ಶಾಕಿಂಗ್ ನ್ಯೂಸ್: ಪುತ್ತೂರಿನಲ್ಲಿ 3 ನೇ ಸ್ಥಾನದಲ್ಲಿ ಬಿಜೆಪಿ, ಘಟಾನುಘಟಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ !

ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ 11452 ಮತಗಳ ಅಂತರದ ಭಾರೀ ಹಿನ್ನಡೆ.

 

ಪ್ರತಿಷ್ಟಿತ ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ನಿರ್ಗಮಿತ ಅಭ್ಯರ್ಥಿ ಕಾಂಗ್ರೆಸ್ಸಿನ ಜಗದೀಶ್ ಶೆಟ್ಟರ್ 10,500 ಮತಗಳ ಬಾರಿ ಅಂತರದಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ.

ಚಾಮರಾಜನಗರದಲ್ಲಿ ಸೋಮಣ್ಣ ಅವರಿಗೆ ಭಾರೀ ಹಿನ್ನಡೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಕೇವಲ 1859 ಮತಗಳ ಮುನ್ನಡೆ. ವರುಣಾದಲ್ಲಿ ಸಿದ್ದರಾಮಯ್ಯನವರಿಗೆ ಭಾರಿ ಮುನ್ನಡೆ ಲಭ್ಯವಾಗಿದೆ.

ಅಥಣಿಯಲ್ಲಿ ಬಿಜೆಪಿ ನಿರ್ಗಮಿತ ಅಭ್ಯರ್ಥಿ, ಈಗಿನ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ 25,000 ಮತಗಳ ಭಾರೀ ಅಂತರದಲ್ಲಿ ಮುನ್ನುಗ್ಗುತ್ತಿದ್ದಾರೆ.

ಹೊಳೆನರಸೀಪುರದಲ್ಲಿ 7 ನೆ ಸುತ್ತು ಮುಗ್ದಿದ್ದು ಹಾಲಿ ಶಾಸಕ ರೇವಣ್ಣ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಡಿಕೇರಿಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುಂದಿದ್ದಾರೆ.

ಬೆಳ್ತಂಗಡಿಯಲ್ಲಿ 5,150 ಮತಗಳ ಮುನ್ನಡೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ರಕ್ಷಿತ್ ಶಿವರಾಂ ಎದುರು. ಮಂಗಳೂರಿನಲ್ಲಿ ಯುಟಿ ಖಾದರ್ ಅವರು ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಾರೆ. 11044 ಅಂತರ ಇಟ್ಟುಕೊಂಡು ಗೆಲುವಿನತ್ತ ಸಾಗುತ್ತಿದ್ದಾರೆ.

ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ 11 ಮತಗಳಿಂದ ಬಾರಿ ಮುನ್ನಡೆಯಲ್ಲಿದ್ದಾರೆ.

ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಹಿನ್ನಡೆ. ಹೊಸಕೋಟೆಯಲ್ಲಿ ಹಾಲಿ ಶಾಸಕ ಎಂ ಟಿ ನಾಗರಾಜ್ ಗೆ ನಿರಂತರ ಹಿನ್ನಡೆ. ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಗೆ ಮುನ್ನಡೆ ಸಾಧಿಸಿದ್ದಾರೆ.

ಗೋವಿಂದರಾಜನಗರದಲ್ಲಿ ಪ್ರಿಯಾ ಕೃಷ್ಣ ಅವರಿಗೆ ಮುನ್ನಡೆ
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ರಾಮುಲು ಅವರು ಸೋಲಿನತ್ತ ಮುಖ ಮಾಡುತ್ತಿದ್ದಾರೆ. ನಿರಂತರವಾಗಿ ರಾಮುಲು ಹಿನ್ನಡೆ.ಅನುಭವಿಸಿದ್ದಾರೆ. ಈಗ ಗೋಕಾಕ್ ನಲ್ಲಿ ಸಾಹುಕಾರ್ ರಮೇಶ್ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಸುರಪುರದಲ್ಲಿ ರಾಜುಗೌಡ ಹಿನ್ನಡೆ. ಮಾಗಡಿಯಲ್ಲಿ ಬಾಲಕೃಷ್ಣ ಮುನ್ನಡೆ. ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಚಿಕ್ಕಬಳ್ಳಾಪುರದಲ್ಲಿ ಡಾಕ್ಟರ್ ಸುಧಾಕರ್ ಅವರಿಗೆ ಭಾರೀ ಹಿನ್ನಡೆ ಉಂಟಾಗಿದೆ.

ಕುಂದಾಪುರದಲ್ಲಿ ಬಿಜೆಪಿಗೆ ಮೊದಲ ಗೆಲುವು. ಬೆಂಗಳೂರಿನಲ್ಲಿ ಜಮೀರ್ ಗೆಲುವು ಫಿಕ್ಸ್, ಹಾಗೆಯೇ ಕೆಜೆ ಜಾರ್ಜ್ ಗೆಲುವಿನತ್ತ.

ದಕ್ಷಿಣ ಕನ್ನಡ:
ಪುತ್ತೂರು ವಿಧಾನಸಭಾ ಕ್ಷೇತ್ರ ದ ಐದನೇ ಸುತ್ತಿನ ಮತ ಎಣಿಕೆ

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ-20094

ಅರುಣ್ ಪುತ್ತಿಲ-ಪಕ್ಷೇತರ-18873

ಆಶಾ ತಿಮ್ಮಪ್ಪ ಗೌಡ-ಬಿಜೆಪಿ-12505

ಅಶೋಕ್ ಕುಮಾರ್ ರೈ ಲೀಡ್-
1221

ಮಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಗೆ ಗೆಲುವು

ಮುಖ್ಯಮಂತ್ರಿ ಬೊಮ್ಮಾಯಿ ಶಿಗ್ಗಂವ್ ನಲ್ಲಿ ಗೆಲುವು

ಕನಕಪುರದಲ್ಲಿ ಡಿಕೆಶಿ ಗೆಲುವು

ಅಥಣಿಯಲ್ಲಿ ಲಕ್ಷ್ಮಣ ಸವದಿ ಗೆಲುವು

ಬೆಂಗಳೂರಿನ ಮಲ್ಲೇಶ್ವರಂದಲ್ಲಿ ಅಶ್ವಥ ನಾರಾಯಣ ಗೆಲುವು

ಬಸವನಗುಡಿಯಲ್ಲಿ ರವಿ ಸುಬ್ರಮಣ್ಯ ಗೆಲುವು, ಚಾಮರಾಜಪೇಟೆಯಲ್ಲಿ ಜಮೀರ್ ಗೆಲುವು, ನಿವೃತ್ತ ಪೊಲೀಸ ಅಧಿಕಾರಿ ಬಿಜೆಪಿಯ ಭಾಸ್ಕರ್ ರಾವ್ ಅವರಿಗೆ ಸೋಲು.

ಸೊರಬದಲ್ಲಿ ಮಧು ಬಂಗಾರಪ್ಪನಿಗೆ ಜಯ, ಸೋದರ ಕುಮಾರ್. ಬಂಗಾರಪ್ಪಗೆ ಸೋಲು.

ಹಾಸನದಲ್ಲಿ ಒಳ್ಳೆಯ ಕೆಲಸಗಾರ ಬಿಜೆಪಿಯ ಹಾಲಿ ಶಾಸಕ ಪ್ರೀತಂ ಗೌಡಗೆ ಸೋಲು. ಅಲ್ಲಿ ಕಾಂಗ್ರೆಸ್ ನ ಸಾಂಪ್ರದಾಯಿಕ ಓಟುಗಳು ಜೆಡಿಎಸ್ ಅಭ್ಯರ್ಥಿ ಪಾಲಾದ ಶಂಕೆ.

ನಿಖಿಲ್ ಕುಮಾರಸ್ವಾಮಿ ಸೊಲಿನತ್ತ ಸ್ಪಷ್ಟ ಹೆಜ್ಜೆ

ಪ್ರತಿಷ್ಟಿತ ಪುತ್ತೂರಿನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ, ಪಕ್ಷೇತರ ಅರುಣ್ ಪುತ್ತಿಲ ಮುನ್ನಡೆಯಲ್ಲಿ.

ಪದ್ಮನಾಭನಗರದಲ್ಲಿ ಆರ್ ಅಶೋಕ್ ಗೆಲುವು.

ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮೂರುಳ್ಯ ಗೆಲುವು.

Leave A Reply

Your email address will not be published.