D K Shivkumar:’ ಬಂಡೆ ಮಾಮ ನೀವೇ ಸಿಎಂ ಆಗಿ’ , ಡಿಕೆಶಿ ಸಿಎಂ ಆಗೋಗೆ ಮಾಸ್ಟರ್ ಪ್ಲಾನ್ ಹೆಣೆದ ಬೆಂಗಳೂರ ಗೃಹಿಣಿ

Housewife wanted D K Shivkuma to become the CM and also gave advice

D K Shivkumar: ಭಾರೀ ಬಹುಮತದೊಂದಿಗೆ ಆರಿಸಿ ಬಂದಿರುವ ಪುರಾತನ ಕಾಂಗ್ರೆಸ್​(Congress) ಪಕ್ಷಕ್ಕೆ ಇದೀಗ ಕರ್ನಾಟಕದ ಮುಂದಿನ ಮುಖ್ಯಮಂತ್ರಿ(CM) ಯಾರಾಗಬೇಕು ಎಂಬ ವಿಚಾರ ಸವಾಲಿನದ್ದಾಗಿದೆ. ಸದ್ಯ ಸಿಎಂ ಆಯ್ಕೆ ವಿಚಾರ ಇದೀಗ ಹೈಕಮಾಂಡ್ ಅಂಗಳದಲ್ಲಿದ್ದು, ಇಬ್ಬರು ಮೇರು ನಾಯಕರಾದ ಸಿದ್ದರಾಮಯ್ಯ(Siddaramaiah) ಹಾಗೂ ಡಿ ಕೆ ಶಿವಕುಮಾರ್(D K Shivkumar) ನಡುವೆ, ಕಿತ್ತಾಟ ಕಾದಾಟ ಜೋರಾಗಿಯೇ ನಡೆದಿದೆ. ಒಟ್ಟಿನಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಮಾತ್ರ ಕುತೂಹಲವಾಗಿಯೇ ಉಳಿದಿದ್ದಾರೆ. ಆದರೆ ಈ ನಡುವೆ ಬೆಂಗಳೂರಿನ(Bangalore) ಸಾಮಾನ್ಯ ಗೃಹಿಣಿ ಒಬ್ಬರು ಡಿಕೆಶಿ ಸಿಎಂ ಆಗಲಿ ಎಂದು ಬಯಸಿದ್ದು, ಇದಕ್ಕಾಗಿ ಸಲಹೆಸಯನ್ನೂ ನೀಡಿದ್ದಾರೆ.

ಹೌದು, ನಿನ್ನೆ ದಿನ ಕಾಂಗ್ರೆಸ್ ಸಿಎಂ ಆಕಾಂಕ್ಷಿ ಡಿಕೆಶಿ ಅವರು ಹೊಟ್ಟೆ ನೋವಿನ ಪ್ರಹಸನಗಳನ್ನೆಲ್ಲಾ ನೋಡುತ್ತಿದ್ದ ರಾಜಧಾನಿಯ ಸಾಮಾನ್ಯ ಗೃಹಿಣಿಯೊಬ್ಬರು (house wife) ಬಂಡೆ ಮಾಮನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುವ ನೆಪದಲ್ಲಿ ಬಂಡೆ ಮಾಮನೇ (DK Shivakumar) ಕರ್ನಾಟಕದ ಮುಖ್ಯಮಂತ್ರಿ (Karnataka Chief Minister) ಆಗಬೇಕು ಎಂದು ಆಶಿಸಿ, ಅದಕ್ಕೊಂದು ಮಾಸ್ಟರ್ ಪ್ಲಾನ್ ಅನ್ನೂ ಅನ್ನೂ ಹೆಣೆದುಕೊಟ್ಟಿದ್ದಾರೆ.

“ಬಂಡೆ ಮಾಮ Happy birthday. ಸುಮ್ಮನೆ ಒಂದು 80 ಜನನ್ನ ಕರ್ಕೊಂಡು ಒಂದು ಪ್ರಾದೇಶಿಕ ಪಕ್ಷ ಕಟ್ಟಿ. ನೀವೇ ಸೂಪರ್ ಬಾಸ್ ಅವಾಗ. Defection law ಕೂಡ apply ಆಗೊಲ್ಲ. ಬಿಜೆಪಿ ಸಪೋರ್ಟ್ ತಗೊಂಡು ನೀವೆ ಮುಖ್ಯಮಂತ್ರಿ ಆಗಿ. ಆಗ CBI ED ಹಾಕಿದ ಕೇಸುಗಳು ಮಾಯ. ಮುಂದಿನ ಸಲ ನಿಮ್ಮ ಪಕ್ಷಕ್ಕೆ ಪೂರ್ಣ ಬಹುಮತ. ಆಮೇಲಿಂದ BJP ನ ಕೈ ಬಿಟ್ರಾಯ್ತೂ. ನಮ್ಮ ಕರ್ನಾಟಕಕ್ಕೂ ಒಂದು ಗಟ್ಟಿ ಪ್ರಾದೇಶಿಕ ಪಕ್ಷ ಬೇಕಿದೆ. ಇದು ನನ್ನ ಪ್ರೀತಿಯ ಸಲಹೆ ಯೋಚನೆ ಮಾಡಿ. ಯಾರೋ ಯಾಕೆ ಸಿಎಂ ಮಾಡ್ಬೇಕು ನಿಮ್ಮನ್ನ ನೀವೆ ಆಗಿ. You are capable” ಎಂದು ಸದಾಶಿವನನಗರ ನಿವಾಸಿ ಸ್ನೇಹಾ ರಮಾಕಾಂತ್​​ ಎಂಬ ಗೃಹಿಣಿ ಉಚಿತ ಸಲಹೆಯನ್ನು ತಮ್ಮ ಸಾಮಾಜಿಕ ಜಾಲತಾಣ ಫೇಸ್​​ಬುಕ್​​ ಖಾತೆಯಲ್ಲಿ ಹರಿಯ ಬಿಟ್ಟಿದ್ದಾರೆ. ಸದ್ಯ ಇದೀಗ ಈ ಸಲಹೆ ಎಲ್ಲೆಡೆ ಭಾರೀ ವೈರಲ್ ಆಗ್ತಿದೆ.

ಇನ್ನು ಸ್ನೇಹಾರ ಈ ಪೋಸ್ಟ್​ಗೆ ನೆಟ್ಟಿಗರು ನೀಡುತ್ತಿರುವ ಪ್ರತಿಕ್ರಿಯೆಗಳು ಅಷ್ಟೇ ಮಜವಾಗಿದ್ದು, ಸಖತ್ತಾಗಿ ಕಾಲೆಳೆಯುತ್ತಿದ್ದಾರೆ! ಕೆಲವರು ನಮ್ಮ ಕರ್ನಾಟಕಕ್ಕೂ ಒಂದು ಗಟ್ಟಿ ಪ್ರಾದೇಶಿಕ ಪಕ್ಷ ಬೇಕಿದೆ – ಎಂದಿದ್ದಾರೆ! ನೈಸ್​. ಗುಡ್​ ಥಿಂಕಿಂಗ್!!! ​ಎಂದೆಲ್ಲಾ ಹೊಗಳಿದ್ದಾರೆ.

ಅಂದಹಾಗೆ ರಾಜಕೀಯವಾಗಿ ಇದು ಸಾಧ್ಯವಾ? ಎಂದರೆ ಅದು ಬೇರೆ ಮಾತಾದೀತು. ಆದರೆ ಇಲ್ಲಿ ಆ ಗೃಹಿಣಿಯ ಕಳಕಳಿ, ಕಾಳಜಿ, ಬಂಡೆ ಮಾಮನ ಬಗೆಗಿರುವ ಅಭಿಮಾನ ಅದಲ್ಲೆಕ್ಕಿಂತ ಹೆಚ್ಚಾಗಿ ಆ ಸ್ಥಾನಕ್ಕೆ ಬಂಡೆ ಮಾಮ ಹೇಗೆ ಅರ್ಹರು, ಅದನ್ನು ದಕ್ಕಿಸಿಕೊಳ್ಳುವುದು ಹೇಗೆ ಎಂಬ ಜಾಣ ವಿಧಾನ ನೀಡಿರುವುದು ನೋಡಿದರೆ ನಿಜಕ್ಕೂ ಸಾಮಾನ್ಯ ಮಹಿಳೆಯರೂ ಇಂದಿನ ರಾಜಕೀಯ ಬೆಳವಣಿಗೆಗಳನ್ನು ಹೇಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಅದಕ್ಕೆ ಹೇಗೆ ಸ್ಪಂದಿಸುತ್ತಿದ್ದಾರೆ, ಮತ್ತು ಅದಕ್ಕೆ ತಮ್ಮದೇ ಆದ ಸಲಹೆಗಳನ್ನು ನೀಡುವಷ್ಟು ಗಾಢವಾಗಿ ರಾಜಕೀಯದಲ್ಲಿ ಹೇಗೆ ತಲ್ಲೀನರಾಗಿದ್ದಾರೆ ಎಂಬುದು ಗೋಚರವಾಗುತ್ತದೆ.

 

https://m.facebook.com/story.php?story_fbid=pfbid02xubhakVfH9itK4aFKnt9wHUYjAqkykq7TwaGpA9xZuvfHZZvN7i3qNQ2Heqztxkql&id=1827836932&mibextid=Nif5oz

 

 

ಇದನ್ನು ಓದಿ: Health benefits of walnuts: ವಾಲ್ ನಟ್ಸ್ ತಿನ್ನುವುದರಿಂದ ಆಗುವ ಅದ್ಭುತ ಪ್ರಯೋಜನಗಳಿವು! 

Leave A Reply

Your email address will not be published.