ಬೆಳ್ತಂಗಡಿ ಬಿಜೆಪಿ ವಿಜಯೋತ್ಸವಕ್ಕೆ ಕಾಂಗ್ರೆಸ್ ಕಾರ್ಯಕರ್ತನನ್ನೂ ಒಳಕ್ಕೆ ಎಳೆದುಕೊಂಡ 150 ಜನರ ತಂಡ: ನಂತರ ಹಲ್ಲೆ, ಆಸ್ಪತ್ರೆಗೆ ದಾಖಲು !

Congress : ಬೆಳ್ತಂಗಡಿ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಗ್ಯಾಂಗ್ ನಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಇದೀಗ ಕಾಂಗ್ರೆಸ್(Congress) ಕಾರ್ಯಕರ್ತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

ಬೆಳ್ತಂಗಡಿ ತಾಲೂಕಿನ ಪೇರಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ನಿನ್ನೆ ಬೆಳ್ತಂಗಡಿಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ರಕ್ಷಿತ್ ಶಿವರಾಂ ವಿರುದ್ಧ ಜಯಭೇರಿ ಬಾರಿಸಿದ್ದರು. ಆ ಪ್ರಯುಕ್ತ ಇಂದು ವಿಜಯೋತ್ಸವ ನಡೆಯುತ್ತಿತ್ತು.

 

ಪೇರಾಡಿ ಮೂಲಕ ಸಾಗುತ್ತಿದ್ದ 150 ಜನರ ಬೃಹತ್ ಬಿಜೆಪಿ ಕಾರ್ಯಕರ್ತರ ತಂಡ ಅಲ್ಲಿನ ವಿಜಯಾ ವೈನ್ ಶಾಪ್ ಒಂದರ ಬಳಿ ಬಂದಾಗ ಮತ್ತಷ್ಟು ಉತ್ಸಾಹ ಗೊಂಡಿದ್ದರು. ಆಗ ಅಲ್ಲಿಯೇ ಇದ್ದ ದಯಾನಂದ ಪೂಜಾರಿ ಎಂಬ ಕಾಂಗ್ರೆಸ್ ಬೆಂಬಲಿಗನನ್ನೂ ವಿಜಯೋತ್ಸವಕ್ಕೆ ಬರುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡಿ ತಮ್ಮ ಗುಂಪಿನ ಒಳಕ್ಕೆ ಎಳೆದುಕೊಂಡಿದ್ದಾರೆ. ನಾನು ಬರಲ್ಲ ಎಂದರೂ ಬಲವಂತವಾಗಿ ವಿಜಯೋತ್ಸವಕ್ಕೆ ಎಳೆದುಕೊಂಡಿದ್ದಾರೆ ಎಂದು ದೂರಲಾಗಿದೆ.

 

ಆ ನಂತರ ದಯಾನಂದ ಪೂಜಾರಿ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು ಈಗ ದಯಾನಂದ ಅವರು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ವೇಣೂರು ಪೊಲೀಸ್ ಸ್ಟೇಶನ್ ನಲ್ಲಿ ದೂರು ದಾಖಲಾಗಿದೆ.

 

ಇದೀಗ ಆಸ್ಪತ್ರೆಗೆ ಕಾಂಗ್ರೇಸ್ ಪರಾಜಿತ ಅಭ್ಯರ್ಥಿ ರಕ್ಷಿತ್ ಶಿವರಾಂ ಮತ್ತು ಮಾಜಿ ಶಾಸಕ ವಸಂತ ಬಂಗೇರ ಅವರು ಭೇಟಿಯಾಗಿದ್ದಾರೆ. ಆಸ್ಪತ್ರೆಯ ಮುಂದೆ 50 ಕ್ಕೂ ಮಿಗಿಲಾದ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದಾರೆ.

 

Leave A Reply

Your email address will not be published.