Parineeti-Raghav engagement: ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ಅದ್ಧೂರಿ ಎಂಗೇಜ್​ಮೆಂಟ್! ಪಂಜಾಬಿ ಉಡುಗೆಯಲ್ಲಿ ಮಿಂಚಿದ ಮುದ್ದಾದ ಜೋಡಿ

Actress Parineeti Chopra and Raghav Chadha engagement

Parineeti-Raghav engagement: ಬಾಲಿವುಡ್(Bollywood) ನಟಿ ಪರಿಣಿತಿ ಚೋಪ್ರಾ(Parineeti Chopra), ರಾಜಕೀಯ ನಾಯಕ ಮತ್ತು ಆಮ್ ಆದ್ಮಿ(AAP) ಪಕ್ಷದ ಸಂಸದ ರಾಘವ್ ಚಡ್ಡಾ(Raghav Chadda) ದಾಂಪತ್ಯ ಜೀವನಕ್ಕೆ ಕಾಲಿಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ನಿಶ್ಚಿತಾರ್ಥ  ಸಮಾರಂಭ ಕೂಡ ಅದ್ಧೂರಿಯಾಗಿ ನಡೆದಿದಿದ್ದು, ಭಾವಿ ದಂಪತಿಗಳಿಬ್ಬರು ಪಂಜಾಬಿ(Panjabi) ಉಡುಗೆಯಲ್ಲಿ ಮಿಂಚಿದ್ದಾರೆ.

 

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಸುಗುಸು ಕೆಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರ ಎಂಗೇಜ್‌ಮೆಂಟ್(Parineeti-Raghav engagement) ಈಗಾಗಲೇ ಮುಗಿದಿದೆ, ಅಕ್ಟೋಬರ್‌ನಲ್ಲಿ ವಿವಾಹ ಮಹೋತ್ಸವ ಜರುಗಲಿದೆಯಂತೆ ಎಂಬ ಅಂತೆ ಕಂತೆ ಇತ್ತೀಚೆಗಷ್ಟೇ ಹಬ್ಬಿತ್ತು. ಈ ಎಲ್ಲಾ ಗಾಸಿಪ್‌ಗೆ ಇಂದು ಅಧಿಕೃತ ತೆರೆಬಿದ್ದಿದೆ. ಅದ್ಹೇಗೆ ಅಂದ್ರೆ, ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರ ಎಂಗೇಜ್‌ಮೆಂಟ್ ಇಂದು ಅದ್ಧೂರಿಯಾಗಿ ನಡೆದಿದೆ.

ಹೌದು, ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ಆಮ್‌ ಆದ್ಮಿ ಪಾರ್ಟಿಯ ಸಂಸದ ರಾಘವ್‌ ಚಡ್ಡಾ (Raghav Chadda) ಅದ್ದೂರಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ಪಂಜಾಬಿ ಶೈಲಿಯಲ್ಲಿ ಈ ಜೋಡಿಯ ಎಂಗೇಜ್‌ಮೆಂಟ್‌ ನಡೆದಿದ್ದು, ಪ್ರಿಯಾಂಕಾ ಚೋಪ್ರಾ ಸೇರಿ ಎರಡೂ ಕುಟುಂಬದ ಹಲವರು ಈ ಖುಷಿಯ ಕ್ಷಣದಲ್ಲಿ ಭಾಗಿಯಾಗಿದ್ದರು.

ಎಂಗೇಜ್‌ಮೆಂಟ್‌ನಲ್ಲಿ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಬಿಳಿ ಬಣ್ಣದ ಉಡುಪು ತೊಟ್ಟು ಪಂಜಾಬಿ ಡ್ರೆಸ್ ನಲ್ಲಿ ಸಿಂಪಲ್ ಲುಕ್‌ನಲ್ಲಿ ಕಂಗೊಳಿಸಿದರು. ಇನ್ನು ಒಬ್ಬರು ರಾಜಕಾರಣಿ ಮತ್ತೊಬ್ಬರು ಬಾಲಿವುಡ್ ನಟಿಯಾದ್ದರಿಂದ ಇವರಿಬ್ಬರ ನಿಶ್ಚಿತಾರ್ಥಕ್ಕೆ ಎರಡೂ ಕ್ಷೇತ್ರಗಳ ಗಣ್ಯರು ಕೂಡ ನಿಶ್ಚಿತಾರ್ಥ ಸಮಾರಂಭಕ್ಕೆ ಆಗಮಿಸಿದ್ದರು. ಈ ಸಮಾರಂಭಕ್ಕೆ ಸುಮಾರು 150 ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಈಗಾಗಲೇ ಕೆಲವು ಆಪ್ತರು ಸಾಮಾಜಿಕ ಜಾಲತಾಣಗಳ ಮೂಲಕ ತಾರಾ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ನಿಶ್ಚಿತಾರ್ಥಕ್ಕಾಗಿ ಪರಿಣಿತಿ ಸಹೋದರಿ ಪ್ರಿಯಾಂಕಾ ಚೋಪ್ರಾ(Priyanka Chopra) ಸಹ ಮಗಳ ಜೊತೆ ಭಾರತಕ್ಕೆ ಆಗಮಿಸಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಪರಿಣಿತಿ ಅವರ ಆಪ್ತ ಬಾಲಿವುಡ್ ತಾರೆಯರು ಕೂಡ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಎಂಗೇಜ್​ಮೆಂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪರಿಣಿತಿ ಚೋಪ್ರಾ ಹಾಗೂ ರಾಘವ್ ಚೆಡ್ಡಾ ಇಬ್ಬರೂ ಕೂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Independent candidates: ಕರ್ನಾಟಕ ಚುನಾವಣೆಯಲ್ಲಿ ಪಕ್ಷೇತರ, ಇತರಪಕ್ಷಗಳಿಂದ ಗೆದ್ದು ಭೀಗಿದ ಕಲಿಗಳಿವರು!

Leave A Reply

Your email address will not be published.