karnataka BJP President: ಬಿಜೆಪಿ ಪಾಳಯದಲ್ಲಿ ಜೋರಾಗ್ತಿದೆ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು! ನಳಿನ್ ಕುಮಾರ್ ಕಟೀಲ್ ಸ್ಥಾನಕ್ಕೆ ಯಾರು?

Karnataka BJP President Change of BJP State President

karnataka BJP President: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ(Karnataka Assembly election)ಯಾರು ಊಹಿಸದ ರೀತಿ ಬಿಜೆಪಿ(BJP)ಯು ಹೀನಾಯವಾಗಿ ಸೋತಿದೆ. ಸದ್ಯದ ಮಟ್ಟಿಗೆ ಬಿಜೆಪಿ ಪಾಲಿಗೆ ದಕ್ಷಿಣ ಭಾರತದ(South India) ಹೆಬ್ಬಾಗಿಲು ಮುಚ್ಚಿದಂತಾಗಿದೆ. ಬಿಜೆಪಿ ಸೋಲಿನ ಹೊಣೆಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್(Nalin Kumar Kateel) ಕುಮಾರ್ ಕಟೀಲ್ ತಾವು ಹೊರುವುದಾಗಿ ಹೇಳಿದ್ದಾರೆ. ಇನ್ನು ಈ ಬೆನ್ನಲ್ಲೇ ರಾಜ್ಯಾಧ್ಯಕ್ಷರ (karnataka BJP President) ಬದಲಾವಣೆಯ ಮಾತುಗಳು ರಾಜ್ಯ ಬಿಜೆಪಿ ಪಾಳಯದಲ್ಲಿ ಜೋರಾಗಿ ಕೇಳಿಬುರುತ್ತಿದೆ.

 

ಅಂದಹಾಗೆ ನಳಿನ್ ಕುಮಾರ್ ಕಟೀಲ್ ಅವರ ರಾಜ್ಯಾಧ್ಯಕ್ಷ(State President) ಅವಧಿ ಕಳೆದ ವರ್ಷ ಮುಗಿದಿದ್ದು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ಅವಧಿ ವಿಸ್ತರಣೆ ಮಾಡಿದ್ದರು. ಬಿಜೆಪಿ ಸೋಲಿನ ಬಳಿಕವಂತೂ ಕಟೀಲ್ ವಿರುದ್ಧ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಬಿಜೆಪಿ ಸೋಲಲು ಕಟೀಲರೇ ಕಾರಣ ಎಂದು ಹರಿಹಾಯ್ದಿದ್ದಾರೆ. ಹೀಗಾಗಿ ಸದ್ಯದಲ್ಲೇ ನಳೀನ್ ಕುಮಾರ್ ಕಟೀಲ್ ರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಹೊಸ ಅಧ್ಯಕ್ಷರನ್ನು ನೇಮಕಮಾಡುವ ಸೂಚನೆಗಳು ಕಂಡುಬರುತ್ತಿವೆ.

ಇನ್ನು ನಿನ್ನೆ ದಿನ ಸಚಿವ ಪ್ರಲ್ಹಾದ್​ ಜೋಶಿ(Central Minister Prahallad Joshi)ಈ ಬಗ್ಗೆ ಮಾತನಾಡಿ ನಳೀನ್​ ಕುಮಾರ್​ ಕಟೀಲ್​ ಅವರ ಅವಧಿ ಈಗಾಗಲೇ ಮುಗಿದು ಹೋಗಿದೆ ಚುನಾವಣಾ ದೃಷ್ಟಿಯಿಂದ ಅವರಿಗೆ ರಾಷ್ಟ್ರೀಯ ನಾಯಕರು ಜವಾಬ್ದಾರಿ ಕೊಟ್ಟಿದ್ದರು. ಮುಂದಿನ ತೀರ್ಮಾನವನ್ನು ರಾಷ್ಟ್ರೀಯ ನಾಯಕರೇ ಮಾಡುತ್ತಾರೆ ಎಂದು ಹೇಳಿದ್ದರು. ಇದೀಗ ರಾಜ್ಯಾಧ್ಯಾಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ದು, ರೇಸ್​​ನಲ್ಲಿ ಯಾರೆಲ್ಲಾ ಇದ್ದಾರೆ ಪಟ್ಟಿ ಇಲ್ಲಿದೆ.

• ಅರವಿಂದ್ ಬೆಲ್ಲದ್(Aravund bellad)
ಲಿಂಗಾಯತ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಶಾಸಕ:
ಕಿತ್ತೂರು-ಕರ್ನಾಟಕದಲ್ಲಿ ಗಮನಾರ್ಹ ಸಂಖ್ಯೆಯ ಸ್ಥಾನಗಳನ್ನು ಕಳೆದುಕೊಂಡಿರುವ ಬಿಜೆಪಿಯು 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಲಿಂಗಾಯತ ಸಮುದಾಯದ ನಿಷ್ಠೆಯನ್ನು ಮರಳಿ ಪಡೆಯಲು ಬೆಲ್ಲದ್ ಅವರನ್ನು ಮುಂದಿನ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬಹುದು. 2021 ರಲ್ಲಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ ಬೆಲ್ಲದ ಹೆಸರು ಕೇಳಿಬರುತ್ತಿತ್ತು.

• ವಿ ಸುನಿಲ್ ಕುಮಾರ್ (V Sunil kumar)
ಬಿಲ್ಲವ – ಕಾರ್ಕಳ(Karkala) ಶಾಸಕ
ಮಾಜಿ ಸಚಿವ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳದಿಂದ 4 ಬಾರಿ ಶಾಸಕರಾಗಿರುವ ವಿ ಸುನೀಲ್ ಕುಮಾರ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬ ಆಕಾಂಕ್ಷಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಬಿಲ್ಲವ ಸಮುದಾಯದಿಂದ ಬಂದವರು. ಈ ಪ್ರದೇಶದಲ್ಲಿ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕರಾವಳಿ ಕರ್ನಾಟಕದಿಂದ ಬಂದಿರುವ ಸುನೀಲ್ ಕುಮಾರ್ ಅವರನ್ನು ಪಕ್ಷವು ಆಯ್ಕೆ ಮಾಡುವ ಸಾಧ್ಯತೆ ಇದೆ. ಏಕೆಂದರೇ ಸುನೀಲ್ ಕುಮಾರ್ ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರಾಗಿದ್ದು, ಸಂಘ ಪರಿವಾರದ ಬೆಂಬಲವನ್ನು ಪಡೆದಿದ್ದಾರೆ.

• ಅರವಿಂದ ಲಿಂಬಾವಳಿ (Arvind Limbavali)
ಎಸ್ಸಿ- ಮಾಜಿ ಸಚಿವ
ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಸಚಿವರಿಗೆ ಈ ವರ್ಷ ಬಿಜೆಪಿ ಟಿಕೆಟ್ ನಿಡಿರಲಿಲ್ಲ. ಬದಲಿಗೆ ಅವರ ಪತ್ನಿ ಮಂಜುಳಾ ಲಿಂಬಾವಳಿ ಅವರಿಗೆ ಟಿಕೆಟ್​ ನೀಡಿತ್ತು. ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮತಬ್ಯಾಂಕ್ ಕ್ರೋಢೀಕರಿಸಲು ರಾಜ್ಯ ಘಟಕವನ್ನು ಮುನ್ನಡೆಸಲು ಬಿಜೆಪಿ ಅವರನ್ನು ಆಯ್ಕೆ ಮಾಡುವ ಸಾಧ್ಯೆತೆ ಇದೆ.

• ಡಾ. ಸಿಎನ್ ಅಶ್ವಥ್ ನಾರಾಯಣ (Ashwath narayan)
ಒಕ್ಕಲಿಗ- ಮಲ್ಲೇಶ್ವರಂ ಶಾಸಕ
ಮತ್ತೊಬ್ಬ ಒಕ್ಕಲಿಗ ಹಾಗೂ ಮಲ್ಲೇಶ್ವರಂ(Malleshwaram) ವಿಧಾನಸಭಾ ಕ್ಷೇತ್ರದ 4 ಬಾರಿ ಶಾಸಕರಾಗಿರುವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಹಲವು ಖಾತೆಗಳನ್ನು ನಿರ್ವಹಿಸಿದ್ದು, 2019ರಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದರು. ಅವರಿಗೆ ರಾಮನಗರ ಜಿಲ್ಲೆಯ ಜವಾಬ್ದಾರಿಯನ್ನು ನೀಡಲಾಗಿತ್ತು. ಇನ್ನು ಚುನಾವಣಾ ಪ್ರಚಾರ ತಾರಕಕ್ಕೇರಿದ ಅವಧಿಯಲ್ಲಿ “ಊರಿಗೌಡ ಮತ್ತು ನಂಜೇಗೌಡ” ಹೆಸರನ್ನು ಮೊದಲು ಬಳಸಿದ್ದು ಅಶ್ವಥ್ ನಾರಾಯಣ್. ಆದರೆ ಅವರು ಪಕ್ಷದ ಕೆಲವು ಹಿರಿಯ ನಾಯಕರಿಂದ ವಿರೋಧ ಎದುರಿಸುತ್ತಿದ್ದಾರೆ.

• ಶೋಭಾ ಕರಂದ್ಲಾಜೆ(Shobha Karandlaje)
ಒಕ್ಕಲಿಗ- ಕೇಂದ್ರ ಸಚಿವೆ
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಇವರು ಉತ್ತಮ ವಾಗ್ಮಿಯಾಗಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು, ಮತ್ತು ಈ ಭಾಗದಲ್ಲಿ ಮತ್ತಷ್ಟು ಮತಗಳನ್ನು ಕ್ರೋಢೀಕರಿಸಲು, ಪಕ್ಷವು ಅವರನ್ನು ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಮಾಡುವ ಸಾಧ್ಯತೆ ಇದೆ.

ಆದರೆ, ಪಕ್ಷವು ಒಬ್ಬ ವ್ಯಕ್ತಿ-ಒಂದು ಹುದ್ದೆಯ ಸೂತ್ರವನ್ನು ಅನುಸರಿಸುತ್ತದೆ. ಅಂದರೆ ಶೋಭಾ ಕರಂದ್ಲಾಜೆ ಅವರನ್ನು ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಕೇಂದ್ರ ಸಚಿವ ಸ್ಥಾನವನ್ನು ಬಿಟ್ಟುಕೊಡಬೇಕು. ಏತನ್ಮಧ್ಯೆ, ಪ್ರಚಾರದ ಸಮಯದಲ್ಲಿ, ಅವರು ರಾಜ್ಯ ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ ಮತ್ತು ತಮ್ಮ ಪ್ರಸ್ತುತ ಹುದ್ದೆಯಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದು ಅನೇಕ ಸಂದರ್ಭಗಳಲ್ಲಿ ಹೇಳಿದ್ದರು.

• ಸಿಟಿ ರವಿ ( C T Ravi)
• ಒಕ್ಕಲಿಗ- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ಸ್ಥಾನಕ್ಕೆ ಮತ್ತೊಬ್ಬ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒಕ್ಕಲಿಗರಾದ ರವಿ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಾಜಿ ಆಪ್ತ ಮತ್ತು ಪ್ರಸ್ತುತ ಕಾಂಗ್ರೆಸ್ ನಾಯಕ ಎಚ್‌ಡಿ ತಮ್ಮಯ್ಯ ವಿರುದ್ಧ ಸೋತಿದ್ದಾರೆ. ರವಿ, ಫೈರ್‌ಬ್ರಾಂಡ್ ಹಿಂದುತ್ವದ ನಾಯಕ ಮತ್ತು ಪಕ್ಷದೊಳಗೆ ತಮ್ಮ ನಾಯಕತ್ವದ ಕೌಶಲ್ಯವನ್ನು ತೋರಿಸಿದ್ದು, ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಆಶ್ಚರ್ಯವಿಲ್ಲ.

 

ಇದನ್ನು ಓದಿ: Smoked on plane: ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಬೀಡಿ ಸೇದಿದ ಪ್ರಯಾಣಿಕ ! 

Leave A Reply

Your email address will not be published.