ಸಿದ್ದರಾಮಯ್ಯ ಸಿಎಂ ಹೆಸ್ರು ಫಿಕ್ಸ್ ಬೆನ್ನಲ್ಲೆ ಅಭಿಮಾನಿಗಳ ಸಂಭ್ರಮ : ನಿವಾಸದಲ್ಲಿ ಪೊಲೀಸರ ಹದ್ದಿನಕಣ್ಣು
ಬೆಂಗಳೂರು : ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಫಿಕ್ಸ್ ಆದ ಬೆನ್ನಲ್ಲೆ ಸಿದ್ದು ನಿವಾಸದಲ್ಲಿಅಭಿಮಾನಿಗಳ ಸಂಭ್ರಮಾಚರಣೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕುಮಾರಕೃಪ ನಿವಾಸದಲ್ಲಿ ಪೊಲೀಸರ ಹದ್ದಿನಕಣ್ಣಿಟ್ಟಿದ್ದಾರೆ.
ಮೇ.10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಮೇ 13ರಂದು ಫಲಿತಾಂಶ ಹೊರ ಬಂದಿದ್ದು, ಕಾಂಗ್ರೆಸ್ ಭಾರೀ ಬಹು ಮತದೊಂದಿಗೆ ಗೆಲುವನ್ನು ಸಾಧಿಸಿದೆ. ಈ ಬೆನ್ನಲ್ಲೆ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ & ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಸ್ ನಡೆಯಿತು. ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಫಿಕ್ಸ್ ಆಗಿದ್ದು ಹೈಕಮಾಂಡ್ ಘೋಷಣೆಯೊಂದೆ ಬಾಕಿಯಿದ್ದು ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಸಿದ್ದರಾಮಯ್ಯ ನಿವಾಸಕ್ಕೆ ಅಭಿಮಾನಿಗಳ ದಂಡು ಹರಿದು ಬಂದಿದ್ದು , ಕುಮಾರಕೃಪ ನಿವಾಸದಲ್ಲಿಅಭಿಮಾನಿಗಳ ಸಂಭ್ರಮಾಚರಣೆ ಭರಾಟೆ ಹೆಚ್ಚಾಗಿದ್ದು, ಪೊಲೀಸ್ ಭದ್ರತೆ ನೀಡಲಾಗಿದೆ.
ಸಂಭ್ರಮಾಚರಣೆ ವೇಳೆ ಅಹಿತರಕ ಘಟನೆ ನಡೆಯದಂತೆ 70 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಒಂದು ಕೆಎಸ್ ಆರ್ ಪಿ ವಾಹನ ಸೇರಿ 70 ಕ್ಕೂ ಹೆಚ್ಚು ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ ಸಿದ್ದರಾಮಯ್ಯ ಫೆಕ್ಸ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ʼ
ಇಂದು ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದರಾಮಯ್ಯ ಸಿಎಂ ಎಂದು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರೇ ಸಿಎಂ ಆಗಲಿ ಎಂದು ಈ ಹಿಂದೆ ರಾಹುಲ್ ಗಾಂಧಿ ಒಲವು ವ್ಯಕ್ತಪಡಿಸಿದ್ದರು. ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಫಿಕ್ಸ್ ಆಗಿದ್ದು ಹೈಕಮಾಂಡ್ ಘೋಷಣೆಯೊಂದೆ ಬಾಕಿಯಿದೆ ಎನ್ನಲಾಗಿದ್ದು, ಅಲ್ಲದೇ ನಾಳೆಯೇ ಪ್ರಮಾಣವಚನ ನಡೆಸುವ ಸಾಧ್ಯತೆಯಿದ್ದು ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ. ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ ಸಂದರ್ಭದಲ್ಲೇ ಸಿದ್ದರಾಮಯ್ಯ ಜತೆಯಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಪದಗ್ರಹಣ ನಡೆಸುವ ಸಾಧ್ಯತೆಯಿದೆ, ವರಿಷ್ಟರ ಜೊತೆ ಚರ್ಚಿಸಿ ನಂತ್ರ ತೀರ್ಮಾಣ ಕೈಗೊಳ್ಳುವ ಸಾಧ್ಯತೆಯಿದೆ ವರದಿಯಾಗಿದೆ.