ಇಂದು ಸಂಜೆಯೊಳಗೆ ಸಿಎಂ ಯಾರೆಂಬುದು ಫೋಷಣೆ ನಿರೀಕ್ಷೆ: ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್‌

CM will be announced by this evening Former DCM Dr. G. Parameshwar

Share the Article

Dr G Parameshwar: ಬೆಂಗಳೂರು : ಇಂದು ಸಂಜೆಯೊಳಗೆ ಸಿಎಂ ಯಾರೆಂಬುದು ಫೋಷಣೆ ನಿರೀಕ್ಷೆ ಇದೆ ಎಂದು ಬೆಂಗಳೂರಲ್ಲಿ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್‌ (Dr G Parameshwar) ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ‍& ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಗ್‌ ಫೈಟ್‌ ನಡುವೆಯೇ ಮಾಧ್ಯಮಗಳೊಂದಿಗೆ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್‌ ಮಾತನಾಡಿ, ಮುಖ್ಯಮಂತ್ರಿ ಆಯ್ಕೆ ಕುರಿತು ಹೈಕಮಾಂಡ್‌ ಚರ್ಚೆ ನಡೆಸುತ್ತಿದೆ. ಮುಖ್ಯಮಂತ್ರಿ ಆಯ್ಕೆ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಹೈಕಮಾಂಡ್‌ ನಾಯಕರು ಅಂತಿಮವಾಗಿ ನಿರ್ಧಾರ ಕೈಗೊಳ್ತಾರೆ. ಇಂದು ಸಂಜೆಯೊಳಗೆ ಸಿಎಂ ಯಾರೆಂದು ಘೋಷಣೆ ನಿರೀಕ್ಷೆಯಿದೆ. ಸಿಎಂ ಆಯ್ಕೆ ಕುರಿತು ಹೈಕಮಾಂಡ್‌ ಚರ್ಚೆ ನಡೆಸುತ್ತಿದೆ ಎಂದು ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್‌ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ‍& ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಗ್‌ ಫೈಟ್‌ ನಡುವೆಯೇ ಪ್ರಮಾಣ ವಚನಕ್ಕೆ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ. ಅಲ್ಲದೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಪಕ್ಕಾ ಕಾಂಗ್ರೆಸ್‌ ಹೈಕಮಾಂಡ್‌ ಘೋಷಣೆಯೊಂದಿಗೆ ಬಾಕಿ ಇದೆ. ಇಂದು ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಭೇಟಿ ಬಳಿಕ ಚರ್ಚೆ ನಡೆಸಿ, ಅಧಿಕೃತವಾಗಿ ಘೋಷಣೆ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Leave A Reply