Rolex watch: 1964ರಲ್ಲಿ 7 ಸಾವಿರ ರೂ.ಗೆ ಖರೀದಿಸಿದ್ದ ವಾಚ್ ಈಗ ಎಷ್ಟು ಬೆಲೆಗೆ ಸೇಲಾಯ್ತು ಗೊತ್ತಾ? ರೊಲೆಕ್ಸ್ ವಾಚ್ ಸೇಲಾದ ಮೊತ್ತ ಕೇಳಿದ್ರೆ ಆಶ್ಚರ್ಯ ಪಡ್ತೀರಾ?!!

Are you surprised to hear the price of a rolex watch

Rolex Watch: ಇಂದು ವಾಚ್’ಗಳ (watch) ಬೆಲೆ ಬಹಳಷ್ಟು ಏರಿಕೆ ಕಂಡಿದೆ. ಆದರೆ‌ ಸುಮಾರು 60 ವರ್ಷಗಳ ಹಿಂದೆ ರೊಲೆಕ್ಸ್ ವಾಚ್ ಬೆಲೆ (Rolex Watch Price) ಎಷ್ಟಿತ್ತು ಗೊತ್ತಾ? ಇದರ ಬೆಲೆ 7 ಸಾವಿರ ರೂಪಾಯಿ ಇತ್ತು. ಇದೀಗ ಈ ವಾಚ್ ಹಾರಾಜಾಗಿದ್ದು, 7 ಸಾವಿರ ರೂಪಾಯಿಯ ವಾಚ್ ಈಗ ಎಷ್ಟು ಬೆಲೆಗೆ ಮಾರಾಟವಾಗಿದೆ ಗೊತ್ತಾ? ಈಗ ಹರಾಜಿನಲ್ಲಿ ರೊಲೆಕ್ಸ್​ ವಾಚ್ ಸೇಲಾದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!​

ರೊಲೆಕ್ಸ್​ ವಾಚ್​ (Rolex watch) ಅನ್ನು 1964ರಲ್ಲಿ 7000 ರೂ.ಗೆ ಖರೀದಿಸಲಾಗಿತ್ತು. ಇದೀಗ ಯುನೈಟೆಡ್​ ಕಿಂಗ್​ಡಮ್​ನಲ್ಲಿ (Uk) ನಡೆದ ಹರಾಜಿನಲ್ಲಿ ಈ ವಾಚ್ 41,11,692 ರೂಪಾಯಿಗೆ ಮಾರಾಟವಾಗಿದೆ ಎಂದು ಹೇಳಲಾಗಿದೆ.

ಇದು ರೊಲೆಕ್ಸ್​ ಸಬ್​ಮರಿನರ್​ ಮಾಡೆಲ್​ ವಾಚ್​ ಆಗಿದ್ದು, ಇದನ್ನು ದಿ ಡೈವರ್ಸ್​ ವಾಚ್​ ಎಂತಲೂ ಕರೆಯುತ್ತಾರೆ. ಈ ವಾಚ್ ಅನ್ನು 1963 ತಯಾರಿಸಲಾಗಿತ್ತು. 1964ರಲ್ಲಿ ಜೇನಿಯಾದ ನಾರ್‌ಫ್ಲೋಕ್‌ನ ದಿಸ್ ನಿವಾಸಿಯಾಗಿದ್ದ ಸಿಮನ್ ಬರ್ನೆಟ್ ಅವರು ಸಿಂಗಾಪುರದಲ್ಲಿ ಈ ವಾಚ್ ಅನ್ನು ಖರೀದಿ ಮಾಡಿದ್ರು. ನೌಕಾದಳದ ಅಧಿಕಾರಿಯಾಗಿದ್ದ ಅವರು ಕರ್ತವ್ಯದಲ್ಲಿದ್ದಾಗ ಈ ವಾಚ್ ಖರೀದಿ ಮಾಡಿದ್ರು. ಸಮುದ್ರದ ರಕ್ಷಣಾ ಕಾರ್ಯ ಸೇರಿದಂತೆ ಇನ್ನಿತರ ಸಮಯದಲ್ಲೂ ಅವರು ಈ ವಾಚ್ ಧರಿಸುತ್ತಿದ್ರಂತೆ.

ಇದು​ 100 ಮೀಟರ್ (330 ಅಡಿ) ಆಳದ ವಾಟರ್​ಪ್ರೂಫ್ ವಾಚ್​ ಆಗಿತ್ತು. ಪ್ರಸ್ತುತ 300 ಮೀಟರ್ (1,000 ಅಡಿ) ಆಳದವರೆಗೂ ವಾಟರ್​ಪ್ರೂಫ್​ ಸಾಮರ್ಥ್ಯ ಹೊಂದಿದೆ. ಸಿಮನ್ ಬರ್ನೆಟ್ ನೌಕಾಪಡೆಯಲ್ಲಿ ಸೇವೆ ಸಲ್ಲಿಸುವಾಗ ರಕ್ಷಣಾ ಕಾರ್ಯನಿಮಿತ್ತ ನೀರಿಗೆ ಧುಮುಕಲು ಈ ವಾಚ್​ ಅನ್ನು ಬಳಸುತ್ತಿದ್ದರು ಎನ್ನಲಾಗಿದೆ.

ಸಿಮನ್​ ಮೃತಪಟ್ಟ ಬಳಿಕ ಈ ವಾಚ್​ ಅವರ ಮಗ ಪೀಟೆ ಬರ್ನೆಟ್​ ಬಳಿಯಿತ್ತು. ಇದೀಗ ಅದನ್ನು ಯುನೈಟೆಡ್​ ಕಿಂಗ್​ಡಮ್​ನ ನಾರ್ಫೋಲ್ಕ್​ ಕೌಂಟಿಯ ಡಿಸ್​ ಪಟ್ಟಣದಲ್ಲಿ ಹರಾಜು ಹಾಕಲಾಯಿತು. ಈ ವೇಳೆ ವಾಚ್​ 41 ಲಕ್ಷ ರೂ.ಗೆ ಮಾರಾಟವಾಯಿತು.

ಸಮುದ್ರದ ಒಳಗೆ 100 ಅಡಿ ಆಳದಲ್ಲಿ ಆಗಲೀ ಅಥವಾ ಮೌಂಟ್ ಎವರೆಸ್ಟ್ ತುದಿಯಲ್ಲೇ ಆಗಲಿ ರೋಲೆಕ್ಸ್ ವಾಚ್ ಗಳು ನಿರ್ದಿಷ್ಟವಾದ ಸಮಯವನ್ನು ತೋರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ವಿಶ್ವದಲ್ಲಿ ಇಂದಿಗೂ ಕೂಡಾ ಯಂತ್ರಗಳ ಬದಲಾಗಿ ಕೈಯಿಂದ ತಯಾರಿಸಲಾಗುವ ಅಂದರೆ ಹ್ಯಾಂಡ್ ಮೇಡ್ ಅಸೆಂಬಲ್ ಮೂಲಕ ತಯಾರಾಗುವ ಏಕೈಕ ವಾಚ್ ಬ್ರಾಂಡ್ ಇದಾಗಿದೆ.

 

ಇದನ್ನೂ ಓದಿ :KPSC ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆ ಮುಂದೂಡಿಕೆ

Leave A Reply

Your email address will not be published.