Karnataka election: ಯಾರಾಗ್ತಾರೆ ಕರ್ನಾಟಕದ ಹೊಸ ಸಿಎಂ? ಸಿದ್ದು ಸಿಎಂ, ಡಿಕೆಶಿ ಡಿಸಿಎಂ? ಕಾಂಗ್ರೆಸ್​ ಸೂತ್ರ..ಇಂದು ನಿರ್ಧಾರ!!

Karnataka Chief Minister: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ(karnataka Assembly election) ಕರ್ನಾಟಕದ ಜನತೆ ಆಡಳಿತ ರೂಡ ಬಿಜೆಪಿ(BJP)ಯನ್ನು ಹೀನಾಯವಾಗಿ ಸೋಲಿಸಿ, ಕಾಂಗ್ರೆಸ್(Congress) ಕೈಗೆ ಅಧಿಕಾರದ ಗದ್ದುಗೆಯನ್ನು ನೀಡಿದ್ದಾರೆ. ಮುಂದಿನ ವಾರವೇ ಹೊಸ ಸರ್ಕಾರ ರಚನೆಯಾಗಿ ಆಡಳಿತ ನಡೆಸಲಿದೆ. ಸದ್ಯ ಇದೀಗ ಮುಂದಿನ ಪ್ರಶ್ನೆ ಎದ್ದಿರುವುದು ರಾಜ್ಯದ ಮುಂದಿನ ಸಿಎಂ(Karnataka Chief Minister) ಯಾರಾಗಲಿದ್ದಾರೆ ಎಂಬುದು. ಆದರೆ ಇಂದು ಈ ಕುತೂಹಲಕ್ಕೆ ತೆರೆ ಬೀಳಲಿದೆ.

 

ಹೌದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಇಂದು ಸಂಜೆ ನಡೆಯಲಿದ್ದು, ನೂತನ ಮುಖ್ಯಮಂತ್ರಿಯ ಹೆಸರನ್ನು ನಿರ್ಧರಿಸುವ ಸಾಧ್ಯತೆ ಇದೆ. ಸದ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ(Siddaramaiah) ಹಾಗೂ ಡಿಕೆ ಶಿವಕುಮಾರ್‌ (DK Shivkumar)ಇಬ್ಬರೂ ಪ್ರಬಲ ಆಕಾಂಕ್ಷಿಗಳಾಗಿದ್ದು, ಯಾರು ಸಿಎಂ ಆಗುತ್ತಾರೆ ಎಂಬ ಚರ್ಚೆ ಶುರುವಾಗಿದೆ.

ಕಾಂಗ್ರೆಸ್​ ಏನೋ ಬಹುಮತ ಸಾಧಿಸಿದೆ. ಆದರೆ, ಪಕ್ಷದ ಒಳಗೆ ಸಿಎಂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ನಡುವೆ ತೀವ್ರ ಪೈಪೋಟಿ ಇದೆ. ಈ ಸಿಎಂ ಸ್ಥಾನದ ಕಗ್ಗಂಟ್ಟನ್ನು ಕಾಂಗ್ರೆಸ್​ ಹೈಕಮಾಂಡ್​(Hhig command) ಯಾವ ರೀತಿ ಬಗೆಹರಿಸಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.

ಅಂದಹಾಗೆ ಕಾಂಗ್ರೆಸ್​ ಮೂಲಗಳ ಪ್ರಕಾರ ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್​ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಸಿದ್ದು ಸಿಎಂ, ಡಿಕೆಶಿ ಡಿಸಿಎಂ ಸೂತ್ರ ಈಗಾಗಲೇ ರೆಡಿಯಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇಂದು ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಭೆ ನಡೆಸಲಿದ್ದು, ಸಿಎಂ ಸ್ಥಾನದ ಬಗ್ಗೆ ಚರ್ಚಿಸಿದ ಬಳಿಕ ಅಧಿಕೃತ ಘೋಷಣೆಯಾಗಲಿದೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ 2024 ರ ಲೋಕಸಭೆ(Parliament) ಚುನಾವಣೆಗೂ ಮುಂಚಿತವಾಗಿ ಸ್ಪಷ್ಪ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದು, ಬಿಜೆಪಿಯನ್ನು ದಕ್ಷಿಣ ಭಾರತದಿಂದ ಹೊರಹಾಕುವಲ್ಲಿ ಯಶಸ್ವಿಯಾಗಿದೆ. ಸಾಮೂಹಿಕ ನಾಯಕತ್ವ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ(KPCC) ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಆಕ್ರಮಣಕಾರಿ ಪ್ರಚಾರದ ನಂತರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ಣಾಯಕ ಗೆಲುವು ಸಾಧಿಸಿದೆ.

ಇದನ್ನೂ ಓದಿ : Bhatkala: ಕಾಂಗ್ರೆಸ್ ಗೆದ್ದಾಗ ಭಟ್ಕಳದಲ್ಲಿ ಹಾರಿಸಿದ್ದು ಪಾಕಿಸ್ತಾನದ ಧ್ವಜವಲ್ಲ! ಉತ್ತರ ಕನ್ನಡ ಎಸ್ಪಿ ಸ್ಪಷ್ಟನೆ

Leave A Reply

Your email address will not be published.