DK Shivkumar: ಕರ್ನಾಟಕದ ಮಹಾ ಜನರೇ, ನಿಮ್ಮ ಪಾದಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು! ಅಭೂತಪೂರ್ವ ಗೆಲುವಿನ ಬಳಿಕ ಡಿಕೆ ಶಿವಕುಮಾರ್ ಭಾವುಕ ನುಡಿ

KPCC President DK Shivakumar responds as congress win

DK Shivkumar: 2023ರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಭಾರೀ ಅಚ್ಚರಿಯ ಫಲಿತಾಂಶವನ್ನು ಕನ್ನಡ ನಾಡಿನ ಜನತೆ ನೀಡಿದ್ದಾರೆ. ಆಡಳಿತ ರೂಡ ಬಿಜೆಪಿಗೆ ಹೀನಾಯವಾಗಿ ಸೋಲುಣಿಸಿ ಕಾಂಗ್ರೆಸ್ ಗೆ ಅಭೂತಪೂರ್ವ ಗೆಲುವುನ್ನು ನೀಡಿ ಕೈ ಹಿಡಿದಿದ್ದಾರೆ. ಈ ವೇಳೆ ಕೆಪಿಸಿಸಿ(KPCC) ಅಧ್ಯಕ್ಷ ಡಿಕೆ ಶಿವಕುಮಾರ್(DK Shivkumar) ಅಖಂಡ ಕರ್ನಾಟಕದ ಮಹಾಜನತೆಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಅರ್ಪಿಸಿ ಭಾವುಕರಾಗಿದ್ದಾರೆ.

 

ಹೌದು, ಜಿವನದಲ್ಲಿ ಎಂದೂ ಮರೆಯಲಾಗದಂತಹ ಅಭೂತಪೂರ್ವ ಗೆಲುವು ತಂದುಕೊಟ್ಟ, ಭ್ರಷ್ಟ ಸರಕಾರವನ್ನು ಕಿತ್ತೊಗೆದ ಅಖಂಡ ಕರ್ನಾಟಕದ ಮಹಾಜನತೆಗೆ, ಅವರ ಎಲ್ಲಾ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ನಮ್ಮ ಮೇಲೆ ವಿಶ್ವಾಸ ಇಟ್ಟು ನಿಚ್ಚಳ ಬಹುಮತ ನೀಡಿದ್ದಾರೆ. ಈಗ ಮುಂದಿನ ನಿರ್ಧಾರಗಳ ಬಗ್ಗೆ ಏನೂ ಮಾತನಾಡುವುದಿಲ್ಲ. ಜನರು ಎಲ್ಲಾ ಆವೇಶದಲ್ಲಿ ಇದ್ದಾರೆ. ಈಗ ಏನೂ ಮಾತನಾಡುವುದು ಸರಿಯಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ(Priyanka gandhi) ಅವರಿಗೆ ಈ ಗೆಲುವು ಸಮರ್ಪಣೆ ಮಾಡುತ್ತಿದ್ದೇನೆ. ಸೋನಿಯಾಗಾಂಧಿ(Sonia Gandhi) ಅವರು ನಾನು ತಿಹಾರ್‌ ಜೈಲಿನಿಲ್ಲಿ ಇದ್ದಾಗ ಅಲ್ಲಿಗೆ ಬಂದು ಸಮಾಧಾನಪಡಿಸಿದ್ದರು. ಆಗಲೇ ಅವರಿಗೆ ನನ್ನ ನಿರ್ಧಾರ ತಿಳಿಸಿದ್ದೆ ಎಂದು ಎಂದು ಭಾವಾವೇಶದಿಂದ ಕಣ್ಣೀರು ಹಾಕುತ್ತಾ ಮಾತನಾಡಿದರು.

ಅಲ್ಲದೆ ನನ್ನ ಕಾರ್ಯಕರ್ತರು ಮತ್ತು ನಾಯಕರಿಗೆ ನನ್ನ ಈ ಜಯವನ್ನು ಅರ್ಪಿಸುತ್ತೇನೆ. ಇದು ಸಾಮೂಹಿಕ ನಾಯಕತ್ವ. ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದೇವೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಪ್ರಗತಿ. ಗಾಂಧಿ ಕುಟುಂಬ, ದೇಶ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಂಡಿದ್ದೇವೆ. ಗೆಲುವಿಗೆ ಎಲ್ಲರೂ ಕಾರಣ. ನಾನು ಎಲ್ಲರಿಗೂ ವಂದನೆ ಅರ್ಪಿಸುತ್ತೇನೆ ಎಂದರು.

ಅಂದಹಾಗೆ ಇದು ಒಬ್ಬನಿಂದ ಬಂದಿರುವ ಯಶಸ್ಸಲ್ಲ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಶಾಸಕರುಗಳು, ಎಐಸಿಸಿ ಪದಾಧಿಕಾರಿಗಳು, ಉಸ್ತುವಾರಿಗಳು, ರಾಜ್ಯದ ನಾಯಕರುಗಳು, ಪಕ್ಷದ ಪದಾಧಿಕಾರಿಗಳು, ಬೂತ್ ಮಟ್ಟದಲ್ಲಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿರುವ ಎಲ್ಲಾ ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

Leave A Reply

Your email address will not be published.