Malpe Beach: ಪ್ರವಾಸಿಗರೇ, ಮಲ್ಪೆ ಬೀಚ್​ನಲ್ಲಿ ಈ ಚಟುವಟಿಕೆಗಳಿಗೆ ಅವಕಾಶವಿಲ್ಲ!

From today onwards boat activities restricted in malpe beach

Malpe Beach: ಮಲ್ಪೆ ಬೀಚ್ (Malpe Beach) ಸುಂದರವಾದ ಪ್ರೇಕ್ಷಣೀಯ ಸ್ಥಳವಾಗಿದ್ದು, ಕರ್ನಾಟಕದ (Karnataka) ಹಲವು ಭಾಗಗಳಿಂದಲೇ ಅಲ್ಲದೇ, ದೇಶದ ವಿವಿಧ ಸ್ಥಳಗಳಿಂದ ಜನರು ಮಲ್ಪೆ ಬೀಚ್ ಗೆ ಭೇಟಿ ನೀಡುತ್ತಾರೆ. ಮಲ್ಪೆ ಬೀಚ್ ನೋಡಿದಾಕ್ಷಣ ಮರಳಿನ ಮಡಿಲಲ್ಲಿ, ಸಮುದ್ರದ ನೊರೆಯಲ್ಲಿ ತೇಲಾಡಬೇಕು ಎಂದು ಅನ್ನಿಸದಿರದು. ಮಲ್ಪೆ ಬೀಚ್’ನಲ್ಲಿನ ಸೈಂಟ್ ಮೇರೀಸ್ ದ್ವೀಪವೂ ಆಕರ್ಷಣೀಯವಾಗಿದೆ.

 

ಗೋಲ್ಡನ್ ಸ್ಯಾಂಡ್ಸ್, ಪೃಸ್ಟೀನ್ ಬೀಚ್ ಗಳ ಸುತ್ತಲೂ ತೂಗಾಡುವ ತೆಂಗಿನ ಮರಗಳು, ಸ್ಪಟಿಕದಷ್ಟು ಸ್ಪುಟವಾದ ಮತ್ತು ನಿರ್ಮಲವಾದ ಸರೋವರವು ಕಣ್ಣುಗಳಿಗೆ ಹಬ್ಬದಂತಿರುತ್ತದೆ. ಮಲ್ಪೆ ತೀರವು ತನ್ನ ಪ್ರಶಾಂತವಾದ ಸರೋವರಗಳ ಮತ್ತು ನಿರ್ಮಲ ನೀಲಾಕಾಶವನ್ನು ಹೊಂದಿದ್ದು, ಕೆರೀಬಿಯನ್ ನ ಪಡಿರೂಪಗಳಷ್ಟೇ ರಮಣೀಯವಾಗಿದೆ.

ಆದರೆ, ಮಲ್ಪೆ ಬೀಚ್ ಗೆ ತೆರಳುವ ಪ್ರವಾಸಿಗರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಮಲ್ಪೆ ಬೀಚ್​ನಲ್ಲಿ ಈ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಹೌದು, ಇಂದಿನಿಂದ (ಮೇ 16) ನಾಲ್ಕು ತಿಂಗಳ ಕಾಲ ಮಲ್ಪೆ ಬೀಚ್​ನಲ್ಲಿ ಕೆಲವು ಚಟುವಟಿಕೆಗಳಿಗೆ ಉಡುಪಿ (Udupi) ನಗರಸಭೆ ಪೌರಾಯುಕ್ತರು ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ನಿಷೇಧ ಹೇರಿ ಆದೇಶಿಸಿದ್ದಾರೆ.

ಜೂನ್ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಮಲ್ಪೆ ಸೀ ವಾಕ್ ಪ್ರದೇಶದಲ್ಲಿ ಹಾಗೂ ಸೇಂಟ್ ಮೇರಿಸ್ ದ್ವೀಪಗಳಿಗೆ ತೆರಳುವ ಬೋಟ್​ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಮುದ್ರ ಕಿನಾರೆಯಲ್ಲಿ ಯಾವುದೇ ಜಲಸಾಹಸ ಕ್ರೀಡೆಗಳನ್ನು ನಡೆಸದಂತೆ ಹೇಳಲಾಗಿದೆ.

ಮಳೆಗಾಲದಲ್ಲಿ ಸಮುದ್ರ ಭಾರೀ ತೀವ್ರತೆ ಪಡೆಯಲಿದ್ದು, ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಮೇ 16 ರಿಂದ ಸೆಪ್ಟಂಬರ್ 15 ರ ವರೆಗೆ ಈ ಮೇಲಿನ ಆದೇಶ ಜಾರಿಯಲ್ಲಿರಲಿದೆ. ಈ ಬಗ್ಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Madyapradesh: ಅಂಬ್ಯುಲೆನ್ಸ್ ಇಲ್ಲದೆ, ಮಗಳ ಮೃತದೇಹವನ್ನು ಬೈಕ್ ನಲ್ಲೇ ಕೊಂಡೊಯ್ದ ತಂದೆ!

Leave A Reply

Your email address will not be published.