Spy Camera: ತನ್ನ ಮನೆ ಮಾಲೀಕಳ ಬೆಡ್‌ರೂಂ ನಲ್ಲಿ ಸ್ಪೈ ಕ್ಯಾಮೆರಾ ಇಟ್ಟ ಕೆಲಸದಾಳು! ನಂತರ ಏನಾಯ್ತು ಗೊತ್ತಾ?

Gurugram woman accuses domestic help of filming her using spy camera

Spy Camera: ಮಹಿಳೆಯೊಬ್ಬಳು ತಾನು ಮಲಗುವ ಕೋಣೆಯಲ್ಲಿ ಮನೆಯಲ್ಲಿ ಕೆಲಸ ಮಾಡುವವನೊಬ್ಬ ಸ್ಪೈ ಕ್ಯಾಮೆರಾ (Spy Camera) ಅಳವಡಿಸಿ ಆಕ್ಷೇಪಾರ್ಹ ವೀಡಿಯೋಗಳನ್ನು ಮಾಡಿ, ನಂತರ ಬ್ಲ್ಯಾಕ್‌ ಮೇಲ್‌ ಮೂಲಕ ಎರಡು ಲಕ್ಷ ರೂ. ನೀಡಬೇಕೆಂದು ಹೇಳಿದ ಘಟನೆಯೊಂದು ನಡೆದಿದೆ. ಈ ಘಟನೆ ಹರಿಯಾಣದಲ್ಲಿ ಗುರುಗಾಂ ನಲ್ಲಿ ನಡೆದಿದೆ.

ನೌಕರನನ್ನು ಶುಭಂ ಕುಮಾರ್ ಎಂದು ಗುರುತಿಸಲಾಗಿದೆ. ಶುಭಂ ಕುಮಾರ್ ಅವರನ್ನು ಪ್ಲೇಸ್‌ಮೆಂಟ್ ಏಜೆನ್ಸಿಯಿಂದ ನೇಮಿಸಲಾಗಿದೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಶುಭಂ ತನ್ನ ಮನೆಯಲ್ಲಿಯೇ ಇರುತ್ತಿದ್ದು, ಹಾಗೂ ತಾನು ಮಲಗುವ ಕೋಣೆಯಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ. ಈ ವಿಷಯ ತಿಳಿದ ಮಹಿಳೆ ಶುಭಂನನ್ನು ಕೆಲಸದಿಂದ ವಜಾ ಮಾಡಿದ್ದಾಳೆ. ಆದರೆ ಇದಾದ ನಂತರ ಆತನಿಗೆ ಹಣದ ತೊಂದರೆ ಉಂಟಾಗಿದೆ. ನಂತರ ಆ ಮಹಿಳೆಗೆ ಶುಭಂ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ.

ಪೊಲೀಸರ ಪ್ರಕಾರ, ಮಹಿಳೆ ಕಳೆದ ತಿಂಗಳು ತನ್ನ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಕ್ಯಾಮೆರಾ ಇರುವುದು ಅರಿವಿಗೆ ಬಂದಿದೆ. ಕೂಡಲೇ ಇದೆಲ್ಲವೂ ಕೆಲಸದವನ ಕೆಲಸ ಎಂದು ತಿಳಿದ ಕೂಡಲೇ, ಅವನನ್ನು ಕೆಲಸದಿಂದ ತೆಗೆದುಹಾಕಿದ್ದಾಳೆ. ಆದರೂ ನಂತರ ಪೊಲೀಸರಿಗೆ ದೂರು ನೀಡಿರಲಿಲ್ಲ. ಹೀಗೆ ಮಾಡುವುದರಿಂದ ತನಗೆ ಮಾನಹಾನಿಯಾಗಬಹುದೆಂಬ ಭಯದಿಂದ ಸುಮ್ಮನಿದ್ದರು.

ಆದರೆ ಶುಭಂ ಆಕೆಯನ್ನು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ. ಮಹಿಳೆ ತನಗೆ 2 ಲಕ್ಷ ರೂಪಾಯಿ ನೀಡದಿದ್ದರೆ ಆಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೂ ಹೆದರದ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸೈಬರ್ ಕ್ರೈಂ ಪೂರ್ವ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:Bhatkala: ಕಾಂಗ್ರೆಸ್ ಗೆದ್ದಾಗ ಭಟ್ಕಳದಲ್ಲಿ ಹಾರಿಸಿದ್ದು ಪಾಕಿಸ್ತಾನದ ಧ್ವಜವಲ್ಲ! ಉತ್ತರ ಕನ್ನಡ ಎಸ್ಪಿ ಸ್ಪಷ್ಟನೆ

Leave A Reply

Your email address will not be published.