Karnataka Election: ನನಗೆ ಯಾವುದೇ ಬೇಡಿಕೆ ಇಲ್ಲ-ಕುಮಾರಸ್ವಾಮಿ ಹೊಸ ಹೇಳಿಕೆ

HD Kumaraswamy: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಕ್ಕೆ ಇನ್ನೇನು ಕೆಲವು ಗಂಟೆಗಳು ಬಾಕಿ ಇದ್ದು, ಎಲ್ಲರ ಗಮನ ಫಲಿತಾಂಶದ ಮೇಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, 2,615 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸದ್ಯ ನಾಯಕರೆಲ್ಲರೂ ಫಲಿತಾಂಶದ ನಿರೀಕ್ಷೆಯಲಿದ್ದಾರೆ.

ಈ ನಡುವೆ ಸುದ್ದಿಸಂಸ್ಥೆಗಳೊಂದಿಗೆ ಮಾತನಾಡಿದ ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಸರ್ಕಾರ ರಚನೆಗೆ ಸಂಬಂಧಿಸಿ, ನಮ್ಮದು ಸಣ್ಣ ಪಕ್ಷ, ನನಗೆ ಯಾವುದೇ ಬೇಡಿಕೆ ಇಲ್ಲ; ಸರ್ಕಾರ ರಚನೆ ಹಿನ್ನೆಲೆಯಲ್ಲಿ ನನ್ನನ್ನು ಯಾರೂ ಸಂಪರ್ಕಿಸಿಲ್ಲʼ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಮತ ಎಣಿಕೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ʼಜೆಡಿಎಸ್‌ಗೆ ಸುಮಾರು 30-32 ಸ್ಥಾನಗಳು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಬಹುಮತ ಎಂದು ಭವಿಷ್ಯ ನುಡಿದಿರುವ ಎಕ್ಸಿಟ್ ಪೋಲ್‌ಗಳನ್ನು ಉಲ್ಲೇಖಿಸಿ ʼಕೆಲವರು ಹಳೆಯ ಪಕ್ಷಕ್ಕೆ ಬಹುಮತದ ಮುನ್ಸೂಚನೆಯನ್ನು ಸಹ ನೀಡಿದ್ದಾರೆ. ಆದರೆ ಭವಿಷ್ಯವಾಣಿಗಳನ್ನು ನಂಬಲು ಆಗುವುದಿಲ್ಲʼ ಎಂದಿದ್ದಾರೆ. ʼಮುಂದಿನ 2-3 ಗಂಟೆಗಳಲ್ಲಿ ಇದು ಸ್ಪಷ್ಟವಾಗಲಿದೆ. ಎಕ್ಸಿಟ್ ಪೋಲ್‌ಗಳು ಎರಡು ರಾಷ್ಟ್ರೀಯ ಪಕ್ಷಗಳು ಬಹುಮತ ಪಡೆಯಲಿವೆ ಎಂದು ತೋರಿಸುತ್ತವೆ.

ಈಗಾಗಲೇ ಸಮೀಕ್ಷೆಗಳು ಜೆಡಿಎಸ್‌ಗೆ 30-32 ಸ್ಥಾನಗಳನ್ನು ನೀಡಿವೆ. ನಮ್ಮದು ಸಣ್ಣ ಪಕ್ಷ. ನನಗೆ ಯಾವುದೇ ಬೇಡಿಕೆಯಿಲ್ಲ…ಒಳ್ಳೆಯ ಬೆಳವಣಿಗೆಯ ನಿರೀಕ್ಷೆಯಲ್ಲಿದ್ದೇನೆʼ ಎಂದು ಅವರು ಹೇಳಿದರು. ಅದಲ್ಲದೆ ʼಇಲ್ಲಿಯವರೆಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಮೊದಲು ಅಂತಿಮ ಫಲಿತಾಂಶ ಆಧಾರದ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ ಎಂದಿದ್ದಾರೆ.

Leave A Reply

Your email address will not be published.