linda yaccarino: ಟ್ವಿಟ್ಟರ್ ಸಿಇಒ ಆಗಿ ಓರ್ವ ಮಹಿಳೆ ಕೈಗೆ ಅಧಿಕಾರ ಕೊಟ್ಟ ಎಲಾನ್ ಮಸ್ಕ್ !

Linda Yacarino will be the new CEO of Twitter

linda yaccarino: ಕಳೆದ ವರ್ಷ ಅಕ್ಟೋಬರ್ 44 ರಂದು ಶತಕೋಟಿ ಡಾಲರ್‌ಗೆ ಟ್ವಿಟರ್ ಅನ್ನು ಖರೀದಿಸಿದ ಟೆಸ್ಲಾ (ಟೆಸ್ಲಾ) ಮುಖ್ಯಸ್ಥ ಎಲೋನ್ ಮಾಸ್ಕ್ (ಎಲಾನ್ ಮಸ್ಕ್) ಅವರು ಇಂದು ಬೆಳಿಗ್ಗೆ ತಾನೆ ತಮ್ಮ ಟ್ವಿಟರ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಕೆಲವೇ ಸಮಯದಲ್ಲಿ ಹೊಸ ಸಿಇಒ (ಟ್ವಿಟರ್ ಸಿಇಒ) ನೇಮಕ ಮಾಡುವುದಾಗಿ ತಿಳಿಸಿದ್ದರು. ಅಂತೆಯೇ ಇದೀಗ
ಅಂತಿಮವಾಗಿ ಟ್ವಿಟರ್‌ಗೆ ಹೊಸ ಸಿಇಒ (ಟ್ವಿಟರ್ ಸಿಇಒ) ನೇಮಕ ಮಾಡಿ, ಓರ್ವ ಮಹಿಳೆ ಕೈಗೆ ಅಧಿಕಾರ ಕೊಟ್ಟಿದ್ದಾರೆ.

 

ಹೌದು, ಟ್ವಿಟ್ಟರ್​ಗೆ ಹೊಸ ಸಿಇಒ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದ ಎಲಾನ್ ಮಸ್ಕ್ ಇದೀಗ ಕೊನೆಗೂ ಅವರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಲಿಂಡಾ ಯಾಕರಿನೊ ಅವರನ್ನು ನೂತನ ಸಿಇಒ ಆಗಿ ಸ್ವಾಗತಿಸಲು ಇಷ್ಟಪಡುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ಮಾಸ್ಕ್ ಅವರು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಟ್ವಿಟರ್‌ಗೆ ಹೊಸ ಸಿಇಒ ಹುಡುಕಲು ಯೋಜಿಸುತ್ತಿದ್ದಾರೆ ಎಂದು ಸುಮಾರು 6 ತಿಂಗಳಿನಿಂದ ಹೇಳಲಾಗಿತ್ತು. ನಾನು ಟ್ವಿಟರ್‌ನಲ್ಲಿ ನನ್ನ ಸಮಯ ಕಡಿಮೆ ಮಾಡುತ್ತೇನೆ ಮತ್ತು ಕಾಲಾನಂತರ ಟ್ವಿಟರ್ ಅನ್ನು ಚಲಾಯಿಸಲು ಬೇರೆಯವರನ್ನ ಹುಡುಕುತ್ತೇನೆ ಎಂದು ಅವರೇ ಸ್ವತಃ ಹೇಳಿದ್ದರು. ಅಂತೆಯೇ ಇದೀಗ ಟ್ವಿಟ್ಟರ್​ಗೆ ಹೊಸ ಸಿಇಒ (Twitter CEO) ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದ ಎಲಾನ್ ಮಸ್ಕ್ ಇದೀಗ ಕೊನೆಗೂ ಅವರ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರೋ ಎಲಾನ್ “ಲಿಂಡಾ (linda yaccarino) ಯಾಕರಿನೊ ಅವರನ್ನು ನೂತನ ಸಿಇಒ ಆಗಿ ಸ್ವಾಗತಿಸಲು ಇಷ್ಟಪಡುತ್ತೇನೆ. ಅವರು ಉದ್ಯಮ ನಿರ್ವಹಣೆ ಬಗ್ಗೆ ಪ್ರಮುಖವಾಗಿ ಗಮನಹರಿಸಲಿದ್ದಾರೆ. ನಾನು ಪ್ರಾಡಕ್ಟ್, ಹೊಸ ತಂತ್ರಜ್ಞಾನಗಳ ಬಗ್ಗೆ ಗಮನಹರಿಸಲಿದ್ದೇನೆ. ಆಯಪ್​ಗಾಗಿ ಅವರ ಜತೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ಅಲ್ಲದೆ ಹೊಸ ಸಿಇಒ ಸಿಕ್ಕಿದ್ದಾರೆ ಎಂದು ಮಸ್ಕ್ ಶುಕ್ರವಾರ ಬೆಳಗ್ಗೆಯೇ ಘೋಷಣೆ ಮಾಡಿದ್ದರು. ಈ ವಿಚಾರವಾಗಿ ಟ್ವೀಟ್ ಕೂಡ ಮಾಡಿದ್ದರು. ಹೊಸ ಸಿಇಒ ಒಬ್ಬ ಮಹಿಳೆ ಎಂಬುದನ್ನೂ ತಿಳಿಸಿದ್ದ ಅವರು, ಹೆಸರು ಬಹಿರಂಗಪಡಿಸಿರಲಿಲ್ಲ. ಲಿಂಡಾ ಯಾಕರಿನೊ ಅವರೇ ಟ್ವಿಟರ್​​ನ ನೂತನ ಸಿಇಒ ಆಗಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಎಲ್ಲ ವದಂತಿಗಳಿಗೆ ತೆರೆ ಬಿದ್ದಂತಾಗಿದೆ.

ವಿಶ್ವದ 2ನೇ ಶ್ರೀಮಂತ ಎನಿಸಿರೋ ಎಲಾನ್ ಮಾಸ್ಕ್ ಟ್ವಿಟರ್ ಸಿಐಒ ಆದ ನಂತರ ಹಲವು ಬದಲಾವಣೆಗಳನ್ನು ತಂದಿದ್ದರು. ಉದ್ಯೋಗ ಕಡಿತಗೊಳಿಸಿಲ್ಲದೇ, ಉದ್ಯೋಗ ಸಮಯವನ್ನು ಹೆಚ್ಚಿಸಿದ್ದರು. ಜೊತೆಗೆ ಬ್ಲೂಟಿಕ್ ಪಡೆಯಲು ಹಣ ಪಡೆಯುವ ಕ್ರಮ ಜಾರಿಗೆ ತಂದರು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Leave A Reply

Your email address will not be published.