Mosquito: ಸೊಳ್ಳೆಗಳ ಕಾಟ ಇನ್ನಿಲ್ಲ! ಇಲ್ಲಿದೆ ಸುಲಭ ಪರಿಹಾರ

Home remedies for Mosquitoes

Mosquitoes: ಸೊಳ್ಳೆ ಕಚ್ಚುವಿಕೆಯಿಂದ ಮಲೇರಿಯಾ, ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಜಿಕಾ ವೈರಸ್‌ನಂತಹ ಮಾರಕ ಕಾಯಿಲೆಗಳ ಅಪಾಯವನ್ನು ಹೊಂದಿದೆ. ಆದರೆ ಸೊಳ್ಳೆ (Mosquitoes) ಕಾಟದಿಂದ ತಪ್ಪಿಸಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ.

ಮಾರುಕಟ್ಟೆಯಲ್ಲಿ (Market) ಹಲವು ಬಗೆಯ ಸ್ಪ್ರೇಗಳು, ಸೊಳ್ಳೆ ಬತ್ತಿ, ಏನೆಲ್ಲಾ ಸೊಳ್ಳೆ ನಿವಾರಕಗಳು ಲಭ್ಯವಿವೆ. ಇದರಿಂದ ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ನಿವಾರಕದ ಬದಲಾಗಿ ನೈಸರ್ಗಿಕವಾಗಿ ಸೊಳ್ಳೆಯನ್ನು ಓಡಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ.

ನೀವು ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬೇಕಾದಲ್ಲಿ, ನಿಮ್ಮ ಮನೆಯಲ್ಲಿ ಲೆಮನ್ ಗ್ರಾಸ್ ಅಥವಾ ನಿಂಬೆ ಹುಲ್ಲನ್ನು ನೆಡಬಹುದು. ಇದರ ವಾಸನೆಯು ತುಂಬಾ ಕಟುವಾಗಿದ್ದು, ಸೊಳ್ಳೆಗಳು ಮನೆಯಿಂದ ದೂರ ಹೋಗುತ್ತವೆ.

ಇನ್ನು ನೀವು ಲ್ಯಾವೆಂಡರ್ ಸಸ್ಯವನ್ನು ಬಳಸಬಹುದು. ಮನೆಯಿಂದ ಸೊಳ್ಳೆಗಳನ್ನು ದೂರವಿಡಲು ಪುದೀನ ಸಸ್ಯವು ಸಹಾಯ ಮಾಡುತ್ತದೆ. ಸೊಳ್ಳೆ ಕಡಿತದಿಂದ ಡೆಂಗ್ಯೂ, ಮಲೇರಿಯಾದಂತಹ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಈ ಕಾರಣಕ್ಕೆ ಸೊಳ್ಳೆಗಳ ಕಾಟವನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು.

ಸೊಳ್ಳೆಗಳ ಕಾಟದಿಂದ ಪಾರಾಗಲು ಅನೇಕ ಮನೆಗಳಲ್ಲಿ ತುಳಸಿ ಗಿಡಗಳನ್ನು ನೆಡುತ್ತಾರೆ. ಇದರ ವಾಸನೆಯು ಸೊಳ್ಳೆಗಳನ್ನು ಮನೆಯಿಂದ ದೂರವಿಡುತ್ತದೆ.

ರೋಸ್ಮರಿ ಸಸ್ಯವು ನೈಸರ್ಗಿಕ ಸೊಳ್ಳೆ ನಿವಾರಕವಾಗಿದೆ. ಇದು ಸಾಮಾನ್ಯ ಸಸ್ಯವಾಗಿದ್ದು, ಅನೇಕ ಜನರು ಮಸಾಲೆ ಪದಾರ್ಥವಾಗಿಯೂ ಬಳಸುತ್ತಾರೆ. ಆದರೆ ಸೊಳ್ಳೆಗಳನ್ನು ಮನೆಯಿಂದ ದೂರವಿಡುವುದರಲ್ಲಿ ರೋಸ್ಮರಿ ಸಸ್ಯದ ಪ್ರಯೋಜನಗಳೂ ಇವೆ. ಮನೆಗಳಲ್ಲಿ ಸೊಳ್ಳೆಗಳನ್ನು ಕಡಿಮೆ ಮಾಡಲು ಇದರ ತಾಜಾ ಎಲೆಗಳು ಅದ್ಭುತವಾದ ಕಾರಣ ಆಗಿದೆ.

ಸೊಳ್ಳೆ ಓಡಿಸಲು ಮೊಳಕೆಯೊಡೆದ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಬಳಸಬಹುದು. ಏಕೆಂದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಕಾಂಡವು ಬಲವಾದ ದುರ್ವಾಸನೆಯನ್ನು ಹೊಂದಿರುತ್ತದೆ, ಇದು ಸೊಳ್ಳೆಗಳು ಮತ್ತು ಇತರ ಕೀಟಗಳನ್ನು ದೂರ ಇಡುತ್ತದೆ.

ಇದನ್ನೂ ಓದಿ:Election: ಮೇ. 13 ರಂದು ಮತದಾನ ಎಣಿಕೆ: ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ!

Leave A Reply

Your email address will not be published.