Next Chief Minister in Karnataka: ಯಾರಾಗ್ತಾರೆ ಗೊತ್ತಾ ಕರ್ನಾಟಕದ ಸಿಎಂ? ಇಲ್ಲಿದೆ ನೋಡಿ ಕಾಂಗ್ರೆಸ್ ಹೈಕಮಾಂಡ್ ನ ಹೊಸ ಲೆಕ್ಕಾಚಾರ!

Next Chief minister in Karnataka

Karnataka Chief Minister :ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಭಾರಿಸಿದರೂ ಕೂಡ ಪಕ್ಷದಲ್ಲಿ ಇದೀಗ ಸಿಎಂ ಯಾರಾಗಬೇಕು ಎಂಬ ಚರ್ಚೆ ಶುರುವಾಗಿದ್ದು, ಚೋರಾಗಿದೆ. ಇದು ಹೈಕಮಾಂಡ್ ಗೂ ಸದ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹೌದು, ಕಾಂಗ್ರೆಸ್ ಪಾಳಯದಲ್ಲಿ ಮುಂದಿನ ಸಿಎಂ (Karnataka Chief Minister) ಯಾರಾಗಬೇಕು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿಬಂದಿದ್ದು, ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವೆ ಸಿಎಂ ಗಾದಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ರಾತ್ರೋರಾತ್ರಿ ಸಿದ್ದರಾಮಯ್ಯ ಮತ್ತು ಡಿಕೆಶಿ ಮನೆಗಳ ಮುಂದೆ ಅವರ ಬೆಂಬಲಿಗರು ದೊಡ್ಡ ದೊಡ್ಡ ಫ್ಲೆಕ್ಸ್ ಹಾಕಿದ್ದಾರೆ. ಈ ಫ್ಲೆಕ್ಸ್ ರಾಜಕೀಯ ಕಾಂಗ್ರೆಸ್‍ನಲ್ಲಿ ಸಂಚಲನ ಮೂಡಿಸಿದೆ.

ಅಲ್ಲದೆ ಇದೀಗ ಕರ್ನಾಟಕದ ನೂತನ ಮುಖ್ಯಮಂತ್ರಿ ಆಗೋ ಸಂದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇರವಾಗಿ ರವಾನೆ ಮಾಡಿದ್ದಾರೆ. ತಾವು ಈ ಹಿಂದೆ ಸಹಕಾರ ಕೊಟ್ಟ ಮಾದರಿಯಲ್ಲಿಯೇ ಸಿದ್ದರಾಮಯ್ಯ ಅವರು ಈಗ ತಮಗೆ ಸಹಕಾರ ಕೊಡುವ ವಿಶ್ವಾಸವಿದೆ ಎಂದಿದ್ದಾರೆ.

ಅಂದಹಾಗೆ ಕಾಂಗ್ರೆಸ್ ನ ಅಭೂತಪೂರ್ವ ಗೆಲುವಿಗಾಗಿ ಶ್ರಮಿಸಿದ ಈ ಇಬ್ಬರು ನಾಯಕರನ್ನು ದೂರ ಮಾಡುವಂತಿಲ್ಲ. ಹೀಗಾಗಿ ಈ ವಿಚಾರವಾಗಿ ಜಾಣತನದ ಹೆಜ್ಜೆ ಇಟ್ಟಿರೋ ಹೈಕಮಾಂಡ್ ಸದ್ಯ ಸಿಎಂ ಆಯ್ಕೆಯಾಗಿ ಹೊಸ ಸಾರಥಿಯನ್ನು ನೇಮಿಸಿದೆ. ಹೌದು ಈ ಹಿನ್ನೆಲೆ ರಾಜ್ಯದ ವೀಕ್ಷಕರಾಗಿ ಮಹಾರಾಷ್ಟ್ರ(Maharastra) ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ(Susheel Kumar Shinde) ಅವರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಇವರನ್ನು ನೇಮಕ ಮಾಡಿದ್ದು, ಮುಂದಿನ ಸಿಎಂ ಆಯ್ಕೆ ಮಾಡಲು ಇವರ ಸಲಹೆ ಕೋರಿದೆ.

ಈ ಎಲ್ಲಾ ಬೆಳವಣಿಗೆಗಳಾದ ಬಳಿಕ ಖಾಸಗಿ ಹೋಟೆಲಿನಲ್ಲಿ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ (CLP) ಹೈಕಮಾಂಡ್ ವೀಕ್ಷಕರಾದ ಸುಶೀಲ್ ಕುಮಾರ್ ಶಿಂಧೆ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬೆಂಬಲಿಗರಲ್ಲಿ ಅನೇಕರು, ನಮ್ಮ ನಾಯಕನಿಗೆ ಸಿಎಂ ಪಟ್ಟ ಕಟ್ಟಿ ಎಂಬ ಬೇಡಿಕೆ ಮುಂದಿರಿಸಿದ್ದಾರೆ. ಜೊತೆಗೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧ ಎಂಬ ಮಾತನ್ನು ಸೇರಿಸಿದ್ದಾರೆ.

ಇನ್ನು ಕಾಂಗ್ರೆಸ್ ನ ಅಭೂತಪೂರ್ವ ಗೆಲುವಿಗಾಗಿ ಶ್ರಮಿಸಿದ ಈ ಇಬ್ಬರು ನಾಯಕರನ್ನು ದೂರ ಮಾಡುವಂತಿಲ್ಲ. ಹೀಗಾಗಿ ಈ ವಿಚಾರವಾಗಿ ಹೈಕಮಾಂಡ್ ಕೂಡ ಕೆಲ ನಿರ್ಣಯಗಳನ್ನು ಕೈಗೊಂಡಿದೆ. ಅವುಗಳು ಈ ಕೆಳಗಿನಂತಿವೆ.

ಹೈಕಮಾಂಡ್ ಲೆಕ್ಕಾಚಾರ – 01
ಸಿದ್ದರಾಮಯ್ಯ ಸಿಎಂ ಆದಲ್ಲಿ ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿಸಲಾಗುತ್ತದೆ. ಲಿಂಗಾಯತ+ಒಕ್ಕಲಿಗ+ದಲಿತ+ಮುಸ್ಲಿಂ ನಾಯಕರಿಗೆ ಡಿಸಿಎಂ ಹುದ್ದೆ ನೀಡಲಾಗುತ್ತದೆ.

ಹೈಕಮಾಂಡ್ ಲೆಕ್ಕಾಚಾರ – 02
ಡಿಕೆ ಶಿವಕುಮಾರ್ ಸಿಎಂ ಆದಲ್ಲಿ ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿಸಿ, ಲಿಂಗಾಯತ+ಕುರುಬ+ದಲಿತ+ಮುಸ್ಲಿಂ ನಾಯಕರಿಗೆ ಪಟ್ಟ ನೀಡಲಾಗುತ್ತದೆ.

ಹೈಕಮಾಂಡ್ ಲೆಕ್ಕಾಚಾರ – 03
ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಬದಲು ಬೇರೆಯವರು ಸಿಎಂ ಆದಲ್ಲಿ ಜಾತಿ ಆಧಾರಿತವಾಗಿ ಬೇರೆ ಬೇರೆ ಸೂತ್ರ ಹೆಣೆಯಲಾಗುತ್ತದೆ.

ಇದನ್ನೂ ಓದಿ:Pavan Wodeyar: ಬೊಮ್ಮಾಯಿ ಮಾಮ, ತೆಲುಗಿಗೆ ಕೊಡೋ ಟೈಮ್ ಕನ್ನಡಕ್ಕೆ ಕೊಡಲ್ಲ; ಮಾಮ ತೋರಿದ ದುರಹಂಕಾರ ಇನ್ನೂ ನನ್ನ ಕಣ್ಣಿನಲ್ಲಿದೆ ! ಮಾಜಿ ಸಿಎಂ ವಿರುದ್ಧ ಪವನ್ ಒಡೆಯರ್ ಕಿಡಿ

Leave A Reply

Your email address will not be published.