7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಡಬಲ್ ಧಮಾಕಾ ; ತುಟ್ಟಿಭತ್ಯೆ ಜೊತೆಗೆ ಫಿಟ್ ಮೆಂಟ್ ಅಂಶವೂ ಹೆಚ್ಚಳ!!
7th pay commission DA Hike and fitment factor hike
7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ (Government Employees) ಭರ್ಜರಿ ಗುಡ್’ನ್ಯೂಸ್ ಇಲ್ಲಿದೆ. ತುಟ್ಟಿಭತ್ಯೆ ಹೆಚ್ಚಳದ (DA hike) ನಿರೀಕ್ಷೆಯಲ್ಲಿದ್ದವರಿಗೆ ಡಬಲ್ ಧಮಾಕ. ಹೌದು, ಜುಲೈ 1ರ ನಂತರ ಡಿಎ ಹೆಚ್ಚಳ ಘೋಷಣೆಯಾಗಲಿದೆ (7th Pay Commission). ಜೊತೆಗೆ ಕೇಂದ್ರ ಸರ್ಕಾರ ಫಿಟ್ ಮೆಂಟ್ ಅಂಶವನ್ನೂ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಎರಡು ಬಾರಿ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುತ್ತದೆ. ಜನವರಿಯಲ್ಲಿ ಮತ್ತು ಜುಲೈನಲ್ಲಿ. ಈಗಾಗಲೇ ಜನವರಿ 2023 ರ ಡಿಎ ಹೆಚ್ಚಾಗಿದೆ. ಈಗ ಮತ್ತೆ ಜುಲೈ 2023ನಲ್ಲಿ ಹೆಚ್ಚಾಗಲು ಬಾಕಿ ಇದೆ.
ಕೇಂದ್ರ ಸರ್ಕಾರವು ಡಿಎ ಹೆಚ್ಚಳ ಮತ್ತು ಫಿಟ್‌ಮೆಂಟ್ ಅಂಶ ಹೆಚ್ಚಳದ ಬಗ್ಗೆ ಏಕಕಾಲದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಫಿಟ್ ಮೆಂಟ್ ಅಂಶ ಹೆಚ್ಚಾದರೆ ನೌಕರರ ಕನಿಷ್ಠ ವೇತನ ಹೆಚ್ಚಾಗಲಿದ್ದು, ರೂ.18,000ದಿಂದ ರೂ.26,000ಕ್ಕೆ ಏರಿಕೆಯಾಗಲಿದೆ. ಪ್ರಸ್ತುತ ಸಾಮಾನ್ಯ ಫಿಟ್‌ಮೆಂಟ್ ಅಂಶವು ಶೇಕಡಾ 2.57 ಆಗಿದೆ.
ಮಾರ್ಚ್‌ನಲ್ಲಿ ಡಿಎ ಶೇ 4ರಷ್ಟು ಏರಿಕೆಯಾಗಿದೆ. ಜೊತೆಗೆ ಡಿಎ ಶೇ 42ಕ್ಕೆ ಏರಿಕೆಯಾಗಿದೆ. ಹಾಗೇ ಜುಲೈ 2023 ರಲ್ಲಿ DA 4 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಶೇ 46ರಷ್ಟು ಡಿಎ ಸಿಗಲಿದೆ. ಇನ್ನು ಕಳೆದ ವರ್ಷ ಜುಲೈ ಡಿಎಯನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್‌ನಲ್ಲಿ ಘೋಷಿಸಿತ್ತು. ಈ ಬಾರಿ ಜುಲೈನಲ್ಲಿಯೇ ಡಿಎ ಹೆಚ್ಚಳದ ಘೋಷಣೆ ಬರಲಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಇದನ್ನೂ ಓದಿ:Rahul Gandhi: ಗಂಭೀರ್ ರೀತಿ ಶಟ್ ಅಪ್ ಎಂದು ಸನ್ನೆ ಮಾಡಿದ ರಾಹುಲ್ ಗಾಂಧಿ ; ಯಾರಿಗೆ ಗೊತ್ತಾ?