Pooja Hegde: ಸಾಲು ಸಾಲು ಸಿನಿಮಾಗಳಲ್ಲಿ ಸೋಲುಂಡ ಪೂಜಾ ಹೆಗ್ಡೆ; ಕೊನೆಗೆ ಐಟಂ ಡ್ಯಾನ್ಸಿನತ್ತ ಮುಖಮಾಡಿದ ಕರಾವಳಿ ಬ್ಯೂಟಿ!

Actress Pooja Hegde looking for item dance after failure of cinema

Pooja Hegde :ನಾಗ ಚೈತನ್ಯ(Naga Chaitanya) ಅಭಿನಯದ ‘ಒಕಾ ಲೈಲಾ ಪಾರೋ'(Oka Laila paro) ಚಿತ್ರದ ಮೂಲಕ ಟಾಲಿವುಡ್‌ಗೆ(Tollywood) ಎಂಟ್ರಿ ಕೊಟ್ಟ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ(Pooja Hegde) ನಂತರ ವರುಣ್ ಅಭಿನಯದ ‘ಮುಕುಂದ'(Mukunda) ಚಿತ್ರದ ಮೂಲಕ ಸದ್ದು ಮಾಡಿದರು. ಆದರೆ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಫ್ಲಾಪ್​ಗಳಿಂದ ಕಂಗೆಟ್ಟಿರುವ ಪೂಜಾ ಹೆಗ್ಡೆ (Pooja Hegde) ಅವರು ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಬೆಸತ್ತಿರೋ ಪೂಜಾ ಸದ್ಯ ಹೊಸ ನಿರ್ಧಾರವೊಂದನ್ನ ಕೈಗೊಂಡಿದ್ದು ಐಟಂ ಹಾಡಿಗೆ ಹೆಜ್ಜೆ ಹಾಕಲು ನಿರ್ಧಾರ ಮಾಡಿದ್ದಾರೆ.

 

ಹೌದು, ನಟಿ ಪೂಜಾ ಹೆಗ್ಡೆ (Pooja Hegde) ಅವರಿಗೆ ನಿರೀಕ್ಷಿತ ಗೆಲುವು ಸಿಗುತ್ತಿಲ್ಲ. ಇತ್ತೀಚೆಗೆ ಅವರು ಮಾಡಿದ ಸಿನಿಮಾಗಳೆಲ್ಲವೂ ಸೋಲುತ್ತಿವೆ. ಹಾಗಾಗಿ ಅವರು ಐಟಂ ಡ್ಯಾನ್ಸ್​ ಮಾಡಲು ಸಜ್ಜಾಗಿದ್ದಾರೆ ಎಂದು ಟಾಲಿವುಡ್​ (Tollywood) ಅಂಗಳಲ್ಲಿ ಗುಸುಗುಸು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಪೂಜಾ ಹೆಗ್ಡೆ ಅವರು ಎಲ್ಲಿಯೂ ಮಾತನಾಡಿಲ್ಲ.

ಸಲ್ಮಾನ್​ ಖಾನ್​, ಹೃತಿಕ್​ ರೋಷನ್​, ಪ್ರಭಾಸ್​, ಅಲ್ಲು ಅರ್ಜುನ್​ ಮುಂತಾದ ಸ್ಟಾರ್​ ಕಲಾವಿದರ ಜೊತೆ ನಟಿಸಿದ ಖ್ಯಾತಿ ಪೂಜಾ ಹಗ್ಡೆ ಅವರದ್ದು. ಅಲ್ಲು ಅರ್ಜುನ್(Allu Arjun) ಜೊತೆ ‘ಅಲ್ಲಾ ವೈಕುಂಠಪುರಂ’(Vaikuntaporam) ಸಿನಿಮಾದಲ್ಲಿ ನಾಯಕಿಯಾಗಿ ಸಕ್ಸಸ್ ಕಂಡ ಪೂಜಾ ಹೆಗ್ಡೆಗೆ ಸಾಲು ಸಾಲು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಆದರೆ ಮುಂದಿನ ದಿನಗಳಲ್ಲಿ ಮಾಡಿದ ಎಲ್ಲಾ ಸಿನಿಮಾಗಳೂ ನೆಲಕಚ್ಚಿದವು. ಹೀಗಾಗಿ ಸಿನಿಮಾ ಆಯ್ಕೆಗಳಲ್ಲಿ ಪೂಜಾ ಎಡವಿದ್ರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇತ್ತೀಚಿಗೆ ‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್(Kisi ka Bhai kisi ki jan)’ ಚಿತ್ರ ಕೂಡ ಫ್ಲಾಪ್ ಆಗಿದೆ.

ಅಂದಹಾಗೆ ಪೂಜಾ ಹೆಗ್ಡೆ ಅವರಿಗೆ ಸೋಲು ಹೊಸದೇನೂ ಅಲ್ಲ. ಈಗಾಗಲೇ ಅವರು ಅನೇಕ ಚಿತ್ರಗಳಲ್ಲಿ ಸೋಲು ಕಂಡಿದ್ದಾರೆ. ಬಾಲಿವುಡ್​ ಮತ್ತು ಟಾಲಿವುಡ್​ನಲ್ಲಿ ಸಕ್ರಿಯವಾಗಿರುವ ಪೂಜಾ ಹೆಗ್ಡೆ ಅವರು ಅನೇಕ ಸ್ಟಾರ್​ ಹೀರೋಗಳ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಆದರೆ ಈಗ ಸರಿಯಾಗಿ ಅವರಿಗೆ ಸಕ್ಸಸ್​ ಸಿಗುತ್ತಿಲ್ಲ. ಅದಕ್ಕಾಗಿ ಐಟಂ ಡ್ಯಾನ್ಸ್​ (Item Dance) ಮಾಡುವ ಮೂಲಕ ಜನರಿಗೆ ಹತ್ತಿರವಾಗಲು ಅವರು ತೀರ್ಮಾನಿಸಿದ್ದಾರೆ ಎಂದು ಗಾಸಿಪ್​ ಹಬ್ಬಿದೆ.

ಈಗ ಪೂಜಾ ಹೆಗ್ಡೆ ಅವರ ಕೈಯಲ್ಲಿ ಅವಕಾಶಗಳು ಇವೆ. ಆದರೆ ದಿನದಿಂದ ದಿನಕ್ಕೆ ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗುತ್ತಿದೆ. ಐಟಂ ಡ್ಯಾನ್ಸ್​ ಮಾಡಿದರೆ ಸಮಂತಾ(Samnta) ರೀತಿ ಸಕ್ಸಸ್​ ಪಡೆಯಬಹುದು ಎಂದು ಆಲೋಚನೆ ಅವರಿಗೆ ಬಂದಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಹಲವು ನಾಯಕಿಯರು ಕೂಡ ಐಟಂ ಡ್ಯಾನ್ಸ್ ಮಾಡಿ ಸಕ್ಸಸ್ ಕಂಡವರು ಇದ್ದಾರೆ. ದೀಪಿಕಾ ಪಡುಕೋಣೆ, ಸಮಂತಾ, ಕತ್ರಿನಾ ಕೈಫ್ ಸೇರಿದಂತೆ ಐಟಂ ಹಾಡಿಗೆ ಸೊಂಟ ಬಳುಕಿಸಿ ಗೆದ್ದಿದ್ದಾರೆ. ಇದೀಗ ಇದೇ ಹಾದಿಗೆ ಪೂಜಾ ಹೆಗ್ಡೆ ಹೆಜ್ಜೆ ಇಟ್ಟಿದ್ದು, ಐಟಂ ಡ್ಯಾನ್ಸ್ ತೀರ್ಮಾನ ಮಾಡಿದ್ದಾರೆ.

ಈ ನಡುವೆ ಪೂಜಾ ಹೆಗ್ಡೆ ಬಾಲಿವುಡ್‌ನಿಂದ ಆಫರ್ ಪಡೆಯುತ್ತಿದ್ದರೂ ಕಳೆದ ಕೆಲವು ತಿಂಗಳಿಂದ ತೆಲುಗಿನಲ್ಲಿ ಯಾವುದೇ ಸಿನಿಮಾಗೂ ಸಹಿ ಮಾಡಿಲ್ಲ. ಮಹೇಶ್ ಬಾಬು ಸಿನಿಮಾ ಕೂಡ ಅರ್ಧಕ್ಕೆ ನಿಂತಿದೆ ಎನ್ನಲಾಗಿದೆ. ಸದ್ಯ ಪೂಜಾ ಬಳಿ ಯಾವುದೇ ತೆಲುಗು ಸಿನಿಮಾವಿಲ್ಲ. ಹಾಗಾಗಿ ಐಟಂ ಹಾಡುಗಳ (Item Songs) ಮೇಲೆ ಕಣ್ಣಿಟ್ಟಿದ್ದಾರೆ ಎಂಬ ವಿಚಾರವೂ ಹರಿದಾಡುತ್ತಿದೆ.

ಇದನ್ನೂ ಓದಿ:Gold-Silver Price today: ಇಂದು ಚಿನ್ನದ ದರದಲ್ಲಿ ಏರಿಕೆ! ಬೆಳ್ಳಿನೂ ಕಮ್ಮಿ ಇಲ್ಲ!

Leave A Reply

Your email address will not be published.