Crime News: ಸ್ವಂತ ಪತ್ನಿಯ ಬೆತ್ತಲೆ ಫೋಟೋ ಶೇರ್: ಪತ್ನಿಯರ ಬದಲಿಸಿಕೊಳ್ಳುವ ಆ್ಯಪ್ ಬಳಸಿಕೊಂಡು ಹೆಂಡತಿಯ ನಗ್ನ ಫೋಟೋ ಮಾರಾಟ !
husband was sharing his wife naked photo
Naked photo of wife: : ತ್ರಿಸ್ಸೂರ್: ಸೆಕ್ಸ್ ಚಾಟ್ ಆ್ಯಪ್ ಬಳಸಿಕೊಂಡು ಪತ್ನಿಯ ಬೆತ್ತಲೆ ಫೋಟೋಗಳನ್ನು ಶೇರ್ ಮಾಡುತ್ತಿದ್ದ ದುಷ್ಟ ಪತಿಯನ್ನು ಕೇರಳದ (Naked photo of wife ) ಎರುಮಪೆಟ್ಟಿ ಪೊಲೀಸರು ಬಂಧಿಸಿದ್ದಾರೆ.
ಹಾಗೆ ಬಂಧಿತನ್ನು 33 ವರ್ಷದ ಸೆಬಿ ಎಂದು ಗುರುತಿಸಲಾಗಿದೆ. ಈತ ಮಂದಂಪರಂಬು ಮೂಲದವನಾಗಿದ್ದು, ಅಲ್ಲಿನ ಎರುಮಪೆಟ್ಟಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಟಿ.ಸಿ. ಅನುರಾಜ್ ಎಂಬುವರು ಆರೋಪಿ ಸೆಬಿಯನ್ನು ಬಂಧಿಸಿದ್ದಾರೆ. ಈತನ ಮೇಲೆ ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸಿರುವ ಆರೋಪ ಕೂಡಾ ಇದೆ.
ಆರೋಪಿ ಸೆಬಿ ಸ್ವಂತ ಪತ್ನಿಯ ಬೆತ್ತಲೆ ಚಿತ್ರಗಳನ್ನು ತೆಗೆಯುತ್ತಿದ್ದ. ನಂತರ ಅದನ್ನು ಇತರರ ಜೊತೆ ಶೇರ್ ಮಾಡುತ್ತಿದ್ದ. ಆತ ಎರಡೂವರೆ ವರ್ಷಗಳ ಹಿಂದೆ ಪಲಕ್ಕಾಡ್ ಮೂಲದ ಮಹಿಳೆಯನ್ನು ವಿವಾಹವಾಗಿದ್ದರು. ಆರ್ಥಿಕವಾಗಿ ಸ್ಥಿತಿವಂತರಲ್ಲದ ಪತ್ನಿಯ ಕುಟುಂಬದಿಂದ ಹತ್ತು ಸವರನ್ ಚಿನ್ನವನ್ನು ಬೇರೆ ವರದಕ್ಷಿಣೆಯಾಗಿ ಸ್ವೀಕರಿಸಿದ್ದರು. ಇದಾದ ಬಳಿಕ ಹೆಚ್ಚಿನ ವರದಕ್ಷಿಣೆಗಾಗಿ ಸೆಬಿ ಮತ್ತು ಆತನ ಕುಟುಂಬದವರು ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದರು. ಬಲವಂತವಾಗಿ ಮದ್ಯ ಕುಡಿಸಿ, ಪತ್ನಿಯನ್ನು ಸೆಬಿ ಹಿಂಸಿಸುತ್ತಿದ್ದ. ಈ ಬಗ್ಗೆ ಮನೆಯವರಿಗೆ ಹೇಳಿ ಯಾಕೆ ಅವರನ್ನು ಚಿಂತೆಗೀಡುಮಾಡಬೇಕು ಅಂತ ತಾನೇ ನೋವು ಅನುಭವಿಸುತ್ತಿದ್ದಳು. ಇದರ ನಡುವೆ ಆಕೆಯ ಬೆತ್ತಲೆ ಫೋಟೋಗಳನ್ನು ಸೆರೆಹಿಡಿದು ಸ್ಲೀಜಿ ಆಪ್‌ನಲ್ಲಿ ಆರೋಪಿ ಪತಿ ಶೇರ್ ಮಾಡಿದ್ದಾನೆ.
ಸ್ವಂತ ಪತ್ನಿಯ ನಗ್ನ ಚಿತ್ರಗಳ ವಿನಿಮಯ:
ಪೊಲೀಸರು ಆರೋಪಿ ಸೆಬಿ ಫೋನ್ ಅನ್ನು ಪರಿಶೀಲಿಸಿದಾಗ ಪತ್ನಿಯರ ನಗ್ನ ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವ ಆ್ಯಪ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ವಿಚಾರ ತಿಳಿದುಬಂದಿದೆ. ಪತ್ನಿಯರನ್ನು ಇತರರಿಗೆ ಪರಿಚಯಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಈ ಅಪ್ಲಿಕೇಶನ್ ಅನ್ನು ಬಳಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುನ್ನಂಕುಲಂ ಸಹಾಯಕ ಆಯುಕ್ತ ಟಿ.ಎಸ್. ಶಿನೋಜ್ ನೇತೃತ್ವದ ತಂಡ ತನಿಖೆ ಆರಂಭಿಸಿದೆ.
ಇದನ್ನು ಓದಿ: Priyanka Gandhi: ಕರ್ನಾಟಕದಲ್ಲಿ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿಗೆ ಸಿಕ್ಕಿದ್ದಾನೆ ಹೊಸ ಬಾಯ್ ಫ್ರೆಂಡ್ !