Vaginal reconstruction surgery: ಯೋನಿ ಬೆಳವಣಿಗೆಯಾಗದ ಯುವತಿಗೆ 23 ವರ್ಷ ನಂತರ ಯಶಸ್ವಿ ಶಸ್ತ್ರಚಿಕಿತ್ಸೆ!

Vaginal reconstruction surgery on 23 yearl old in Bengaluru

Vaginal reconstruction surgery: ಅಪರೂಪದ ಅನುವಂಶಿಕ ಕಾಯಿಲೆಯಾದ “ವೃಷಣ ಫೆಮಿನೈಸೇಶನ್ ಸಿಂಡ್ರೋಮ್”(Testicular feminization syndrome) ನಿಂದ ಬಳಲುತ್ತಿದ್ದ 23 ವರ್ಷದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡವು ಇದೇ ಮೊದಲ ಬಾರಿಗೆ “ಯೋನಿ ಪುನರ್ ನಿರ್ಮಾಣದ ಶಸ್ತ್ರಚಿಕಿತ್ಸೆ”( vaginal reconstruction surgery)ಯನ್ನು ನಡೆಸಿ ಯಶಸ್ವಿಯಾಗಿದ್ದಾರೆ.

ಹೌದು, ಬೆಂಗಳೂರಿ(Benglore) ನ ನಿವಾಸಿಯಾದ ಹುಡುಗಿಯೊಬ್ಬಳು 17 ವರ್ಷಗಳ ನಂತರ, ಅಂದರೆ ತನ್ನ 23 ನೇ ವಯಸ್ಸಿನಲ್ಲಿ, ಆಕೆ ಶಸ್ತ್ರಚಿಕಿತ್ಸೆ ಮೂಲಕ ಯೋನಿಯನ್ನು ಪಡೆದುಕೊಂಡಿದ್ದಾಳೆ.

ಈ ಹುಡುಗಿಗೆ ತನ್ನ 6 ನೇ ವಯಸ್ಸಿನಲ್ಲಿ, ತನಗೆ ಅಪರೂಪದ ಅನುವಂಶಿಕ ಅಸ್ವಸ್ಥತೆ ಇದೆ ಎಂದು ತಿಳಿದುಬಂದಿದೆ. ಅದು, ಆಕೆಯ ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಆಕೆಯ ಹೊಟ್ಟೆಯಲ್ಲಿ ಒಂದು ಜೋಡಿ ವೃಷಣಗಳು ಬೆಳೆದಿದ್ದರೂ ಯೋನಿ ಬೆಳವಣಿಗೆಯಾಗಿರಲಿಲ್ಲ. ಇನ್ನೊಂದೆಡೆ, 17 ವರ್ಷ ವಯಸ್ಸಿನಿಂದಲೂ ಮುಟ್ಟಿನ ಅವಧಿಗಳ ಅನುಪಸ್ಥಿತಿಯನ್ನು ಈಕೆ ಅನುಭವಿಸಿದ್ದಳು. ಬಳಿಕ, ಸಂಪೂರ್ಣ ತನಿಖೆಯಲ್ಲಿ ಆಕೆಯ ಹೊಟ್ಟೆಯಲ್ಲಿ ವೃಷಣಗಳು ಕಂಡುಬಂದಿವೆ ಎಂದೂ ತಿಳಿದುಬಂದಿದೆ.

ಏಪ್ರಿಲ್‌ನಲ್ಲಿ, ಈ ಯುವತಿ ತನ್ನ ಯೋನಿಯ ಪುನರ್‌ನಿರ್ಮಾಣಕ್ಕಾಗಿ ರೋಬೋಟ್‌ನ ಸಹಾಯದಿಂದ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗೆ ಒಳಗಾದಳು. ರೋಬೋಟಿಕ್ ಲ್ಯಾಪರೊಸ್ಕೋಪಿಕ್(Robotic laparoscopic) ಯೋನಿ ಪುನರ್ನಿರ್ಮಾಣವು ಇಲಿಯಲ್ ಲೂಪ್ ಅನ್ನು ಬಳಸಿದೆ.

ಅಂದಹಾಗೆ ಇಲಿಯಲ್ ಲೂಪ್ ಅಂದರೆ ಮೂತ್ರಪಿಂಡಗಳು ದೇಹದಿಂದ ಹೊರಬರಲು ಮತ್ತು ಮೂತ್ರವನ್ನು ಹೊರಹಾಕಲು ಅನುಮತಿಸುವ ಒಂದು ಸಣ್ಣ ಓಪನಿಂಗ್ ಆಗಿದೆ. ಅವಳ ಕರುಳಿನಿಂದ ಒಂದು ಸಣ್ಣ ತುಂಡು ಅಂಗಾಂಶವನ್ನು ತೆಗೆದುಕೊಂಡು ಯೋನಿ ಒಳಪದರವನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಆಕೆ ಜೀವನಪರ್ಯಂತ ಹಾರ್ಮೋನ್ ರೀಪ್ಲೇಸ್‌ಮೆಂಟ್ ಥೆರಪಿಯನ್ನು ತೆಗೆದುಕೊಳ್ಳುತ್ತಿದ್ದಾಳೆ.

ಅಂದಹಾಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಈ ಕುರಿತು ಮಾತನಾಡಿ “ಆಂಡ್ರೋಜೆನ್‌ ಇನ್ಸೆನ್ಸಿಟಿವಿಟಿ ಸಿಂಡ್ರೋಮ್ (AIS) ಎಂದೂ ಕರೆಯಲ್ಪಡುವ ವೃಷಣ ಫೆಮಿನೈಸೇಶನ್ ಸಿಂಡ್ರೋಮ್ ಅಪರೂಪದ, ಅನುವಂಶಿಕ, ಲೈಂಗಿಕ ಬೆಳವಣಿಗೆಯ ಅಸ್ವಸ್ಥತೆಯಾಗಿದ್ದು, ಇದು 10,000 ಜನರಲ್ಲಿ 1 ಜನರ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಕಾಯಿಲೆಯಿಂದ ಆಕೆಯು ಹೆಣ್ಣಾಗಿದ್ದರೂ, ಗಂಡಿನ ಚಹರೆ ಹಾಗೂ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಆದರೆ, ಲೈಂಗಿಕ ಭಾವದಲ್ಲಿ ಪುರುಷರ ಲೈಂಗಿಕ ಆಸಕ್ತಿಯನ್ನು ಒಳಗೊಂಡಿರುವುದಿಲ್ಲ. ಇಂತಹ ಸಮಸ್ಯೆ ಹೊಂದಿರುವ ಮಹಿಳೆಯರು ಚಿಕ್ಕದಾದ ಅಥವಾ ಮುಚ್ಚಿದ ಯೋನಿಯನ್ನು ಹೊಂದಿರುತ್ತಾರೆ” ಎಂದು ಹೇಳಿದ್ದಾರೆ.

ಇನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳ ಹಿರಿಯ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ(Dr. Keshav murthy) ಮಾತನಾಡಿ “XY ಕ್ರೋಮೋಸೋಮ್ ಹೊಂದಿರುವ ವ್ಯಕ್ತಿಗಳಲ್ಲಿ ಈ ಅಸ್ವಸ್ಥತೆ ಕಂಡುಬಂದಿದೆ. AIS ಅನ್ನು ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಪತ್ತೆಮಾಡಲಾಗುತ್ತದೆ, ಒಂದು ಹುಡುಗಿ ಋತುಚಕ್ರವನ್ನು ಪ್ರಾರಂಭಿಸದಾಗ ಇದು ಪತ್ತೆಯಾಗುತ್ತದೆ. ಮತ್ತು AIS ಹೊಂದಿರುವ ಅನೇಕ ಹುಡುಗಿಯರು ಪ್ಯೂಬಿಕ್‌ ಅಥವಾ ಆರ್ಮ್‌ಪಿಟ್‌ ಕೂದಲನ್ನು ಹೊಂದಿಲ್ಲ, ಮಕ್ಕಳನ್ನು ಹೆರಲು ಸಾಧ್ಯವಿಲ್ಲ ಮತ್ತು ಹಾರ್ಮೋನ್ ರೀಪ್ಲೇಸ್ಮೆಂಟ್ ಥೆರಪಿ ಇಲ್ಲದೆ ಆಸ್ಟಿಯೋಪೋರೋಸಿಸ್‌ಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:Elon Musk : ಟ್ವಿಟರ್ ಸಿಇಓ ಸ್ಥಾನಕ್ಕೆ ಎಲಾನ್ ಮಸ್ಕ್ ರಾಜಿನಾಮೆ!! ಮುಂದಿನ ಸಿಇಓ ಯಾರು ಗೊತ್ತಾ?

Leave A Reply

Your email address will not be published.