Man killed Brothers: ಮದುವೆ ಮನೆಯಲ್ಲಿ ಪತ್ನಿ ಜೊತೆ ಸಹೋದರ ಡ್ಯಾನ್ಸ್! ಸಿಟ್ಟಿಗೆದ್ದ ಪತಿ ಮಾಡಿದ ಎರಡು ಕೊಲೆ!

Man killed two brothers in Chattisgarh

Man killed Brothers: ಮದುವೆ ಮನೆ (Marriage) ಅಂದ್ರೆ ಅದೊಂದು ರೀತಿಯ ಸಂತೋಷ ಸಂಭ್ರಮದ ವಾತಾವರಣ ಅಂತಲೇ ಹೇಳಬಹುದು. ಮುಖ್ಯವಾಗಿ ಮದುವೆಯನ್ನು ವಿಶೇಷವಾಗಿಸಲು ಅದ್ದೂರಿಯಾಗಿ ಸ್ಪೆಷಲ್ ಡೆಕೊರೇಶನ್, ಸಾಂಗ್ಸ್, ಡ್ರೆಸ್, ಪಾರ್ಟಿ ಎಲ್ಲವನ್ನೂ ಅರೇಂಜ್ ಮಾಡುತ್ತಾರೆ. ಇವೆಲ್ಲದರ ಹೊರತು ಅಬ್ಬರದ ಡಿಜೆ ಸೌಂಡ್ (Marriage DJ sound) ಇಲ್ಲಾಂದ್ರೆ ಆಗುತ್ತಾ? ಡಿಜೆ ಮ್ಯೂಸಿಕ್, ಸಾಂಗ್, ಡ್ಯಾನ್ಸ್‌ನಿಂದಾನೇ ಮದುವೆ ಮನೆ ಕಳೆ ಹೆಚ್ಚುತ್ತೆ. ಆದ್ರೆ ಇಲ್ಲೊಂದು ಮದುವೆ ಮನೆಯಲ್ಲಿ ಮಾತ್ರ ಡಿಜೆ ಡ್ಯಾನ್ಸ್ ಗೆ ಪತ್ನಿ ಕುಣಿದಳೆಂದು ಕುಡುಕ ಪತಿ ಏನು ಮಾಡಿದ್ದಾನೆ ನೋಡಿ.

 

ಹೌದು, ಛತ್ತೀಸ್​ಗಢ್​​ನ (Chhattisgarh) ಕಬೀರ್​ಧಾಮ್​ ಜಿಲ್ಲೆಯಲ್ಲಿ ತಿನ್ಹಾ ಬೇಗಾ ಎಂಬ ಕುಡುಕನೊಬ್ಬ ಮದುವೆ ಮನೆಯಲ್ಲೇ ಇಬ್ಬರ ಹತ್ಯೆ ಮಾಡಿದ್ದಾನೆ (Chhattisgarh Man killed Brothers). ತನ್ನ ಪತ್ನಿ, ಹಿರಿಯ ಸಹೋದರ ಮತ್ತು ಮೈದುನನ ಮೇಲೆ ಹಲ್ಲೆ ನಡೆಸಿದ್ದಾನೆ. ಇದೀಗ ಆತನ ಪತ್ನಿ ಅಪಾಯದಿಂದ ಪಾರಾಗಿದ್ದು, ಹಿರಿಯ ಸಹೋದರ ಮತ್ತು ಮೈದುನನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೂ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಂಗೂರ ಎಂಬ ಹಳ್ಳಿಯಲ್ಲಿ ಇವರ ಸಂಬಂಧಿಕರ ಮದುವೆಯೊಂದು ನಡೆಯುತ್ತಿತ್ತು. ನೂರಾರು ಜನ ಅತಿಥಿಗಳು ಬಂದಿದ್ದರು. ತಿನ್ಹಾ ಬೇಗಾನ ಪತ್ನಿ ಜಾಲಿ ಮೂಡ್​ನಲ್ಲಿದ್ದಳು. ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಇತರ ಸಂಬಂಧಿಕರು, ಕುಟುಂಬದವರ ಜತೆ ತಾನೂ ಹೆಜ್ಜೆ ಹಾಕುತ್ತ, ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಳು. ಅವಳೊಂದಿಗೆ ತಿನ್ಹಾ ಬೇಗಾನ ಇಬ್ಬರು ಕಿರಿಯ ಸಹೋದರರು ಕೂಡ ಡ್ಯಾನ್ಸ್ ಮಾಡುತ್ತಿದ್ದರು.

ಪತ್ನಿ ಕುಣಿತ ನೋಡಿದ ತಿನ್ಹಾ ಕೆಂಡಾಮಂಡಲನಾಗಿದ್ದಾನೆ. ಮೊದಲೇ ಕುಡಿದಿದ್ದ ಅವನು ಕ್ರೋಧದಿಂದ, ಮಾರಕಾಸ್ತ್ರಗಳಿಂದ ಎಲ್ಲರ ಮೇಲೆ ಹಲ್ಲೆ ಮಾಡಿದ್ದಾನೆ. ಪತ್ನಿ ತನ್ನ ಸಹೋದರರ ಜತೆ ನೃತ್ಯ ಮಾಡುತ್ತಿರುವುದನ್ನು ನೋಡಿ ಸಹಿಸಿಕೊಳ್ಳಲು ಸಾಧ್ಯವಾಗದೆ ಅವನು ಈ ಕೃತ್ಯ ಎಸಗಿದ್ದಾನೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಡಾ. ಲಾಲುಮಂಡ್ ಸಿಂಗ್, ‘ಮೃತರ ಶವಗಳನ್ನು ಪೋಸ್ಟ್ ಮಾರ್ಟಮ್​​ಗೆ ಕಳಿಸಲಾಗಿದೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ನಾವು ಕೇಸ್​ನ್ನು ತನಿಖೆಗೆ ಎತ್ತಿಕೊಂಡಿದ್ದೇವೆ.

ಕೇವಲ ಪತ್ನಿ ಡ್ಯಾನ್ಸ್ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಅವನು ಸಹೋದರರನ್ನು ಹತ್ಯೆ ಮಾಡಿದ್ದಾನೋ ಅಥವಾ ಮೊದಲೇ ಬೇರೆ ಏನಾದರೂ ವೈರತ್ವ ಇತ್ತೋ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿದು ಬರಬೇಕಿದೆ.

ಇದನ್ನೂ ಓದಿ:Bank Account: RBI ನಿಂದ ಗುಡ್ ನ್ಯೂಸ್! ಇನ್ನು ನಿಮ್ಮ ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ಗೆ ದಂಡ ಇಲ್ಲ!

Leave A Reply

Your email address will not be published.