ಬೆಳಗಾವಿಯಲ್ಲಿ ಶೀಘ್ರ ಫಲಿತಾಂಶ ನೀಡಲು ಖತರ್ನಾಕ್‌ ಐಡಿಯಾ : ಕಾಲಿಗೆ ಮೊಬೈಲ್‌ ಕಟ್ಟಿಕೊಂಡು ಬಂದ ಭೂಪ

Share the Article

ಬೆಳಗಾವಿ: ವಿಧಾನಸಭಾ ಚುನಾವಣೆ ಫಲಿತಾಂಶವನ್ನು ಬಹುಬೇಗನೆ ನೀಡಲು ಕಾಲಿಗೆ ಮೊಬೈಲ್‌ ಕಟ್ಟಿಕೊಂಡು ಮತಎಣಿಕಾ ಕೇಂದ್ರಕ್ಕೆ ಪಕ್ಷದ ಏಜೆಂಟ್‌ ಎಂಟ್ರಿ ಕೊಟ್ಟ ಬೆಳಗಾವಿಯಲ್ಲಿ ನಡೆದಿದೆ.

ಮೇ 10ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಇಂದು ಫಲಿತಾಂಶ ಇಂದು ಹೊರಬೀಳಲಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳಿಂದಲೂ ಬಹುಬೇಗನೆ ಫಲಿತಾಂಶವನ್ನು ನೀಡಲು ರಾಜಕೀಯ ಪಕ್ಷದ ಏಜೆಂಟ್‌ ಮುಂದಾಗಿದ್ದು, ಬೆಳ್ಳಂಬೆಳಗ್ಗೆ ಪೊಲೀಸರಿಗೆ ಅಥಿತಿಯಾಗಿದ್ದಾನೆ.
ಈತ ಜನಸಮಾನ್ಯರಂತೆ ಮತಎಣಿಕಾ ಕೇಂದ್ರ ಆಗಮಿಸಿದ್ದು, ಆತನನ್ನು ಪೊಲೀಸರ ಗಮನಿಸಿದಾಗ ಆತ ಕಾಲಿಗೆ ಮೊಬೈಲ್‌ವೊಂದನ್ನು ಕಟ್ಟಿದ್ದು ಮತ ಎಣಿಕೆಯ ಫಲಿತಾಂಶವನ್ನು ಲೈವ್‌ ಮಾಹಿತಿಕೊಡಲು ಖತರ್ನಾಕ್‌ ಐಡಿಯಾ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರ ನಡೆಸಿದ್ದಾರೆ. ಬಳಿ ಆತನನ್ನು ಮತ ಎಣಿಕಾ ಕೇಂದ್ರದಿಂದ ಹೊರಗೆ ಕಳುಹಿಸಲಾಗಿದೆ ಎಂದು ತಿಳಿಯಲಾಗಿದೆ.

Leave A Reply