Latest Election Update: ಅತಂತ್ರ ವಿಧಾನಸಭೆಯತ್ತ ಕರ್ನಾಟಕ: ಘಟಾನುಘಟಿಗಳು ಮುನ್ನಡೆ ಹಿನ್ನಡೆಯಲ್ಲಿ !

ಕರ್ನಾಟಕದ ವಿಧಾನಸಭಾ ಚುನಾವಣೆಯ ಕೌಂಟ್ ಪ್ರಗತಿಯಲ್ಲಿದೆ. ಮೊದಲ ಹಂತದ ಮತದಾನ ಹೇಳಿಕೆ ಕಾರ್ಯ ಮುಗಿಯಿತು ಎರಡನೇ ಮತ್ತು ಮೂರನೇ ಹಂತದ ಹೇಳಿಕೆಯ ಪ್ರಗತಿಯಲ್ಲಿದೆ. ಇದೀಗ ಒಟ್ಟು 224 ಸ್ಥಾನಗಳಲ್ಲೂ ಹೇಳಿಕೆ ಕಾರ್ಯ ಪ್ರಗತಿ ಕಾಣುತ್ತಿದ್ದು ಬಿಜೆಪಿಯು ಒಟ್ಟು 97 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

 

ಕಾಂಗ್ರೆಸ್ 103 ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದೆ ಜೆಡಿಎಸ್ 20 ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸುತ್ತಿದೆ. ಇತರರು ಐದು ಕ್ಷೇತ್ರಗಳಲ್ಲಿ ತಮ್ಮ ಚಾಲಾಕಿತನ ತೋರಿಸುತ್ತಿದ್ದಾರೆ.

ಸದ್ಯದ ಫಲಿತಾಂಶಗಳ ಆಧಾರದ ಮೇಲೆ ಕರ್ನಾಟಕದ 2023 ನೇ ವಿಧಾನಸಭಾ ಚುನಾವಣೆಯು ಅತಂತ್ರ ವಿಧಾನಸಭೆಯತ್ತ ಸಾಗುತ್ತಿದೆ.

ಯಶವಂತಪುರದಲ್ಲಿ ಬಿಜೆಪಿಯ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಹಿನ್ನಡೆ. ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ಹಿನ್ನಡೆ. ಮೂರನೇ ಸುತ್ತಿನಲ್ಲೂ ಕುಮಾರಸ್ವಾಮಿಯವರಿಗೆ ಹಿನ್ನಡೆಯಾಗಿದೆ. ಅದೇ ಪಕ್ಕದ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಮೂರನೇ ಸುತ್ತಿನಲ್ಲೂ ನಿರಂತರ ಮುನ್ನಡೆ ಬಂದಿದೆ. ಯಮಕರನಹಳ್ಳಿಯಲ್ಲಿ ಸತೀಶ್ ಜಾರಕಿಹೊಳಿಗೆ ಮುನ್ನಡೆ.

ಹೊಳೆನರಸೀಪುರದಲ್ಲಿ ರೇವಣ್ಣ ಮುನ್ನಡೆ, ಕಡೂರಿನಲ್ಲಿ ಜೆಡಿಎಸ್ ನ y s ದತ್ತ ಮುನ್ನಡೆ, ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್ನ ಕೆ ವೆಂಕಟೇಶ್ ಮುನ್ನಡೆ, ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾಕ್ಟರ್ ಸುಧಾಕರ್ ಗೆ ಹಿನ್ನಡೆ, ಸಕಲೇಶಪುರದಲ್ಲಿ ಬಿಜೆಪಿಯ ಸಿಮೆಂಟ್ ಮಂಜು ಮುನ್ನಡೆ. ಸಾಗರದಲ್ಲಿ ಬಿಜೆಪಿಯ ಹಾಲಪ್ಪ ಮುನ್ನಡೆ.

ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಮುನ್ನಡೆ ಸೊರಬದಲ್ಲಿ ಕಾಂಗ್ರೆಸ್ನ ಮಧುರ ಬಂಗಾರಪ್ಪ ಮುನ್ನಡೆ. ವರುಣಾದಲ್ಲಿ ಸಿದ್ದರಾಮಯ್ಯನವರಿಗೆ ಮುನ್ನಡೆ, ಸೋಮಣ್ಣ ಅವರಿಗೆ ವರುಣ ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿ ಹಿನ್ನಡೆ.

ಬಳ್ಳಾರಿಯ 5 ಕ್ಷೇತ್ರಗಳಲ್ಲೂ. ಕಾಂಗ್ರೆಸ್ ಮುನ್ನಡೆ.

Leave A Reply

Your email address will not be published.