Police Case: ತನ್ನ 6 ವರ್ಷದ ಮಗುವಿನ ಕಿಡ್ನ್ಯಾಪ್ ಕೇಸ್ ದಾಖಲಿಸಿದ ಪೋಷಕರು! ಅಷ್ಟಕ್ಕೂ ಮಗು ಎಲ್ಲಿತ್ತು ಗೊತ್ತಾ?

Police Case: The parents who filed a kidnapping case of their 6-year-old child

Police case: ಹೆತ್ತವರು ಮಗು ಒಂದು ಕ್ಷಣ ಕಣ್ಣು ತಪ್ಪದಂತೆ ಗಮನವಹಿಸುತ್ತಲೇ ಇರುತ್ತಾರೆ. ಹಾಗಿರುವಾಗ ಕಣ್ಣ ಮುಂದೆ ಆಡುತ್ತಿದ್ದ ಮಗು ಕಾಣೆ ಆದರೆ ಗಾಬರಿಗೊಲ್ಲದೆ ಇರಲು ಸಾಧ್ಯವಿಲ್ಲ. ಹಾಗೆಯೇ ಬೆಂಗಳೂರಿನಲ್ಲಿ ಮಗಳು ಕಿಡ್ನಾಪ್ ಆಗಿದ್ದಾಳೆಂದು ಪೋಷಕರು ಕೇಸ್ (Police case) ದಾಖಲಿಸಿದ್ದು ಪೋಷಕರ ನಿರ್ಲಕ್ಷ್ಯ ಕ್ಕೆ ಪೊಲೀಸರೇ ದಂಗಾಗಿದ್ದಾರೆ.

ಹೌದು, ಮೀನಾ ದಂಪತಿ ಮೇ 11 ರಂದು ರಾತ್ರಿ ಸುಮಾರು 7.30ರ ವೇಳೆ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ಬಂದು ತಮ್ಮ 6 ವರ್ಷದ ಮಕ್ಕಳು ಕಿಡ್ನಾಪ್ ಆಗಿದ್ದಾಳೆ ಎಂದು ದೂರು ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಕಿಡ್ನಾಪ್ ಕೇಸ್ ದಾಖಲಿಸಿಕೊಂಡ ತಕ್ಷಣ ಮಗುವಿಗಾಗಿ ಹುಡುಕಾಟ ಶುರುವಾಯಿತು. ಇದೇ ವೇಳೆ ಕಿಡ್ರಾಪ್ ಆದ ಸ್ಥಳ ಕೆ.ಆರ್.ಪುರಂ ಬಳಿಯ ಜನತಾ ಕಾಲೋನಿ ಬಳಿ ಮಗುವನ್ನು ಹುಡುಕಲು ಪೊಲೀಸರು ತೆರಳಿದ್ದ ವೇಳೆ ಮನೆಯಲ್ಲೂ ಹುಡುಕುತ್ತಾರೆ. ಆಗ ಬಟ್ಟೆ ಕೆಳಗೆ ಮಗಳು ಮಲಗಿರುವುದು ಕಂಡುಬಂದಿದೆ.

ಮಗಳು ಮಲಗಿದಾಗ ತಾಯಿ ಒಣಗಿದ ಬಟ್ಟೆಯನ್ನು ಮಗುವಿನ ಮೇಲೆ ತಂದು ಹಾಕಿದ್ದು, ಮಗು ಚೆನ್ನಾಗಿ ಮಲಗಿದ್ದ ಕಾರಣ ತಾಯಿ ಬಟ್ಟೆ ಹಾಕಿದ್ರೂ ಎಚ್ಚರವಾಗಿರಲಿಲ್ಲ. ಆದ್ದರಿಂದ ಮಗಳು ಕಾಣೆಯಾಗಿದ್ದಾಳೆ ಅಂದುಕೊಂಡು ಗಾಬರಿಯಾದ ಪೋಷಕರು ಕೇಸ್ ದಾಖಲಿಸಿದ್ದಾರೆ.

ಸದ್ಯ ಮಗು ಸಿಕ್ಕಿದ್ದಕ್ಕೆ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಪೋಷಕರ ಬೇಜವಾಬ್ದಾರಿತನಕ್ಕೆ ಪೊಲೀಸರು ಶಾಕ್ ಆಗಿದ್ದಾರೆ. ಈ ಮೂಲಕ ಪೋಷಕರಿಗೆ ಮಕ್ಕಳ ಬಗೆಗಿನ ಹೆಚ್ಚಿನ ಗಮನ ಇರುವುದು ಮುಖ್ಯ ಎಂದು ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Mosquito: ಸೊಳ್ಳೆಗಳ ಕಾಟ ಇನ್ನಿಲ್ಲ! ಇಲ್ಲಿದೆ ಸುಲಭ ಪರಿಹಾರ

Leave A Reply

Your email address will not be published.