Vastu Tips: ದಕ್ಷಿಣ ದಿಕ್ಕಿನ ಬಾಗಿಲಿನ ಬಗ್ಗೆ ಶಾಸ್ತ್ರ ಏನು ಹೇಳುತ್ತೆ! ಇಲ್ಲಿದೆ ಮಾಹಿತಿ
Vastu Tips What Shastra Says About South Facing Door
Vastu Tips: ನಾವು ವಾಸ್ತುವನ್ನು ಗಮನಿಸಿದೇ ಮನೆಯನ್ನು ಖರೀದಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗುತ್ತದೆ. ಹಾಗಾಗಿ ಯಾವಾಗಲೂ ಮನೆಕಟ್ಟುವಾಗ ಮತ್ತು ಖರೀದಿ ಮಾಡುವಾಗ ವಾಸ್ತು ನೋಡುವುದು ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದು ದಿಕ್ಕು ಬೇರೆ ಬೇರೆ ದೇವತೆಗಳ ಆಧೀನದಲ್ಲಿರುತ್ತದೆ. ಪ್ರತಿ ದಿಕ್ಕಿನ ಚಿಹ್ನೆಗಳು, ಗ್ರಹಗಳು, ಅಂಶಗಳು ಮತ್ತು ವಿವಿಧ ಬಣ್ಣಗಳನ್ನು ಸಹ ವಾಸ್ತುಶಾಸ್ತ್ರದಲ್ಲಿ (Vastu Tips) ಉಲ್ಲೇಖಸಿದೆ.
ಮನೆ ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ, ಅದು ನಿಮ್ಮ ಕನಸು (Dream). ಕಷ್ಟಪಟ್ಟು ದುಡಿದ ಹಣದಲ್ಲಿ (Money) ಖರೀದಿಸಿದ ಮನೆ ನಮಗೆ ನೆಮ್ಮದಿ ನೀಡದಿದ್ದರೆ, ಬೆವರು ಸುರಿಸಿ ದುಡಿದ ಹಣವೆಲ್ಲಾ ವ್ಯರ್ಥವಾಗುತ್ತದೆ. ಮನೆಯಲ್ಲಿ ವಾಸ್ತುದೋಷದಿಂದಾಗಿ ನೆಗೆಟಿವ್ ಎನರ್ಜಿ ಮನೆಯನ್ನು ಪ್ರವೇಶಿಸುತ್ತದೆ. ಇದರ ಪರಿಣಾಮವಾಗಿ ಮನೆಯಲ್ಲಿ ಕಿರಿಕಿರಿ, ಆರ್ಥಿಕ ನಷ್ಟ, ಆರೋಗ್ಯದ ಸಮಸ್ಯೆಗಳು ಉಂಟಾಗುತ್ತದೆ. ಮನೆಯ ಶಾಂತಿ ಹಾಳಾಗುತ್ತದೆ.
ಮನೆಯ ವಾಸ್ತು ವಿಚಾರಕ್ಕೆ ಬಂದರೆ ಮುಖ್ಯವಾಗಿ ಮುಖ್ಯ ದ್ವಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರಿಗೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಬಾಗಿಲಿರುವ ಮನೆಯೇ
ದೊರೆಯುವುದಿಲ್ಲ. ಹಾಗಂತ, ದಕ್ಷಿಣ ದಿಕ್ಕಿನ ಬಾಗಿಲು ಕೆಟ್ಟದ್ದು ಎಂಬ ಮಾತಿಗೆ ಸೂಕ್ತ ಆಧಾರವಿಲ್ಲ.
ಸಾಮಾನ್ಯವಾಗಿ ಕನ್ಯಾ, ಮಿಥುನ ಮತ್ತು ಮಕರ ರಾಶಿಗಳಲ್ಲಿ ಜನಿಸಿರುವವರು ದಕ್ಷಿಣ ದಿಕ್ಕಿನ ಬಾಗಿಲನ್ನು ಆಯ್ಕೆ ಮಾಡಿಕೊಳ್ಳಬಹುದು.
ಇನ್ನು ಜನ್ಮ ಕುಂಡಲಿಯಲ್ಲಿ ಸೂರ್ಯನು ವೃಷಭ, ಮೇಷ ಮತ್ತು ತುಲಾ ರಾಶಿಗಳಲ್ಲಿ ಇದ್ದಲ್ಲಿ ದಕ್ಷಿಣ ದಿಕ್ಕಿನ ಬಾಗಿಲನ್ನು ಆಯ್ಕೆ ಮಾಡಬಹುದು. ಅಥವಾ ಮಾರ್ಗಶಿರ, ಪುಷ್ಯ ಮತ್ತು ಮಾಘ ಮಾಸದಲ್ಲಿ ದಕ್ಷಿಣದ ಬಾಗಿಲಿರುವ ಮನೆಯನ್ನು ಆಯ್ಕೆ ಮಾಡಬಹುದು.
ವಾಸ್ತು ಶಾಸ್ತ್ರದ ಪ್ರಕಾರ, ಯಮ ದಕ್ಷಿಣ ದಿಕ್ಕಿನ ಅಧಿಪತಿ ಮತ್ತು ಈ ದಿಕ್ಕಿನ ಗ್ರಹ ಮಂಗಳ, ಕೆಲವರಿಗೆ ಈ ಮಂಗಳಗ್ರಹ ಒಳ್ಳೆಯದಲ್ಲ. ಇದರಿಂದ ದಕ್ಷಿಣ ಮುಖವಾಗಿ ಬಾಗಿಲು ಇದ್ದರೆ ಮನೆಯವರಿಗೆ ಕೆಲವು ಆರ್ಥಿಕ ಮತ್ತು ಆರೋಗ್ಯದ ಸಮಸ್ಯೆಗಳು ನಿರಂತರವಾಗಿ ಕಾಡುತ್ತದೆ.
ಒಂದು ವೇಳೆ ಅನಿವಾರ್ಯವಾಗಿ ದಕ್ಷಿಣದ ದಿಕ್ಕಿಗೆ ಬಾಗಿಲು ಇರುವ ಮನೆಗೆ ಹೋಗಿ ನೆಲೆಸಬೇಕಾಗಿ ಬಂದಲ್ಲಿ ಈ ಕೆಳಕಂಡ ಪರಿಹಾರಗಳನ್ನು ಅನುಸರಿಸಬೇಕು.
ಮುಖ್ಯ ದ್ವಾರದ ಒಳ ಮತ್ತು ಹೊರ ಬಾಗಿಲಿಗೆ ಕೇಸರಿ ಬಣ್ಣದ ಓಮ್ ಅಥವಾ ಸ್ವಸ್ತಿಕ್ ಚಿಹ್ನೆಯ ಸ್ಟಿಕ್ಕರ್‌ಗಳು ಅಥವಾ ಪೇಂಟಿಂಗ್‌ಗಳನ್ನು ಬಳಸಿ. ಬಾಗಿಲಿಗೆ ಹಳದಿ ಬಣ್ಣದ ಲೇಪಿಸಿ. ಮನೆಯನ್ನು ಪ್ರವೇಶಿಸಿದ ತಕ್ಷಣ ಎಲ್ಲರಿಗೂಕಾಣುವಂತೆ ಹಸಿರು ಬಣ್ಣದ ಗಿಡವನ್ನು ಇಡಿ, ಗಿಡವು ಒಣಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಮುಂಬಾಗಿಲ ಎದುರು ಗೋಡೆಯಲ್ಲಿ ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋ ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಿ.
ಇನ್ನು ಮನೆಯ ಹೊರಗಿನ ಬಲಭಾಗದಲ್ಲಿ ಪಂಚಮುಖಿ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ.
ಮನೆಯ ಮಧ್ಯ ಭಾಗದಲ್ಲಿ ಶಬ್ದ ಮಾಡುವ ಗಂಟೆಯನ್ನು ಸ್ಥಾಪಿಸಿ.
ದಕ್ಷಿಣದ ಗೋಡೆಗೆ ಕಾಮಧೇನುವಿನ ಭಾವಚಿತ್ರವನ್ನು ಅಳವಡಿಸಿ, ಇವಿಷ್ಟು ವಾಸ್ತುವನ್ನು ನೀವು ಅನುಸರಿಸಿದರೆ ಮನೆಯಲ್ಲಿ ಖಂಡಿತ ಸಕಲ ಸುಖ ಸಂತೋಷ ನೆಲೆಸುವುದರಲ್ಲಿ ಸಂಶಯ ಇಲ್ಲ.
ಇನ್ನು ದಕ್ಷಿಣ ದಿಕ್ಕಿನ ಮನೆಗೆ ವಾಸ್ತು ಪ್ರಕಾರ ಮನೆಯ ಮಧ್ಯದ ಎಡಭಾಗದಲ್ಲಿ ಬಾಗಿಲು ಇದ್ದರೆ ಉತ್ತಮ ಎಂದು ಹೇಳಲಾಗುತ್ತದೆ.
ಇದನ್ನು ಓದಿ: Dowry: ಬೈಕ್ ವರದಕ್ಷಿಣೆ ಕೇಳಿದ ಮಗನಿಗೆ ಸಾಕು ಸಾಕು ಅನ್ನುವಷ್ಟು ಥಳಿಸಿದ ತಂದೆ!