D K Shivkumar: ಏಕಾಂಗಿಯಾಗಿ ದೆಹಲಿಗೆ ಬರಲು ಹೈಕಮಾಂಡ್ ಸೂಚನೆ, ರಾಜಧಾನಿಯತ್ತ ಡಿಕೆಶಿ ದೌಡು! ಸಂಜೆಯ ಹೊತ್ತಿಗೆ ಕರ್ನಾಟಕಕ್ಕೆ ಇಬ್ಬರು ಮುಖ್ಯಮಂತ್ರಿಗಳು !!!

Karnataka Chief Minister both Siddaramaiha and D K Shivakumar

D K Shivkumar: ಸಿದ್ದರಾಮಯ್ಯ(Siddaramaiah) ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟು ತಮ್ಮ ಘಟಾನುಘಟಿ ನಾಯಕರ ಜತೆ ತಂತ್ರಗಾರಿಕೆ ಹೊಸೆಯುತ್ತಿದ್ದಾರೆ. ಅಲ್ಲದೆ ಸಿದ್ದರಾಮಯ್ಯನವರಿಗೆ ಚುನಾವಣೆಯಲ್ಲಿ ಗೆದ್ದಿರೋ ಕಾಂಗ್ರೆಸ್(Congress) ಶಾಸಕರ ಸಂಖ್ಯಾಬಲ ಕೂಡ ಇದೆ. ಜೊತೆಗೆ ಹಲವು ಜನಪ್ರಿಯ ಭಾಗ್ಯ ಗಳನ್ನು ನೀಡಿ ಜನಸಾಮಾನ್ಯರ ಸಿಎಂ ಎಂದು ಜನಪ್ರಿಯಗೊಂಡಿರುವ ಸಿದ್ದರಾಮಯ್ಯನವರ ಕೈ ಒಂದು ಕೈ ಮೇಲೆ ಇದೆ ಎನ್ನಲಾಗಿದೆ.

ಈ ಮಧ್ಯೆ, ಡಿಕೆ ಶಿವಕುಮಾರ್(D K Shivkumar) ಅವರಿಗೆ ಸಂಖ್ಯಾಬಲ ಕಮ್ಮಿ ಇದ್ದರೂ ಅವರು ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಮುಂದೆ ನಿಂತು ಚುನಾವಣೆಯನ್ನು ಎದುರಿಸಿದ್ದರು. ಬಿಜೆಪಿ(BJP)ಯ ಆಡಳಿತದ ವೈಫಲ್ಯ ಮತ್ತು ಇತರ ಹಲವು ತಪ್ಪುಗಳ ಪರಿಣಾಮದಿಂದ ಕಾಂಗ್ರೆಸ್ ಗೆ ಬಹುಮತ ಬಂದಿತ್ತು. ಆದರೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಹೈಕಮಾಂಡ್ಗೆ ಈಗ ಸಿಎಂ ಆಯ್ಕೆಯೇ ದೊಡ್ಡ ಕಗ್ಗಂಟಾಗಿದೆ. ಇಬ್ಬರೂ ನಾಯಕರು ತಮ್ಮ ಪಟ್ಟು ಸಡಿಲಿಸುತ್ತಿಲ್ಲ.

ನಿನ್ನಯೇ ಡಿಕೆಶಿ ದೆಹಲಿಗೆ ತೆರಳಿ ವರಿಷ್ಠರನ್ನು ಅಂತಿಮ ಸುತ್ತಿನಲ್ಲಿ ಭೇಟಿಯಾಗಿ ತಮ್ಮ ವಾದ ಮಂಡಿಸಬೇಕಿತ್ತು. ಆದರೆ ಡಿಕೆ ಶಿವಕುಮಾರ್(D K Shivkumar) ಅವರ ಹುಟ್ಟುಹಬ್ಬ ಮತ್ತು ಸಂಜೆಯ ಹೊತ್ತಿಗೆ ಡಿಕೆ ಶಿವಕುಮಾರ್ ಅವರಿಗೆ ಕಾಣಿಸಿಕೊಂಡ ಸಣ್ಣ ಹೊಟ್ಟೆ ನೋವಿನ ಕಾರಣದಿಂದ ಅವರ ನಿನ್ನೆಯ ದೆಹಲಿ(Delhi)ಪ್ರಯಾಣ ನಿಂತುಹೋಗಿತ್ತು. ನಿನ್ನೆ ಏಳುವರೆಗೆ ಬುಕ್ ಆಗಿದ್ದ ವಿಮಾನದಲ್ಲಿ ಡಿಕೆಶಿ ತೆರಳಿರಲಿಲ್ಲ. ಆದರೆ ಇಂದು ಡಿಕೆಶಿ ಅವರು ಹೈಕಮಾಂಡ್ ಆದೇಶದಂತೆ ಏಕಾಂಗಿಯಾಗಿ ದೆಹಲಿ ಪ್ರಯಾಣ ಬೆಳೆಸಿದ್ದಾರೆ. ಹಾಗಾಗಿ ಇವತ್ತು ಸಂಜೆಯೊಳಗೆ ‘ಯಾರಾಗ್ತಾರೆ ಮುಂದಿನ ಮುಖ್ಯಮಂತ್ರಿ ?’ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲಿದೆ.

ಡಿಕೆ ಶಿವಕುಮಾರ್ ಅವರು ನಿನ್ನೆ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ ಎಮೋಷನಲ್ ದಾಳ ಉರುಳಿಸಿದ್ದರು. ” ಹೋರಾಟದಲ್ಲಿ ಯಶಸ್ಸು ಸಿಗಬೇಕಾದರೆ ಧರ್ಮರಾಯನಂತೆ ತಾಳ್ಮೆ ಇರಬೇಕು, ದಾನ ಶೂರ ಕರ್ಣನ ಹಾಗಿರಬೇಕು, ಅರ್ಜುನನ ಗುರಿ, ಭೀಮನ ಬಲ, ಕೃಷ್ಣನ ತಂತ್ರಗಾರಿಕೆ ಮತ್ತು ವಿದುರನ ನೀತಿ ಇರಬೇಕು ನನಗೆ ಯಾರ ಬೆಂಬಲವೂ ಬೇಡ, ಎಷ್ಟು ಜನರಾದರೂ ಜನರನ್ನಾದರೂ ಅವರು ಕರೆದೊಯ್ಯಲಿ ನನ್ನನ್ನು ನೀವು ಬಂಡೆ ಎಂದು ಕರೆದಿದ್ದೀರಿ. ಬಂಡೆ ಅಂದರೆ ಪ್ರಕೃತಿ. ನನ್ನನ್ನು ಏನು ಬೇಕಾದರೂ ಹೇಗೆ ಬೇಕಾದರೂ ಬಳಸಿಕೊಳ್ಳಲಿ. ನನಗೆ ತಾಳ್ಮೆ ಇದೆ. ಸಮಯ ಪ್ರಜ್ಞೆ ಇದೆ ” ಎಂದಿದ್ದರು ಡಿಕೆಶಿ.

ಈಗ ದೆಹಲಿಯಲ್ಲಿ ಮೊದಲಿಗೆ ನಾನು ಶ್ರೀಮತಿ ಸೋನಿಯಾ ಗಾಂಧಿ(Soinia Gandhi) ಭೇಟಿಯಾಗಬೇಕು ಎನ್ನುತ್ತಿದ್ದಾರೆ ಡಿಕೆ ಶಿವಕುಮಾರ್. ಯಾಕೆಂದರೆ ಡಿಕೆ ಶಿವಕುಮಾರ್ ಗೆ ಯಾವತ್ತೂ ಬೆಂಬಲವಾಗಿ ನಿಂತವರು ಶ್ರೀಮತಿ ಸೋನಿಯಾ ಗಾಂಧಿ. ಆದರೆ ಮಗ ರಾಹುಲ್ ಗಾಂಧಿ(Rahul Gandhi) ಯವರು ಸಿದ್ದು ಪರ ಒಲವು ಇಟ್ಟುಕೊಂಡಿದ್ದಾರೆ. ‘ ನೀವೇ ಮುಖ್ಯಮಂತ್ರಿ ‘ ಎಂದು ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿ ಭರವಸೆಯನ್ನೂ ಕೂಡಾ ನೀಡಿದ್ದಾರೆ ಎನ್ನಲಾಗಿದೆ.

ನಿನ್ನೆ ಸಂಜೆ ಸಿದ್ದರಾಮಯ್ಯನವರು ಏಕಾಏಕಿ ರಾಷ್ಟ್ರೀಯ ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿ ಹೈಕಮಾಂಡ್ಗೆ ತಮ್ಮ ಪ್ರದರ್ಶನ ಮತ್ತು ತಮಗಿರುವ ಬೆಂಬಲವನ್ನು ಪರೋಕ್ಷವಾಗಿ ತಿಳಿಸಿದ್ದರು. ಈಗ ಒಟ್ಟಾರೆ ನಿರ್ಧಾರ ಹೈಕಮಾಂಡ್ ನಲ್ಲಿದೆ. ಸೋನಿಯಾ ಗಾಂಧಿ ಅವರು ಸಿಂಹ ಪ್ರವಾಸದಲ್ಲಿದ್ದಾರೆ. ಅವರು ಮಧ್ಯಾಹ್ನದ ಹೊತ್ತಿಗೆ ದೆಹಲಿಗೆ ಬರುವವರಿದ್ದು, ಆನಂತರ ಮುಖ್ಯಮಂತ್ರಿ ಹುದ್ದೆಯ ಅಂತಿಮ ನಿರ್ಧಾರ ಆಗಲಿದೆ. ಕಾಂಗ್ರೆಸ್ ಅಧಿಕಾರ ಹಂಚಿಕೆ ಎಂದೇ ಈ ಕಗ್ಗಂಟಿಗೆ ಪರಿಹಾರ. 30-70 ಅಥವಾ 40-60 ಅಥವಾ 50-50 ಸೂತ್ರದ ಮೇರೆಗೆ ಅಧಿಕಾರ ಹಂಚಿಕೆ ಆಗಲಿದೆ ಎನ್ನಲಾಗಿದೆ. ಅದರಲ್ಲಿಯೂ, ಮೊದಲರ್ಧಕ್ಕೆ ಸಿದ್ದರಾಮಯ್ಯನವರು ಸಿಎಂ ಆಗೋದು ಪಕ್ಕಾ ಎನ್ನಲಾಗಿದೆ. ಇಂದು ಸಂಜೆಯ ಒಳಗೆ ದೆಹಲಿಯಿಂದ ಇಬ್ಬಿಬ್ಬರು ಭಾವೀ ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಬರಲಿದ್ದಾರೆ.

ಇದನ್ನೂ ಓದಿ:Jagadish Shetter: ಸೋತರೂ ಜಗದೀಶ್ ಶೆಟ್ಟರ್ ಗೆ ಒಲಿಯಲಿದೆ ಮಂತ್ರಿಗಿರಿ? ‘ಕೈ’ ಪಡೆಯ ಲೆಕ್ಕಾಚಾರ ಏನು?

Leave A Reply

Your email address will not be published.