ಸಾವಿನ ಸೂತಕದ ನಡುವೆ ಮತಎಣಿಕಾ ಕೇಂದ್ರಕ್ಕೆ ಆಗಮಿಸಿದ ಯಾದಗಿರಿ ಕಾಂಗ್ರೆಸ್ ಅಭ್ಯರ್ಥಿ

Share the Article

ಇಂದು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ ಮನೆಯಲ್ಲಿ ಸಾವಾಗಿದ್ದರೂ ಮತ ಎಣಿಕಾ ಕೇಂದ್ರಕ್ಕೆ ಯಾದಗಿರಿ ಕಾಂಗ್ರೆಸ್ ಅಭ್ಯರ್ಥಿ ಆಗಮಿಸಿ ದ ಘಟನೆ ವರದಿಯಾಗಿದೆ.

ಮೇ 10ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಇಂದು ಫಲಿತಾಂಶ ಇಂದು ಹೊರಬೀಳಲಿದೆ. ಯಾದಗಿರಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರು ಸಹೋದರನ ಮಗ ರೂಪ್ ಕುಮಾರ್ ನಾಯಕ ಅನಾರೋಗ್ಯದಿಂದ ಮೃತಪಟ್ಟಿದ್ದು, ಶವ ಮನೆಯಲ್ಲಿದ್ದರೂ ಸಾವಿನ ಸೂತಕದ ನಡುವೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದಾರೆ. ಇಂದು ಸಂಜೆ ಸಹೋದರನ ಮಗನ ಸುರಪುರದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಮನಸ್ಸಿನಲ್ಲಿ ದುಃಖವಿದ್ರೂ ವಿಧಾನ ಸಭೆ ಚುನಾವಣಾ ಫಲಿತಾಂಶ ಹೊರಬೀಳೋದ್ರಿಂದ ರಾಜಕೀಯ ಭವಿಷ್ಯ ಇಂದು ನಿರ್ಧಾರದ ಬಗ್ಗೆ ಮತಎಣಿಕೆ ಕೇಂದ್ರಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

Leave A Reply