B L Santosh: ಸೋಲುಣಿಸಿ ವ್ಯಂಗ್ಯವಾಡಿದ ಕಾಂಗ್ರೆಸ್ಸಿಗರಿಗೆ ಬಿ.ಎಲ್ ಸಂತೋಷ್ ಹೊಸ ಸವಾಲ್! ಮುಂದುವರೆಸುತ್ತ ಬಿಜೆಪಿ ತನ್ನ ವ್ಯಾಪಾರದ ಹಳೇ ಚಾಳಿ?

Karnataka assembly election results B L Santhosh Challenges to Congress party

B L Santhosh: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ(karnataka Assembly election) ಕರ್ನಾಟಕದ ಜನತೆ ಆಡಳಿತ ರೂಡ ಬಿಜೆಪಿ(BJP)ಯನ್ನು ಹೀನಾಯವಾಗಿ ಸೋಲಿಸಿ, ಕಾಂಗ್ರೆಸ್(Congress) ಕೈಗೆ ಅಧಿಕಾರದ ಗದ್ದುಗೆಯನ್ನು ನೀಡಿದ್ದಾರೆ. ಬಿಜೆಪಿ ಸೋತದಕ್ಕೆ ಕಾಂಗ್ರೆಸ್ ನಾಯಕರು ವ್ಯಂಗ್ಯವಾಡುತ್ತಿದ್ದಾರೆ. ಆದರೀಗ ಇದಕ್ಕೆ ತಿರುಗೇಟು ನೀಡಿರೋ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್(B L Santhosh) ಹೊಸ ಸವಾಲೆಸೆದಿದ್ದಾರೆ.

ಹೌದು, ಈ ಸಂಬಂಧ ಫೇಸ್‌ಬುಕ್‌(Face Book)ನಲ್ಲಿ ಬರೆದುಕೊಂಡಿರುವ ಅವರು, ಇನ್ನು 12 ತಿಂಗಳಿನೊಳಗೆ 31,000ಕ್ಕೆ ಮತ್ತೆ 10,000 ಸೇರಿಸಿ 41,000 ಬೂತ್‍ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ ಎಂದು ಚಾಲೆಂಜ್ ಹಾಕಿದ್ದಾರೆ.

ಫೇಸ್‌ಬುಕ್‌ ನಲ್ಲೇನಿದೆ..?: ಕಲಿಯುತ್ತೇವೆ, ಸೋಲಿನಿಂದ, ಹಿನ್ನಡೆಗಳಿಂದ, ತಪ್ಪುಗಳಿಂದ ಉತ್ತರಿಸುತ್ತೇವೆ. ಟೀಕೆಗಳಿಗೆ, ಕುಹಕಗಳಿಗೆ, ಒಡಕು ಮಾತುಗಳಿಗೆ ನಮ್ಮ ಗತಿಶೀಲತೆಯಿಂದ ನಾವು ಇರಲಿಕ್ಕೇ ಬಂದವರು, ಗೆಲ್ಲಲಿಕ್ಕೇ ಬಂದವರು. ನಮಗೆ ಸೋಲು ಕ್ಷಣಿಕ, ಮುನ್ನಡೆ ಸತತ. ಇನ್ನು 12 ತಿಂಗಳಿನೊಳಗೆ 31,000ಕ್ಕೆ ಮತ್ತೆ 10,000 ಸೇರಿಸಿ 41,000 ಬೂತ್‍ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ ಎಂದು ಚಾಲೆಂಜ್ ಹಾಕಿದ್ದಾರೆ.

ಅಂದಹಾಗೆ ವಿಜಯದ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮೂಲಕ ಬಿ.ಎಲ್.ಸಂತೋಷ್ ಅವರಿಗೆ ಟಕ್ಕರ್ ಕೊಡುವ ಕೆಲಸ ಮಾಡಿತ್ತು. ಬಿ.ಎಲ್.ಸಂತೋಷ್ ಅವರೇ, ಸೌಖ್ಯವೇ, ಸಂತೋಷವೇ?! ಅಂದ ಹಾಗೆ ತಾವು ಹೇಳಿದ 31,000 ಬೂತ್‌ಗಳು ಯಾವವು? STD ಬೂತ್‌ಗಳಾ? ಎಂದು ಲೇವಡಿ ಮಾಡಿತ್ತು. ಈ ನಿಟ್ಟಿನಲ್ಲಿ ಸಂತೋಷ್ ಅವರು ಇನ್ನು ಒಂದು ವರ್ಷದ ಒಳಗಾಗಿ 31000ಕ್ಕೆ ಮತ್ತೆ 10000 ಸೇರಿಸಿ, 41000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ ಎಂದು ಕಾಂಗ್ರೆಸ್​ಗೆ ಸವಾಲು ಎಸೆದಿದ್ದಾರೆ.

ಇದೆಲ್ಲದರ ನಡುವೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಮ್ಮ ಜವಾಬ್ದಾರಿ ನಿರ್ವಹಿಸುವ ನೆಪವೊಡ್ಡಿ, ಪ್ರತಿಯೊಂದರಲ್ಲಿ ‘ಶಕ್ತಿ’ಪ್ರದರ್ಶನಕ್ಕೆ ಮುಂದಾದದ್ದು ಚುನಾವಣೆಯಲ್ಲಿ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ. ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಲಸ ಬಿಟ್ಟು ಉಳಿದೆಲ್ಲವನ್ನೂ ನಿಭಾಯಿಸುತ್ತಿದ್ದು, ಸಂಘಟನಾ ಬಲ ಇನ್ನಷ್ಟು ಕುಸಿಯುವ ಮುನ್ನ ಸಂಘದ ಸೇವೆಗೆ ಮರಳಿ ಕರೆಯಿಸಿಕೊಳ್ಳಬೇಕು ಎಂದು ಕೇಳಿಬರುತ್ತಿದ್ದ ಸಣ್ಣಧ್ವನಿಗೆ ಚುನಾವಣೆ ಸೋಲು ಬಲ ತುಂಬಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ: Karnataka election – ಯಾರಾಗ್ತಾರೆ ಕರ್ನಾಟಕದ ಹೊಸ ಸಿಎಂ? ಸಿದ್ದು ಸಿಎಂ, ಡಿಕೆಶಿ ಡಿಸಿಎಂ? ಕಾಂಗ್ರೆಸ್​ ಸೂತ್ರ..ಇಂದು ನಿರ್ಧಾರ!!

Leave A Reply

Your email address will not be published.