Election First update: ಮೊದಲ ಹಂತದ ಎಣಿಕೆ ಪ್ರಗತಿಯಲ್ಲಿ, ಕಾಂಗ್ರೆಸ್ ಬಿಜೆಪಿ ಬಿರುಸಿನ ಸ್ಪರ್ಧೆಯಲ್ಲಿ – 50:50 ತುರುಸಿನ ಸ್ಪರ್ಧೆ !

Share the Article

ಭಾರೀ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಮತ್ತು ನಾಗರಿಕರ ಮತಗಳ ಎಣಿಕೆ ಕಾರ್ಯ ನಡೆದಿದ್ದು ಒಟ್ಟು 87 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 95 ಜೆಡಿಎಸ್ 17 ಮತ್ತು ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹಾಸನದಲ್ಲಿ ಜೆಡಿಎಸ್ ನ ಸ್ವರೂಪ ಅವರು 262 ಮತಗಳ ಮುನ್ನಡೆ ಸಾಧಿಸಿದ್ದಾರೆ.

ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುನ್ನಡೆ ಸಾಧಿಸಿದ್ದಾರೆ. ಸೊರಬ ಮತ್ತು ಭದ್ರಾವತಿಯಲ್ಲಿ ಕಾಂಗ್ರೆಸ್ ಮುನ್ನಡೆ.

ಕನಕಪುರದಲ್ಲಿ ಡಿಕೆ ಶಿವಕುಮಾರ್ ಚೆನ್ನಪಟ್ಟಣದಲ್ಲಿ ಕುಮಾರಸ್ವಾಮಿ, ಶಿಗ್ಗಾವಿಯಲ್ಲಿ ಬಸವರಾಜ್ ಬೊಮ್ಮಾಯಿ, ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ.

ಕಾರ್ಕಳದಲ್ಲಿ ಸುನಿಲ್ ಕುಮಾರ್ ಪ್ರಾರಂಭಿಕ ಮುನ್ನಡೆ ಸಾಧಿಸಿದ್ದಾರೆ. ಪುತ್ತೂರಿನಲ್ಲಿ ಅಶೋಕ್ ಕುಮಾರ್ಅರ್ ರೈ ಅವರು ಮುನ್ನಡೆ ಸಾಧಿಸಿದ್ದಾರೆ. ಉಡುಪಿಯ ಕಾಪು ಕ್ಷೇತ್ರದಲ್ಲಿ ವಿನಯ್ ಕುಮಾರ್ ಸೊರಕೆ ಮುನ್ನಡೆ ಸಾಧಿಸಿದ್ದಾರೆ.

ಯಡಿಯೂರಪ್ಪನವರ ಕ್ಷೇತ್ರದಲ್ಲಿ ಶಿಕಾರಿಪುರದಲ್ಲಿ ಬಿಜೆಪಿಯ ವಿಜಯೇಂದ್ರ ಗೆ ಮುನ್ನಡೆ. ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಗೆ ಹಿನ್ನಡೆ.

ಮಹದೇವಪುರದಲ್ಲಿ ಮಂಜುಳಾ ಲಿಂಬಾವಳಿ ಮುನ್ನಡೆ. ಹೊಳೆ ನರಸೀಪುರದಲ್ಲಿ ರೇವನ್ನಾಗೆ ಹಿನ್ನೆಡೆ. ಹಿರೇಕೆರೂರಿನಲ್ಲಿ ಬಿಸಿ ಪಾಟೀಲ್ ಮುನ್ನಡೆ. ಚಾಮರಾಜಪೇಟೆಯಲ್ಲಿ ಜಮೀರ್ ಗೆ ಹಿನ್ನಡೆ. ಬೆಂಗಳೂರಿನಲ್ಲಿ ಚಾಮರಾಜಪೇಟೆಯಲ್ಲಿ ಜಮೀರ್ ಎದುರು ಭಾಸ್ಕರ್ ರಾವ್ ಗೆ ಮುನ್ನಡೆ.

Leave A Reply