ISRO News: ಅಂತರಿಕ್ಷದಲ್ಲೇ ತಂಗೋ ಇಸ್ರೋ ಗಗನಯಾತ್ರಿಗಳಿಗೆ ಸವಿಯಲು ಸಿಗುತ್ತೆ ಮೈಸೂರಿನ ಇಡ್ಲಿ-ಸಾಂಬಾರ್‌! ಜೊತೆಗೆ ಬಿರಿಯಾನಿಯೂ ರೆಡಿ!

Desi meals for Isro Gaganyaan space exploresrs

ISRO Gaganyaan: ಟ್ರಿಪ್, ಪಿಕ್ನಿಕ್(Trip, Picnic) ಎಂದೆಲ್ಲಾ ಸುತ್ತಾಡೋ ಮಂದಿ ತಾವು ಹೋದಲ್ಲೆಲ್ಲ ರುಚಿಕಟ್ಟಾದ ಭಕ್ಷ, ಭೋಜನಗಳನ್ನು ಸೇವಿಸಿ ಆರಾಮಾಗಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುತ್ತಾರೆ. ಆದರೆ ಆಕಾಶಕ್ಕೆ ಟ್ರಿಪ್ ಹೋದವರ, ಅಂದರೆ ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳ(astronaut) ಕಥೆ ಏನು? ಅವರು ಗಗನಯಾತ್ರೆ (ISRO Gaganyaan)ಯಲ್ಲಿರುವಾಗ ನಮ್ಮಂತೆ ಮಾಮೂಲಿ ಆಹಾರ ಸವಿಯಬಹುದೆ? ಎಂದು ಎಂದಾದರೂ ಯೋಚಿಸಿದ್ದೀರಾ? ಇಂತಹ ಪ್ರಶ್ನೆ ನಿಮ್ಮ ತಲೆಯಲ್ಲಿ ಬಂದಿದೆಯಾ? ಸದ್ಯ ಈಗಲಾದರೂ ಬಂದಿರಬಹುದು. ಆದರೆ ʻಯಾಕಿಲ್ಲ? ಖಂಡಿತವಾಗಿಯೂ ಸವಿಯಬಹುದು, ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

 

ಹೌದು, ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾತ್ರೆ ಮಿಷನ್ ಅನ್ನು 2022ರಲ್ಲಿ ಪ್ರಾರಂಭಿಸಲು ಯೋಚಿಸಲಾಗಿತ್ತು. ಆದರೆ ಕೋವಿಡ್(Covid) ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ 2024ರ 4ನೇ ತ್ರೈಮಾಸಿಕ ವೇಳೆಗೆ ಗಗನಯಾನ ಕೈಗೊಳ್ಳಲು ಇಸ್ರೋ ಉದ್ದೇಶಿಸಿದೆ. ನಾಲ್ವರು ಯಾತ್ರಿಗಳ ಚೊಚ್ಚಲ ಗಗನಯಾತ್ರೆಗೆ ಸಿದ್ಧತೆ ನಡೆದಿದ್ದು, ಅವರಿಗೆ ದೇಶ ಹಾಗೂ ವಿದೇಶದಲ್ಲಿ ತರಬೇತಿ ನೀಡಲಾಗುತ್ತಿದೆ. 5ರಿಂದ 7 ದಿನಗಳ ಕಾಲ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ತಂಗಲಿದ್ದಾರೆ. ಈ ಅವಧಿಯಲ್ಲಿ ಬಾಹ್ಯಾಕಾಶಕ್ಕೆ ಹೊಂದಾಣಿಕೆ ಅಗುವಂತಹ ಆಹಾರವನ್ನು ಮೈಸೂರಿನ ಡಿಎಫ್‌ಆರ್‌ಎಲ್‌(DFRL) ಸಿದ್ಧಪಡಿಸಿದೆ.

ಅಲ್ಲದೆ ಇನ್ನೂ ಮುಖ್ಯವಾದ ವಿಷಯವೆಂದರೆ ಗಗನಯಾತ್ರಿಗಳು ಅಂತರಿಕ್ಷದಲ್ಲಿ ನಮ್ಮ ಮೈಸೂರಿನ ಭಕ್ಷಗಳನ್ನು ಸವಿಯಲಿದ್ದಾರೆ. ಹೌದು, ಅದೂ ಕೂಡ ಅವರು ಮೈಸೂರು ಇಡ್ಲಿ-ಸಾಂಬಾರ್(Idli Sambar), ಬಿರಿಯಾನಿ(Biryani) ಸವಿಯಲಿದ್ದಾರೆ!

ಹೌದು, ಡಿಎಫ್‌ಆರ್‌ಎಲ್ ಒಟ್ಟು 40 ಬಗೆಯ ಸಸ್ಯಾಹಾರ ಮತ್ತು ಮಾಂಸಾಹಾರ ಖಾದ್ಯಗಳನ್ನು ಗಗನಯಾತ್ರಿಗಳಿಗೋಸ್ಕರ ತಯಾರಿಸಿದೆ ಎನ್ನಲಾಗಿದೆ. ಆಹಾರ ಸಿದ್ಧಪಡಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪ್ರತಿಯೊಂದು ಆಹಾರಕ್ಕೂ ಇಸ್ರೋ(Isro) ದಿಂದ ಅನುಮತಿ ಸಿಕ್ಕಿದೆ. ಆದರೆ, ಕೆಲವು ಆಹಾರಗಳಲ್ಲಿ ಉಪ್ಪು ಹಾಗೂ ಖಾರದ ಪ್ರಮಾಣ ಹೆಚ್ಚಿದೆ ಎಂದು ಗಗನಯಾತ್ರಿಗಳು ತಿಳಿಸಿದ್ದು, ರುಚಿಗೆ ತಕ್ಕಂತೆ ಬದಲಾವಣೆ ಮಾಡಬೇಕಾಗಿದೆ.

1984ರಲ್ಲೇ ರಷ್ಯಾ ಸೊಯುಜ್ ಟಿ-11 ಅಂತರಿಕ್ಷ ಯೋಜನೆ ಕೈಗೊಂಡ ವೇಳೆ ಗಗನ ಯಾತ್ರಿಗಳಿಗೆ ಡಿಎಫ್‌ಆರ್‌ಎಲ್‌ ಆಹಾರ ಪೂರೈಸಿತ್ತು. ಆಗ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಗಗನಯಾತ್ರೆ ಕೈಗೊಂಡಿದ್ದರು. ಇದೀಗ ಇಸ್ರೋ ಕೈಗೊಳ್ಳುತ್ತಿರುವ ಗಗನಯಾತ್ರೆಯಲ್ಲಿ ಮೈಸೂರಿನ ಡಿಎಫ್‌ಆರ್‌ಎಲ್‌ ಭಾಗವಾಗುತ್ತಿರುವುದು ಹೆಮ್ಮೆಯ ವಿಚಾರ.

ಇಡ್ಲಿ- ಸಾಂಬಾರ್, ಎಗ್‌ರೋಲ್ಸ್, ವೆಜ್‌ರೋಲ್ಸ್, ವೆಜ್ ಪಲಾವ್, ಸೂಜಿ ಹಲ್ವಾ, ದಾಲ್ ಹಲ್ವಾ, ತೆಂಗಿನಕಾಯಿ ಚಟ್ಟಿ, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ಸೇರಿ ಹಲವು ಬಗೆಯ ಒಟ್ಟು 40 ಆಹಾರ ಪದಾರ್ಥ ತಯಾರಿಸಲಾಗಿದೆ. ಆಹಾರವನ್ನು ಶೇಖರಿಸಿಡಲು ವಿಶೇಷ ಕಂಟೇನರ್‌ಗಳನ್ನೂ ಸಿದ್ಧಪಡಿಸಲಾಗಿದೆ. ಗಗನಯಾತ್ರಿಗಳ ಜತೆಗೆ ಸುಮಾರು 60 ಕೆ.ಜಿ. ಆಹಾರ ಹಾಗೂ 100 .ಲೀಟರ್‌ ನೀರು ರವಾನೆಯಾಗಲಿದೆ. ಡಿಎಫ್‌ಆರ್‌ಎಲ್‌ನಲ್ಲಿ ಒಟ್ಟು 20 ವಿಜ್ಞಾನಿಗಳ ಪರಿಶ್ರಮದಿಂದ ಗಗನಯಾತ್ರಿಗಳಿಗಾಗಿ ಆಹಾರ ಸಿದ್ಧವಾಗಿದೆ.

ಅಂದಹಾಗೆ ಪ್ರತಿ ಖಾದ್ಯವನ್ನು 100 ಗ್ರಾಂನ ಆಹಾರದ ಪ್ಯಾಕೇಟ್‌ಗಳಾಗಿ ಸಿದ್ಧಪಡಿಸಲಾಗಿದೆ. ಈ ಆಹಾರವನ್ನು ಒಂದು ವರ್ಷದವರೆಗೆ ಬಳಕೆ ಮಾಡಬಹುದು. ಇವು ಅತ್ಯಂತ ಕಡಿಮೆ ತೂಕ ಹೊಂದಿದ್ದು, ಹೆಚ್ಚು ಪೌಷ್ಟಿಕಾಂಶ ಇದೆ ಸಂಸ್ಥೆಯು ತಿಳಿಸಿದೆ.

ಇದನ್ನೂ ಓದಿ:Pooja Hegde: ಸಾಲು ಸಾಲು ಸಿನಿಮಾಗಳಲ್ಲಿ ಸೋಲುಂಡ ಪೂಜಾ ಹೆಗ್ಡೆ; ಕೊನೆಗೆ ಐಟಂ ಡ್ಯಾನ್ಸಿನತ್ತ ಮುಖಮಾಡಿದ ಕರಾವಳಿ ಬ್ಯೂಟಿ!

Leave A Reply

Your email address will not be published.