂತರ ಮಾತನಾಡಿದ ಅವರು, ‘ನೇಮಕಾತಿ ವ್ಯವಸ್ಥೆಯಲ್ಲಿನ ಬದಲಾವಣೆಗಳು ಭ್ರಷ್ಟಚಾರ, ಸ್ವಜನಪಕ್ಷಪಾತವನ್ನು ಕೊನೆಗೊಳಿಸಿವೆ’ ಎಂದು ಪ್ರಧಾನಿ ಮೋದಿ(PM Modi) ಹೇಳಿದರು.

ಅಂದಹಾಗೆ ದೇಶಾದ್ಯಂತ 45 ಸ್ಥಳಗಳಲ್ಲಿ ರೋಜ್‌ಗಾರ್(Rozgar Mela) ಮೇಳವನ್ನು ಆಯೋಜಿಸಲಾಗಿತ್ತು. ಈ ಉಪಕ್ರಮವನ್ನು ಬೆಂಬಲಿಸುವ ಸಲುವಾಗಿ ಕೇಂದ್ರ ಸರಕಾರದ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತಗಳಿಗೆ ನೇಮಕಾತಿಗಳು ನಡೆಯುತ್ತಿವೆ. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯ ಈಡೇರಿಕೆಗೆ ರೋಜ್‌ಗಾರ್ ಮೇಳ ಒಂದು ಹೆಜ್ಜೆಯಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಬೆಂಗಳೂರು ಕಾರ್ಯಕ್ರಮದ ನೇತೃತ್ವವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Prahallad Joshi), ಮೈಸೂರು ಕಾರ್ಯಕ್ರಮದ ನೇತೃತ್ವವನ್ನು ಸಚಿವೆ ಶೋಭಾ ಕರಂದ್ಲಾಜೆ(Shobha karandlaje) ವಹಿಸಿಕೊಂಡಿದ್ದರು. ಮೋದಿ ಭಾಷಣದ ವೇಳೆ ಸಂಸದ ತೇಜಸ್ವಿ ಸೂರ್ಯ(Thejaswi Surya) ನಿದ್ದೆಗೆ ಜಾರಿದ್ದು ಕಂಡುಬಂದಿತು.

ಇದನ್ನೂ ಓದಿ:Congress guarantees: ಅಬ್ಬಬ್ಬಾ.. ಕಾಂಗ್ರೆಸ್ಸಿನ ಉಚಿತ ಕೊಡುಗೆಗಳನ್ನು ಅನುಷ್ಠಾನಗೊಳಿಸೋಕೆ ಬೇಕು 62,000 ಕೋಟಿ ರೂಪಾಯಿ!!!

Leave A Reply

Your email address will not be published.