ಅಹಿಂದ ನಾಯಕನಿಗೆ ಅಧಿಪತ್ಯ, ಕರ್ನಾಟಕ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ !

Karnataka new Chief Minister is Siddaramaiah

Karnataka New CM: ಹಲವು ದಿನಗಳಿಂದ ಇಡೀ ರಾಜ್ಯದ ಜನ ಕಾತರದಿಂದ ಕಾದಿದ್ದ, ಕರ್ನಾಟಕ(Karnataka)ದ ಮುಂದಿನ ಸಿಎಂ(CM) ಯಾರು? ಎಂಬ ವಿಚಾರಕ್ಕೆ ಕೊನೆಗೂ ತೆರೆಬಿದ್ದಿದೆ. ಎಲ್ಲರೂ ನಿರೀಕ್ಷಿಸಿದಂತೆ, ಅನೇಕರ ಅಪೇಕ್ಷಯಂತೆ ಕರ್ನಾಟಕದ ಮಾಜಿ ಸಿಎಂ, ಕರ್ನಾಟಕದ ಟಗರು ಎಂದೇ ಖ್ಯಾತಿ ಗಳಿಸಿದ್ದ, ನೇರ ನಡೆ ನುಡಿಯ ನಾಯಕ, ಹಿಂದುಳಿದ ವರ್ಗಗಳ ನೇತಾರ ಸಿದ್ದರಾಮಯ್ಯ(Siddaramaiah) ಅವರು ಕರ್ನಾಟಕದ ನೂತನ ಮುಖ್ಯಮಂತ್ರಿ(Karnataka New CM) ಆಗಿ ಆಯ್ಕೆಯಾಗಿದ್ದಾರೆ.

 

ಹೌದು, ಇದೀಗ ದೆಹಲಿ(Delhi) ಯಿಂದ ಬಂದ ಮಾಹಿತಿಯೊಂದು ಕನ್ನಡಿಗರಿಗೆ ಸಂತೋಷದ ಸುದ್ದಿಯನ್ನು ನೀಡಿ ಕರ್ನಾಟಕದ ಜನರ ಕುತೂಹಲವನ್ನು ತಣಿಸಿದೆ. 2013 ರಿಂದ 2018 ರವರೆಗೆ ಸಂಪೂರ್ಣವಾಗಿ 5 ವರ್ಷಗಳ ಕಾಲ ಸರ್ಕಾರ ನಡೆಸಿ ಉತ್ತಮ ಆಡಳಿತ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯನ(Siddaramaiah) ವರನ್ನೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಹೈಕಮಾಂಡ್(High Còmmand) ನೇಮಿಸಿದೆ.

ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ(Karnataka Assembly election) ಕಾಂಗ್ರೆಸ್(Congres) , ಬಿಜೆಪಿ(BJP)ಯನ್ನು ಹೀನಾಯವಾಗಿ ಸೋಲಿಸಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕವೂ ಕಾಂಗ್ರೆಸ್ ಪಾಳಯದಲ್ಲಿ ಮುಂದಿನ ಸಿಎಂ ಯಾರೆಂದು ಚರ್ಚೆಯಾಗುತ್ತಲೇ ಇತ್ತು. ಕಾಂಗ್ರೆಸ್ ಗೆ ಈ ಭರ್ಜರಿ ಗೆಲುವು ತಂದುಕೊಡಲು ಹಗಲು ರಾತ್ರಿ ಎನ್ನದೆ ಶ್ರಮಿಸಿದ, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ನೇತೃತ್ವ ವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್(D K Shivkumar) ಒಂದೆಡೆ ತಾನು ಸಿಎಂ ಅಗಬೇಕೆಂದು ತುದಿಗಾಲಲ್ಲಿ ನಿಂತಿದ್ದರೆ, ಇನ್ನೊಂದೆಡೆ ಧಣಿವರಿಯದೆ ಪ್ರಚಾರ ನಡೆಸಿ, ಅಬ್ಬರದ ಭಾಷಣಗಳ ಮೂಲಕ, ತನ್ನ ಹಿಂದಿನ ಯೋಜನೆಗಳಿಂದ ನಾಡಿನ ಜನರ ಗಮನ ಸೆಳೆದು ಕಾಂಗ್ರೆಸ್ ಗೆಲುವಿಗೆ ಕಾರಣೀಭೂತರಾದ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಸಿಎಂ ಸ್ಥಾನಕ್ಕೆ ಬಲವಾದ ಆಕಾಂಕ್ಷಿಯಾಗಿದ್ದರು. ಅಂತೂ ಭಾರೀ ಜಟಾಪಟಿ, ಪೈಪೋಟಿಗಳ ನಡುವೆ ಸಿದ್ದು, ಸಿಎಂ ಖುರ್ಚಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಇತ್ತ ಕಡೆ ತಾನು ಕೆಪಿಸಿಸಿ(KPCC) ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಾಗಿನಿಂದಲೂ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಪು, ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸುವುದೊಂದೇ ತನ್ನ ಗುರಿ ಎಂಬಂತೆ ಅರಿವರತ ಶ್ರಮದಿಂದ ದುಡಿದು, ಚುನಾವಣೆ ಪೂರ್ವದಲ್ಲೇ ಖಂಡಿತವಾಗಿಯೂ ನಾವು 136 ಸೀಟ್ ಪಡೆದೇ ತೀರುತ್ತೇವೆಂದು ಸಾರ್ವಜನಿಕವಾಗಿ ಹೇಳಿ, ಹೇಳಿದಂತೆ ಅಷ್ಟೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿ, ಸಂಭ್ರಮಿಸಿದ, ಛಲದಂಕ ಮಲ್ಲ, ಕನಕಪುರದ ಬಂಡೆ ಡಿ ಕೆ ಶಿವಕುಮಾರ್ ಅವರಿಗೆ ಸದ್ಯ ನಿರಾಸೆಯಾಗಿದೆ.

ಒಕ್ಕಲಿಗ ಸ್ವಾಮಿಗಳು ಅಂಗಳಕ್ಕಿಳಿದು, ಸಾರ್ವಜನಿಕವಾಗಿ ನಮ್ಮ ಒಕ್ಕಲಿಗ ನಾಯಕ ಡಿಕೆ ಶಿವಕುಮಾರ್ ಅವರೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಹೇಳಿಕೆ ಕೂಟ್ಟರು, ಡಿಕೆಶಿ ಹೋದಲ್ಲೆಲ ನನಗೊಂದು ಅವಕಾಶ ಮಾಡಿಕೊಡಿ ಎಂದು ಕೈ ಮುಗಿದು ಬೇಡಿದರು, ಟೆಂಪಲ್ ರನ್ ಮಾಡಿ ಎಷ್ಟೇ ಪ್ರಾರ್ಥಿಸಿದರು, ಯಾವುದೂ ಕೂಡ ಏನೂ ಪ್ರಯೋಜನ ಆಗಲಿಲ್ಲ, ಡಿಕೆಶಿ ಕೈ ಹಿಡಿಯಲಿಲ್ಲ.

ಅಂದಹಾಗೆ ನಿನ್ನೆಯಿಂದಲೂ ಬೆಂಗಳೂರು(Bangalore) ಸ್ಟಾರ್ ಹೋಟೆಲ್ ನಲ್ಲಿ ಕಾಂಗ್ರೆಸ್ ಪಕ್ಷದ ಮೊದಲ ಶಾಸಕಾಂಗ ಸಭೆ ನಡೆಯುವ ಮೂಲಕ ಶುರುವಾದ ಸಿಎಂ ಆಯ್ಕೆ ವಿಚಾರದ ಗೊಂದಲ ಕೊನೆಗೂ ಇತ್ಯರ್ಥವಾಗಿದೆ. ಇದು ತಮ್ಮಿಂದ ನೇರವಾಗಿ ನಡೆದರೆ ಎಬವಟ್ಟಾಗಬಹುದೆಂದು ಅರಿತ ಹೈಕಮಾಂಡ್ ಕೊಂಚ ಬುದ್ಧಿ ಉಪಯೋಗಿಸಿ ಕರ್ನಾಟಕ ಸಿಎಂ ಆಯ್ಕೆ ಮಾಡಲು, ಮಹಾರಾಷ್ಟ್ರ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ(Susheel Kumar Shinde) ಅವರ ನೇತೃತ್ವದಲ್ಲಿ ವೀಕ್ಷಕರ ತಂಡವನ್ನು ನೇಮಿಸಿತು. ನಂತರ ಸಭೆ, ಸಭೆಯಲ್ಲಿ ಶಾಸಕರ ಗೈರು, ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನ ಎಂಬ ಮೊದಲ ನಿರ್ಣಯ, ನಂತರ ಮೌಖಿಕ ಅಭಿಪ್ರಾಯ, ಗೌಪ್ಯ ಮತದಾನ ಹೀಗೆ ಒಂದೊಂದಾಗೇ ಶುರುವಾಗಿ ಕೊನೆಗೆ Left to High command ಅನ್ನೋ ಅಭಿಮತದೊಂದಿಗೆ ದೆಹಲಿ ಅಂಗಳ ಸೇರಿದ ಸಿಎಂ ಆಯ್ಕೆ ವಿಚಾರ ಅಂತೂ ರಾಷ್ಟ್ರ ರಾಜಧಾನಿಯಲ್ಲೇ ತೆರೆಕಂಡಿತು.

ರಾಜ್ಯದಲ್ಲಿ ಈ ಬಾರಿ ಶೇ. 42.9ರಷ್ಟು ಮತಗಳನ್ನು ಗಳಿಕೆ ಮಾಡಿರುವ ಕಾಂಗ್ರೆಸ್ ಪಕ್ಷ, 135 ಸ್ಥಾನಗಳನ್ನು ಗಳಿಸಿ ದಿಗ್ವಿಜಯ ಸಾಧಿಸಿದೆ. 2018ರಲ್ಲಿ ಕಾಂಗ್ರೆಸ್ ಪಕ್ಷ 80 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ಕಳೆದ ಬಾರಿಗಿಂತಲೂ 55 ಸ್ಥಾನಗಳನ್ನು ಕಾಂಗ್ರೆಸ್ ಹೆಚ್ಚುವರಿಯಾಗಿ ಗಳಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಕಳೆದ 34 ವರ್ಷಗಳಲ್ಲೇ ಅತಿ ದೊಡ್ಡ ಗೆಲುವು. ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿದ್ದ ಅಭ್ಯರ್ಥಿಗಳ ಪೈಕಿ 35 ಹೊಸ ಮುಖಗಳೂ ಗೆಲುವು ಸಾಧಿಸಿವೆ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಬಲ ಕೂಡಾ ಸಿಕ್ಕಿದೆ. ಕಾಂಗ್ರೆಸ್‌ನ 51 ಲಿಂಗಾಯತ ಅಭ್ಯರ್ಥಿಗಳ ಪೈಕಿ 39 ಮಂದಿ ಜಯ ಗಳಿಸಿದ್ದಾರೆ. ಒಕ್ಕಲಿಗ ಪ್ರದೇಶದಲ್ಲೂ ಕೂಡಾ ಜೆಡಿಎಸ್ ಮತಗಳು ಕಾಂಗ್ರೆಸ್ ಪಾಲಾಗಿವೆ. ಒಟ್ಟಿನಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಕನ್ನಡಿಗರ ಮನಗೆದ್ದು ಭೀಗಿದೆ. ಸಿದ್ದು ಸರ್ಕಾರ, ಪ್ರಣಾಳಿಕೆಯಲ್ಲಿ ನುಡಿದಂತೆ ನಡೆಯುವುದೇ ಎಂದು ನೋಡಬೇಕಿದೆ.

ಇದನ್ನೂ ಓದಿ:ಕೋಟ್ಯಂತರ ರೂಪಾಯಿಗಳ SBI ಗೃಹ ಸಾಲ ಮನ್ನಾ !

Leave A Reply

Your email address will not be published.