Economic Offenders: ಆರ್ಥಿಕ ಅಪರಾಧಗಳಲ್ಲಿ ಶಾಮೀಲಾದ ವ್ಯಕ್ತಿಗಳಿಗೆ ವಿಶಿಷ್ಟ ಕೋಡ್! ಯಾರೆಲ್ಲ ಈ ಲಿಸ್ಟ್ ನಲ್ಲಿದ್ದಾರೆ? ಇಲ್ಲಿದೆ ವಿವರ
Unique code for economic offenders list is here
Economic Offenders : ಕೇಂದ್ರ ಸರ್ಕಾರವು (Central government) ಆರ್ಥಿಕ ಅಪರಾಧಿಗಳನ್ನು (Economic offenders) ಮಟ್ಟ ಹಾಕುವ ಸಲುವಾಗಿ ವಿಶಿಷ್ಟ ಕೋಡ್ ಅನ್ನು (unique code) ಪರಿಚಯಿಸಲು ಮುಂದಾಗಿದೆ. ಆರ್ಥಿಕ ಅಪರಾಧಗಳಲ್ಲಿ ಷಾಮೀಲಾದ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ಈ ವಿಶಿಷ್ಟ ಕೋಡ್ ನೀಡಲಾಗುತ್ತದೆ. ಯಾರೆಲ್ಲ ಈ ಲಿಸ್ಟ್ ನಲ್ಲಿದ್ದಾರೆ? ಇಲ್ಲಿದೆ ವಿವರ.
ಈ ಕೋಡ್ ಅಲ್ಫಾ-ನ್ಯೂಮರಿಕ್ ಹಾಗೂ ಸಿಸಟ್ಮ್ ಜನರೇಟೆಡ್ ಆಗಿರಲಿದೆ. ಈ ವಿಶಿಷ್ಟ ಕೋಡ್ ಅನ್ನು ಆರ್ಥಿಕ ಅಪರಾಧಗಳಲ್ಲಿ ಷಾಮೀಲಾದ ವ್ಯಕ್ತಿಗಳ ಪ್ಯಾನ್ ಮತ್ತು ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಹಲವಾರು ತನಿಖಾ ಸಂಸ್ಥೆಗಳಿಗೆ ಆರೋಪಿತ ಕಂಪನಿ ಅಥವಾ ವ್ಯಕ್ತಿ ವಿರುದ್ಧ ತನಿಖೆಗೆ ಸಹಾಯವಾಗಲಿದೆ.
ಪೊಲೀಸ್ ಇಲಾಖೆ ಅಥವಾ ಕೇಂದ್ರೀಯ ತನಿಖಾ ಸಂಸ್ಥೆಗಳು ನ್ಯಾಶನಲ್ ಎಕನಾಮಿಕ್ ಅಫೆನ್ಸ್ ರೆಕಾರ್ಡ್ಸ್‌ಗೆ (national economic offence records) ಅಂಕಿ ಅಂಶಗಳನ್ನು ನೀಡಿದ ಬಳಿಕ ಆರೋಪಿಗೆ ಈ ವಿಶಿಷ್ಟ ಕೋಡ್ ಸಿಗಲಿದೆ. ದಿಲ್ಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ (Manish Sisodia), ಮದ್ಯದ ಉದ್ಯಮಿ ವಿಜಯ್ ಮಲ್ಯ (Vijay mallya), ಮಾಜಿ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ (P. Chidambaram) ಮೊದಲಾದವರಿಗೆ ಈ ವಿಶಿಷ್ಟ ಕೋಡ್ ಸಿಗಲಿದೆ ಎಂದು ಹೇಳಲಾಗಿದೆ. ಹಾಗೆಯೇ ಮುಂದಿನ 4-5 ತಿಂಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ ಎಂದೂ ತಿಳಿದುಬಂದಿದೆ.
ಪ್ರಸ್ತುತ ಆರೋಪಿಗಳ ವಿರುದ್ಧ ತನಿಖೆಗೆ ತನಿಖಾ ಸಂಸ್ಥೆಗಳು ಚಾರ್ಜ್ ಶೀಟ್ ದಾಖಲಾಗುವ ತನಕ ಕಾಯಬೇಕಿದೆ. ಈ ವಿಶಿಷ್ಟ ಕೋಡ್ ತನಿಖೆಯನ್ನು ಚುರುಕುಗೊಳಿಸಲು ಸಹಕಾರಿಯಾಗಲಿದೆ. ಈ ವರ್ಷ ನಡೆಯಲಿರುವ ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಜತೆಗಿನ ಸಭೆಯಲ್ಲಿ ಈ ಪ್ರಾಜೆಕ್ಟ್ ಬಗ್ಗೆ ಭಾರತ ವಿವರಿಸಲಿದೆ.