Electricity price hike: ಚುನಾವಣಾ ಫಲಿತಾಂಶಕ್ಕೂ ಮೊದಲೇ ರಾಜ್ಯದ ಜನತೆಗೆ ಕರೆಂಟ್‌ ಶಾಕ್‌! ಮತದಾನ ಮುಗಿದ ಕೂಡಲೇ ಉಲ್ಟಾ ಹೊಡೆದ ಗೌರ್ಮೆಂಟ್!

ಇಂದು ವಿಧಾನಸಭಾ ಚುನಾವಣೆಯ(Assembly Election) ಫಲಿತಾಂಶ(Result) ಹೊರ ಬೀಳಲಿದೆ. ಆದರೆ ಎಲೆಕ್ಷನ್ ರಿಸಲ್ಟ್‌ನ ಹಿಂದಿನ ದಿನ ರಾಜ್ಯದ ಜನರಿಗೆ ಶಾಕಿಂಗ್ ಸುದ್ದಿಯೊಂದು ಬಂದಿದೆ.

 

ಹೌದು, ರಾಜ್ಯದಲ್ಲಿ ಪ್ರತಿ ಯೂನಿಟ್(Unit) ವಿದ್ಯುತ್‌ಗೆ(Current) 70 ಪೈಸೆ ಏರಿಕೆ ಮಾಡಿ, ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆಯ ಬರೆ ಎಳೆಯಲಾಗಿದೆ. ಈ ಹಿಂದೆ ಪ್ರತಿ ಯೂನಿಟ್ ವಿದ್ಯುತ್‌ಗೆ 140 ಪೈಸೆ ಏರಿಕೆಗೆ ಎಸ್ಕಾಂ ಸಂಸ್ಥೆ ಮನವಿ ಮಾಡಿತ್ತು. ಆದರೆ ಪ್ರತಿ ಯೂನಿಟ್ ವಿದ್ಯುತ್‌ಗೆ 70 ಪೈಸೆ ಏರಿಕೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಒಪ್ಪಿಗೆ ನೀಡಿದೆ. ಏಪ್ರಿಲ್ 1, 2023ರಿಂದ ಅನ್ವಯ ಆಗುವಂತೆ ನೂತನ ದರ ಏರಿಕೆ ಮಾಡುವುದಾಗಿ KERC ಹೇಳಿದೆ.

ಅಂದಹಾಗೆ ಚುನಾವಣಾ ಪ್ರಚಾರದ ಮಧ್ಯೆ ವಿವಿಧ ಪಕ್ಷಗಳು ಮತದಾರರಿಗೆ ಹಲವು ಭರವಸೆಗಳನ್ನ ಕೊಟ್ಟಿದ್ದರು. ಪ್ರಮುಖವಾಗಿ ಕಾಂಗ್ರೆಸ್ ನಾಯಕರು 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರಂಟಿಯನ್ನೇ ಕೊಟ್ಟಿದ್ದಾರೆ. ಆದರೆ ಈ ಎಲ್ಲಾ ಭರವಸೆಗಳ ನಡುವೆ ಮತದಾನ ಪ್ರಕ್ರಿಯೆ ಆದ ಕೂಡಲೇ ಸರ್ಕಾರ ಈ ತೀರ್ಮಾನ ಮಾಡಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಅಲ್ಲದೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರ(congress Government) ಬಂದರೆ ನಾವು ಈ ತಿಂಗಳು ನಮ್ಮ ಮನೆಯ ಕರೆಂಟ್ ಬಿಲ್ ಕಟ್ಟೋದಾ ಬೇಡ್ವಾ ಅಂತಾನೇ ಹಲವಾರು ಜನ ಪ್ರಶ್ನೆ ಮಾಡುತ್ತಿದ್ದಾರೆ.

Leave A Reply

Your email address will not be published.