BBMP election: ವಿಧಾನಸಭೆ ಚುನಾವಣೆ ಮುಕ್ತಾಯ, ಬಿಬಿಎಂಪಿ ಎಲೆಕ್ಷನ್‌ಗೆ ಕಾಂಗ್ರೆಸ್‌ ಚಿತ್ತ! ಯಾವಾಗ?

BBMP election date fix congress party green signal for election

BBMP election: ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದ್ದು, ಕಾಂಗ್ರೆಸ್‌ ಗೆದ್ದು ಬೀಗಿದೆ. ಅಂದ ಹಾಗೆ ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಬಿಬಿಎಂಪಿ ಚುನಾವಣೆ (BBMP Election) ಮಾಡ್ತೀವಿ ಎಂದು ಭರವಸೆಯನ್ನು ನೀಡಿತ್ತು. ಈಗ ಆ ಭರವಸೆ ಈಡೇರಿಸೋಕ್ಕೆ ಕಾಂಗ್ರೆಸ್‌ (Congress) ಮುಂದಾಗಿದೆ. ಇದರಿಂದಾಗಿ ಬಿಬಿಎಂಪಿ ಚುನಾವಣೆಗೆ ಮುನ್ಸೂಚನೆ ದೊರಕಿದೆ.

ಬಿಬಿಎಂಪಿ ಈಗ ಚುನಾವಣೆಗೆ ಸಜ್ಜಾಗಿದೆ. ಕಾಂಗ್ರೆಸ್‌ ಪಕ್ಷ ಈಗ ಚುನಾವಣೆ ನಡೆಸಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಈಗ ಎಲ್ಲೆಲ್ಲೂ ಕಾಂಗ್ರೆಸ್‌ ಅಲೆ ಇದೆ. ಇದೇ ಸಮಯದಲ್ಲಿ ಚುನಾವಣೆ ನಡೆಸಿದರೆ ಬಿಬಿಎಂಪಿ ಚುನಾವಣೆಯಲ್ಲೂ ನಮಗೇ ಹೆಚ್ಚು ಸ್ಥಾನ ಬರುತ್ತದೆ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಬಿಬಿಎಂಪಿ ಕಾರ್ಪೋರೇಟರ್‌ಗಳ ಅಧಿಕಾರವಧಿ ಮುಗಿದು ಎರಡು ವರ್ಷಗಳೇ ಆಗಿದೆ. ಆದರೆ ಬಿಜೆಪಿ ಸರಕಾರ ಏನಾದರೊಂದು ನೆಪವೊಡ್ಡಿ ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಲೇ ಬಂದಿದೆ. ಹೈಕೋರ್ಟ್‌ ಕೂಡಾ ಈ ಬಗ್ಗೆ ಚುನಾವಣೆ ನಡೆಸಿ ಎಂಬ ಆದೇಶ ನೀಡಿದರೂ, ಮೀಸಲಾತಿ ಕ್ಯಾತೆ ತೆಗೆದು ಆರು ತಿಂಗಳ ಗಡುವು ಕೇಳಿತ್ತು ಬಿಜೆಪಿ ಸರಕಾರ. ಈ ಬಗ್ಗೆ ಕಾರ್ಪೊರೇಟರ್‌ಗಳೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಇತ್ತ ಕಡೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಆರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಮಾಡ್ತೀವಿ ಎಂದು ಹೇಳಿದ್ದಾರೆ. ಇತ್ತ ಕಡೆ ಕಾಂಗ್ರೆಸ್‌ ಪಕ್ಷದ ಪಾಲಿಕೆ ಮಾಜಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಅವರು ಅಕ್ಟೋಬರ್‌ ಅಥವಾ ನವಂಬರ್‌ ಒಳಗೆ ಬಿಬಿಎಂಪಿ ಚುನಾವಣೆ ನಡೆಸ್ತೀವಿ, ಹಾಗೂ ಇದರ ಬಗ್ಗೆ ನಮ್ಮ ನಾಯಕರಿಗೆ ಮನವಿ ಮಾಡ್ತೀವಿ ಎಂಬ ಮಾತನ್ನು ಹೇಳಿದ್ದಾರೆ ಎಂದು ವರದಿಯಾಗಿದೆ.

ಕಾಂಗ್ರೆಸ್‌ ನಾಯಕರು, ಮಾಜಿ ಸದಸ್ಯರು ಕೂಡಾ ಸದ್ಯ ರಾಜಧಾನಿಯಲ್ಲಿ ಕಾಂಗ್ರೆಸ್‌ ಅಲೆ ಇದೆ, ಹಾಗಾಗಿ ಈಗಾಗಲೇ ಬಿಬಿಎಂಪಿ ಚುನಾವಣೆ ನಡೆಸಬೇಕು, ಚುನಾವಣೆ ನವೆಂಬರ್‌ ಒಳಗೆ ನಡೆದರೆ ಹೆಚ್ಚು ಸ್ಥಾನ ಸಿಗಬಹುದು, ಕೋರ್ಟ್‌ನಲ್ಲಿ ಪ್ರಕರಣವನ್ನು ಇತ್ಯರ್ಥ ಮಾಡಿ, ಚುನಾವಣೆ ಮಾಡಿದರೆ ಉತ್ತಮ ಎಂದು ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಇತ್ತ ಕಡೆ ಪಾಲಿಕೆ ಚುನಾವಣೆ ನಡೆದರೆ ವಾರ್ಡ್‌ಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರ ತೊಂದರೆ ನಿರ್ವಹಣೆ ಆಗಬಹುದು ಎಂದು ಜನರ ಆಶಯ.

ಇದನ್ನೂ ಓದಿ: ಕೋಟ್ಯಂತರ ರೂಪಾಯಿಗಳ SBI ಗೃಹ ಸಾಲ ಮನ್ನಾ !

Leave A Reply

Your email address will not be published.