Bhatkala: ಕಾಂಗ್ರೆಸ್ ಗೆದ್ದಾಗ ಭಟ್ಕಳದಲ್ಲಿ ಹಾರಿಸಿದ್ದು ಪಾಕಿಸ್ತಾನದ ಧ್ವಜವಲ್ಲ! ಉತ್ತರ ಕನ್ನಡ ಎಸ್ಪಿ ಸ್ಪಷ್ಟನೆ

Bhatkala pakistan flag issue Uttar Kannada SP Clarification

Bhatkala flag issue: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ(Karnataka Assembly Election)ಕಾಂಗ್ರೆಸ್​(Congress) ಗೆ ಬಹುಮತ ಸಿಕ್ಕಿದ್ದು, ಭಟ್ಕಳ(Bhatkala) ದಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಿದೆ. ಹೀಗಾಗಿ ಕಾಂಗ್ರೆಸ್ ಗೆಲುವನ್ನು ಸಂಭ್ರಮಿಸಲು ಮುಸ್ಲಿಂ(Muslim) ಯುವಕರು ಕೇಸರಿ ಧ್ವಜವನ್ನು ಪಕ್ಕದಲ್ಲಿ ಇಸ್ಲಾಂ ಧ್ವಜವನ್ನು ಹಿಡಿದು ಕುಣಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ವ್ಯಪಕಾ ಖಂಡನೆ ವ್ಯಕ್ತವಾಗುತ್ತಿದೆ. ಆದರೆ ಈ ಬೆನ್ನಲ್ಲೇ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ(Uttar Kannada SP) ಈ ಘಟನೆ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಭಟ್ಕಳ-ಹೊನ್ನಾವರ(Bhtkala-Hinnavar) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸಲು ಕಾಂಗ್ರೆಸ್ ಬೆಂಬಲಿಗರು ಭಟ್ಕಳ ಶಂಶುದ್ದೀನ್ ವೃತ್ತದ(Samshuddin Circle) ಬಳಿ ಹಸಿರು ಹಾಗೂ ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಕಾಂಗ್ರೆಸ್ ಗೆಲುವನ್ನು ಸಂಭ್ರಮಿಸಿದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, “ಕಾಂಗ್ರೆಸ್ ಬೆಂಬಲಿಗರು ‘ಮುಸ್ಲಿಂ ಧ್ವಜ’ ಹಿಡಿದುಕೊಂಡಿದ್ದರು” ಎಂದು ಕೆಲವರು ಹೇಳಿದರೆ , ಮತ್ತೆ ಕೆಲವರು “ಪಾಕಿಸ್ತಾನ ಧ್ವಜ (Bhatkala flag issue) ಹಿಡಿದುಕೊಂಡಿದ್ದರು” ಎಂದೂ ವಾದಿಸಿದ್ದರು.

ಆದರೀಗ ಈ ಕುರಿತು ಸ್ಪಷ್ಟೀಕರಣ ನೀಡಿರುವ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್(SP Vishnuverdhan)., ಕಾಂಗ್ರೆಸ್ ಬೆಂಬಲಿಗರು ಬಳಸಿದ್ದು ಪಾಕಿಸ್ತಾನ ಧ್ವಜವಲ್ಲ. ಅದು ಕೆಲವು ವ್ಯಕ್ತಿಗಳು ವೈಯಕ್ತಿಕವಾಗಿ ಪ್ರದರ್ಶಿಸಿದ್ದ ಧಾರ್ಮಿಕ ಧ್ವಜವಾಗಿತ್ತು ಎಂದು ಹೇಳಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಅದು ಪಾಕಿಸ್ತಾನ ಧ್ವಜವಲ್ಲ ಎಂದು ದೃಢಪಡಿಸಿರುವುದರಿಂದ ಯಾವುದೇ ದೂರನ್ನು ದಾಖಲಿಸಿಕೊಳ್ಳಲಾಗಿಲ್ಲ ಅಥವಾ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂದೂ ತಿಳಿಸಿದ್ದಾರೆ.

ಅಲ್ಲದೆ ಈ ಕುರಿತು ಸ್ಥಳೀಯರು ಪ್ರತಿಕ್ರಿಯಿಸಿ ಕಾಂಗ್ರೆಸ್ ಗೆಲುವಿನಲ್ಲಿ ಹಿಂದೂ ಹಾಗೂ ಮುಸ್ಲಿಂ ಒಗ್ಗಟ್ಟನ್ನು ಪ್ರದರ್ಶಿಸಲು ಸಮಾವೇಶಕ್ಕೆ ಮುಸ್ಲಿಂ ಬೆಂಬಲಿಗರು ಹಸಿರು ಧ್ವಜ ಹಾಗೂ ಹಿಂದೂ ಬೆಂಬಲಿಗರು ಕೇಸರಿ ಧ್ವಜ ತಂದಿದ್ದಾರೆ. ವಾಸ್ತವವಾಗಿ ಕಾಂಗ್ರೆಸ್(Congress) ಅಭ್ಯರ್ಥಿಯ ಗೆಲುವಿನಲ್ಲಿ ಎರಡು ಸಮುದಾಯಗಳೂ ಸಮಾನ ಪಾತ್ರ ನಿರ್ವಹಿಸಿವೆ ಎಂದು ತೋರಿಸಲು ಹಾಗೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: AR Krishnamurthi: ಒಂದು ಮತದ ಅಂತರದಿಂದ ಸೋತಿದ್ದ ಅಭ್ಯರ್ಥಿ 59 ಸಾವಿರ ಮತದ ಮುನ್ನಡೆಯಲ್ಲಿ ಗೆಲುವು

Leave A Reply

Your email address will not be published.