Independent candidates: ಕರ್ನಾಟಕ ಚುನಾವಣೆಯಲ್ಲಿ ಪಕ್ಷೇತರ, ಇತರಪಕ್ಷಗಳಿಂದ ಗೆದ್ದು ಭೀಗಿದ ಕಲಿಗಳಿವರು!

Karnataka election results independent four candidates won from other parties

Independent candidates: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ(Assembly Election result) ಹೊರಬಿದ್ದಿದ್ದು ಕಾಂಗ್ರೆಸ್​(Congress) ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ. ಈ ನಡುವೆ 4 ಸ್ಥಾನದಲ್ಲಿ ಇತರರು ( Independent candidates) ಗೆಲುವು ಸಾಧಿಸಿದ್ದಾರೆ. ಯಾರವರು?

 

ಹೌದು, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 136, ಬಿಜೆಪಿಯ 65, ಜಾತ್ಯತೀತ ಜನತಾದಳದ 19, ಅಭ್ಯರ್ಥಿಗಳು ಗೆದ್ದಿದ್ದರೆ ನಾಲ್ಕು ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಿದ್ದಾರೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು(Indipendent Candidate) ಸೇರಿದಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಾಗೂ ಸರ್ವೋದಯ ಕರ್ನಾಟಕ ಪಕ್ಷದಿಂದ ತಲಾ ಒಬ್ಬರು ಜಯ ಗಳಿಸಿದ್ದಾರೆ. ಅವರ ಪರಿಚಯ ಇಲ್ಲಿದೆ ನೋಡಿ.

ಹೊಸ ಪಕ್ಷ ಕಟ್ಟಿ ಗೆಲುವು ಸಾಧಿಸಿದ ಜನಾರ್ದನ ರೆಡ್ಡಿ: ಆ ನಾಲ್ವರಲ್ಲಿ ಒಬ್ಬರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಗಂಗಾವತಿ(Gangavati) ಕ್ಷೇತ್ರದ ಅಭ್ಯರ್ಥಿ ಜನಾರ್ದನ ರೆಡ್ಡಿ ಕೂಡ ಒಬ್ಬರು. ಜನಾರ್ದನ ರೆಡ್ಡಿ(Janrdhan reddy) 8268 ಮತಗಳಿಂದ ಗೆಲುವಿನ ಗೋಲು ಹೊಡೆದಿದ್ದಾರೆ. ರೆಡ್ಡಿ ಒಟ್ಟು 65791 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ 57674 ಹಾಗೂ‌ ಬಿಜೆಪಿಯ ಪರಣ್ಣ ಮುನವಳ್ಳಿ 29918 ಮತಗಳನ್ನು ಗಳಿಸಿದರು.

ದರ್ಶನ್ ಪುಟ್ಟಣ್ಣಯ್ಯ(Darshan Puttanayya): ಜೆಡಿಎಸ್‌(JDS) ಭದ್ರಕೋಟೆಯನ್ನು ಛಿದ್ರಗೊಳಿಸಿ ರೈತ ನಾಯಕ ದಿ. ಪುಟ್ಟಣ್ಣಯ್ ಅವರ ಮಗ ದರ್ಶನ್‌ ಪುಟ್ಟಣ್ಣಯ್ಯ ಕೊನೆಗೂ ಗೆಲುವು ಸಾಧಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಪ್ರಮುಖ ವಿಧಾನಸಭಾ ಕ್ಷೇತ್ರವಾದ ಮೇಲುಕೋಟೆಯಲ್ಲಿ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರು 90,387 ಮತಗಳನ್ನು ಪಡೆದಿದ್ದಾರೆ. ಅವರ ಸಮೀಪ ಅಭ್ಯರ್ಥಿ ಸಿಎಸ್ ಪುಟ್ಟರಾಜು ಅವರು 79,424 ಮತಗಳನ್ನು ಪಡೆದಿದ್ದಾರೆ. ಅವರು 9151 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಎಂ. ಪಿ ಲತಾ(M P Lata) : ಹರಪನಹಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ ಪ್ರಕಾಶ್ ಅವರ ಹಿರಿಯ ಮಗಳು ಎಂ.ಪಿ ಲತಾ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಎಂ.ಪಿ.ಲತಾ ಅವರು ಒಟ್ಟು 64589 ಮತ ಗಳಿಸಿ ಸತತ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಕರುಣಾಕರರೆಡ್ಡಿ 50939 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಕೊಟ್ರೇಶ್ 20292 ಮತಗಳನ್ನು ಪಡೆದಿದ್ದಾರೆ.

ಪುಟ್ಟಸ್ವಾಮಿ ಗೌಡ(Puttaswamy gowda): ಗೌರಿಬಿದನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪುಟ್ಟಸ್ವಾಮಿ ಗೌಡ ಅವರು ಕೂಡ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:Belagavi: ಕಾಂಗ್ರೆಸ್ ಗೆಲುವನ್ನು ಸಂಭ್ರಮಿಸಿ ‘ಪಾಕಿಸ್ತಾನ ಜಿಂದಾಬಾದ್’ ಎಂದ ಕಿಡಿಗೇಡಿಗಳು! ನಾಡಿನಾದ್ಯಂತ ವ್ಯಾಪಕ ಆಕ್ರೋಶ!

Leave A Reply

Your email address will not be published.