Airhostess Dead: ಕುಡಿದ ಮತ್ತಿನಲ್ಲಿ ಸ್ನೇಹಿತನಿಂದ ಕಾರು ಚಾಲನೆ, ಬಿಎಂಡಬ್ಲ್ಯೂ ಕಾರು-ಬಿಎಂಸಿ ಟ್ರಕ್‌ಗೆ ಡಿಕ್ಕಿ! ಗಗನಸಖಿ ದಾರುಣ ಸಾವು

BMW collide BMC truck Mumbai airhostess dead in juhu

Airhostess Dead: ದೆಹಲಿಯಿಂದ ಮುಂಬೈಗೆ ಬಂದಿದ್ದ ಗಗನಸಖಿಯೋರ್ವಳು ಭೀಕರ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ (Airhostess Dead). ವೈಯಕ್ತಿಕ ಕೆಲಸಕ್ಕಾಗಿ ಬಂದಿದ್ದ ಈ ಸುಂದರಿಯ ಅಪಘಾತದ ವೀಡಿಯೋ ವೈರಲ್‌ ಆಗಿದೆ. ಕುಡಿದ ಮತ್ತಿನಲ್ಲಿನಲ್ಲಿದ್ದ ಆಕೆಯ ಸ್ನೇಹಿತ ಬಿಎಂಡಬ್ಲ್ಯೂ ಕಾರನ್ನು ಚಲಾಯಿಸುತ್ತಿದ್ದು, ಅದೇನಾಯ್ತೋ, ಕಾರು ನಿಯಂತ್ರಣ ತಪ್ಪಿ ಬಿಎಂಸಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಜುಹು ಪ್ರದೇಶದಲ್ಲಿ ನಡೆದಿದೆ. ಪಾರ್ಟಿ ಮುಗಿಸಿ ಬಂದ ನಂತರ ಈ ಭೀಕರ ಘಟನೆ ನಡೆದಿದೆ.

 

ಮೃತ ಯುವತಿಯನ್ನು ಪಲ್ಲವಿ ಭಟ್ಟಾಚಾರ್ಯ ಎಂದು ಗುರುತಿಸಲಾಗಿದೆ. ದೆಹಲಿ ನಿವಾಸಿ, ಆದರೆ ಮೂಲತಃ ಪಶ್ಚಿಮ ಬಂಗಾಳದ ಕೋಲ್ಕತ್ತಾದವರು. ಲೇಸರ್‌ ಸರ್ಜರಿಗಾಗಿ ಮುಂಬೈಗೆ ಬಂದಿಳಿದ ಸಂದರ್ಭದಲ್ಲಿ ಈ ಭೀಕರ ಘಟನೆಗೆ ತುತ್ತಾಗಿದ್ದಾರೆ. 120ಕಿ.ಮೀ. ವೇಗದಲ್ಲಿ ಕಾರು ಚಲಾಯಿಸುತ್ತಿದ್ದದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಪಲ್ಲವಿಯ ಸ್ನೇಹಿತ ಅರ್ಧವ್ಯು ಎಂಬುವರು ಇನ್ನಿಬ್ಬರ ಜೊತೆ ಸೇರಿ ರೆಸ್ಟೋ ಬಾರ್‌ಗೆ ತೆರಳಿದ್ದರು. ಸುಮಾರು 2.30ರ ವೇಳೆಗೆ ಈ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ ಕಾರಿನಲ್ಲಿದ್ದ ಎಲ್ಲರಿಗೂ ತೀವ್ರವಾಗಿ ಗಾಯವಾಗಿದೆ. ಈ ಅಪಘಾತದಲ್ಲಿ ಪಲ್ಲವಿ ಭಟ್ಟಾಚಾರ್ಯ ಮೃತ ಹೊಂದಿದ್ದು, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

 

ಇದನ್ನೂ ಓದಿ:Mangalore Crime: ಮಂಗಳೂರಿನಲ್ಲೊಂದು ಭೀಕರ ಅಪಘಾತ! ಗೂಡ್ಸ್ ರೈಲಿನಡಿ ಸಿಲುಕಿ 17 ಎಮ್ಮೆಗಳು ಮೃತ

Leave A Reply

Your email address will not be published.